Get Updates
Get notified of breaking news, exclusive insights, and must-see stories!

ಹುಟ್ಟಿದೆ ಪಿಂಚಣಿ ರಹಿತ ನಿವೃತ್ತ ಹಾಗೂ ಹಿರಿಯ ನಾಗರಿಕರ ಸಂಘಟನೆ

ಬೆಂಗಳೂರು : ನಿವೃತ್ತ ಹಾಗೂ ಹಿರಿಯ ನಾಗರಿಕರು ತಮ್ಮ ಆರ್ಥಿಕ ಅಭಿವೃದ್ಧಿ ಮತ್ತು ಆರೋಗ್ಯ ಸೌಲಭ್ಯಗಳಿಗಾಗಿ ಹೋರಾಡುವ ದೃಷ್ಟಿಯಿಂದ ‘ಅಖಿಲಭಾರತ ಪಿಂಚಣಿ ರಹಿತ ನಿವೃತ್ತರ ಮತ್ತು ಹಿರಿಯ ನಾಗರಿಕ ಸಂಘಟನೆ’ಯನ್ನು ಹುಟ್ಟು ಹಾಕಿದ್ದಾರೆ.

ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರದ ಸಂಸ್ಥೆಗಳಲ್ಲಿ ದುಡಿದು, ಪಿಂಚಣಿ ಸೌಲಭ್ಯವಿಲ್ಲದೆಯೇ ಅನೇಕ ಹಿರಿಯ ನಾಗರಿಕರು ನಿವೃತ್ತರಾಗಿದ್ದಾರೆ. ಕೆಲಸದ ಕೊನೆಯ ದಿನಗಳಲ್ಲಿ ಅವರ ಕೈತುಂಬ ದುಡ್ಡು ಬಂದಿರುತ್ತದೆ. ಅವುಗಳನ್ನು ಠೇವಣಿ ಇಟ್ಟು ಬಡ್ಡಿ ಹಣದಲ್ಲಿ ಹಿರಿಯ ನಾಗರಿಕರು ಜೀವಿಸುತ್ತಿದ್ದಾರೆ. ಠೇವಣಿ ಹಣದ ಬಡ್ಡಿಯನ್ನೂ ಸರಕಾರ ಕಡಿತಗೊಳಿಸಿದೆ ಎಂದು ಸಂಘಟನೆಯ ಸಂಯೋಜಕ ಅರ್ನೆಸ್ಟ್‌ ಅಬ್ರಹಾಮ್‌ ಹೇಳುತ್ತಾರೆ.

ಪಿಂಚಣಿ ರಹಿತ ನಾಗರಿಕರ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿಯೇ ಈ ಸಂಘಟನೆಯನ್ನು ಹುಟ್ಟು ಹಾಕಲಾಗಿದ್ದು , ಸಂಘಟನೆಯನ್ನು ಸೇರ ಬಯಸುವವರು ಈ ವಿಳಾಸವನ್ನು ಸಂಪರ್ಕಿಸಬಹುದು. ಅರ್ನೆಸ್ಟ್‌ ಅಬ್ರಹಾಮ್‌, 466, 5 ಬಿಎಂ, 2ನೇ ಬ್ಲಾಕ್‌, ಹೆಣ್ಣೂರು ,ಬಾಣಸವಾಡಿ ರಸ್ತೆ ಲೇ ಔಟ್‌, ಕಲ್ಯಾಣ ನಗರ, ಬೆಂಗಳೂರು. 560 043. ಫೋನ್‌ - (080) 5455160.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+