ಹೈಸ್ಪೀಡ್ ಕನೆಕ್ಟಿವಿಟಿ ಕೋರಿಯೂ ತೆಪ್ಪಗಿರುವ ಐ.ಟಿ. ಕಂಪನಿಗಳು
ಬೆಂಗಳೂರು : ಅಮೆರಿಕೆಯ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಹಿನ್ನಡೆ ಬೆಂಗಳೂರಿನ ಸಾಫ್ಟ್ವೇರ್ ಹಾಗೂ ಐ.ಟಿ. ಕಂಪನಿಗಳ ಮೇಲೂ ತೀವ್ರ ಪರಿಣಾಮಬೀರಿದೆ. ಈ ಹಿಂದೆ ಹೈಸ್ಪೀಡ್ ಕನೆಕ್ಟಿವಿಟಿ ಸೌಲಭ್ಯ ನೀಡುವಂತೆ ಕೋರಿ ದೂರಸಂಪರ್ಕ ಇಲಾಖೆಗೆ ಅರ್ಜಿ ಸಲ್ಲಿಸಿದ್ದ ಕಂಪನಿಗಳು ಈಗ ಹಿಂದೆ ಸರಿದಿವೆ.
ಈ ಹಿಂದೆ 64 ಕಂಪನಿಗಳು ಹೈಸ್ಪೀಡ್ ಕನೆಕ್ಟಿವಿಟಿ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಿದ್ದವು. ಈಗ ಈ ಸೌಲಭ್ಯ ನೀಡಲು ಬೆಂಗಳೂರು ಟೆಲಿಕಾಂ ಜಿಲ್ಲೆ ಸಮರ್ಥವಾಗಿದೆಯಾದರೂ, ಆ ಸೌಲಭ್ಯ ಪಡೆಯಲು ಕಂಪನಿಗಳಿಗೆ ಆರ್ಥಿಕ ಸಾಮರ್ಥ್ಯ ಇಲ್ಲ. ಈ ಸಂಬಂಧ ಯಾವುದೇ ಕಂಪನಿಯೂ ಮುಂದೆ ಬಂದಿಲ್ಲ ಎಂದು ಕರ್ನಾಟಕ ಟೆಲಿಕಾಂ ವೃತ್ತದ ಚೀಫ್ ಜನರಲ್ ಮ್ಯಾನೇಜರ್ ಕೆ. ಪದ್ಮನಾಭನ್ ತಿಳಿಸಿದ್ದಾರೆ.
ಹೈಸ್ಪೀಡ್ ಕನೆಕ್ಟಿವಿಟಿ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿದ್ದ 64 ಕಂಪನಿಗಳ ಪೈಕಿ 14 ಕಂಪನಿಗಳು 2 ಎಂ.ಬಿ. ಸಾಮರ್ಥ್ಯದ ಹಾಗೂ 50 ಕಂಪನಿಗಳು 64 ಕೆಬಿಪಿಎಸ್ ಸಾಮರ್ಥ್ಯದ ಸೇವೆ ಬಯಸಿದ್ದವು ಎಂದ ಅವರು, ಹಾಲಿ ಬೆಂಗಳೂರಿನಲ್ಲಿ ಎರಡು ಎಂ.ಬಿ.ಯ 800 ಗ್ರಾಹಕರನ್ನು ಹಾಗೂ 64 ಕೆಬಿಪಿಎಸ್ ಸಾಮರ್ಥ್ಯದ 1400 ಗ್ರಾಹಕರನ್ನು ಮಾತ್ರ ಹೊಂದಿದೆ ಎಂದು ತಿಳಿಸಿದರು.
ರಾಜ್ಯದೆಲ್ಲೆಡೆ ಆಪ್ಟಿಕ್ ಫೈಬರ್ ಕೇಬಲ್ಸ್ ಮತ್ತು ರೇಡಿಯೋ ಸಿಸ್ಟಮ್ಸ್ ಅನ್ನು ಅಳವಡಿಸಲಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಯಾವುದೇ ಸ್ಥಳದಿಂದಲಾದರೂ, ಯಾವುದೇ ಬ್ಯಾಂಡ್ ವಿಡ್ತ್ನಲ್ಲಿ ಲೀಸ್ ಲೈನ್ ಸಂಪರ್ಕ ನೀಡಲು ಕರ್ನಾಟಕ ಟೆಲಿಕಾಂ ವೃತ್ತ ಸಿದ್ಧವಿದೆ ಎಂದು ಪದ್ಮನಾಭನ್ ಹೇಳಿದರು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications