Get Updates
Get notified of breaking news, exclusive insights, and must-see stories!

ಆಗಸ್ಟ್‌ 20 ರಿಂದ ದೇಶಾದ್ಯಂತ ಪೆಟ್ರೋಲ್‌-ಡೀಸೆಲ್‌ ಬಂಕ್‌ ಬಂದ್‌

ನವದೆಹಲಿ : ಸುಮಾರು 20 ಸಾವಿರಕ್ಕೂ ಹೆಚ್ಚು ಪೆಟ್ರೋಲ್‌- ಡೀಸೆಲ್‌ ಬಂಕ್‌ಗಳು ಆಗಸ್ಟ್‌ 20 ರಿಂದ ಅನಿರ್ದಿಷ್ಟ ಕಾಲದವರೆಗೆ ದೇಶಾದ್ಯಂತ ಮುಷ್ಕರ ನಡೆಸಲು ಅಖಿಲ ಭಾರತ ಪೆಟ್ರೋಲಿಯಂ ಮಾರಾಟಗಾರರ ಒಕ್ಕೂಟ (ಎಫ್‌ಎಐಪಿಟಿ) ಕರೆ ನೀಡಿದೆ.

ಮಾರಾಟಗಾರರ ಮೇಲೆ ವಿಧಿಸಿರುವ ಪ್ರತಿಶತ 5 ರ ತೆರಿಗೆ ಸೇರಿದಂತೆ ವಿವಿಧ ಬೇಡಿಕೆ- ಒತ್ತಾಯಗಳನ್ನು ಮುಂದಿಟ್ಟು ಪೆಟ್ರೋಲ್‌- ಡೀಸೆಲ್‌ ಬಂಕ್‌ಗಳ ಬಂದ್‌ ನಡೆಸಲಾಗುವುದು. ತಮ್ಮ ಬೇಡಿಕೆಗಳು ಈಡೇರದಿದ್ದಲ್ಲಿ ಕೊಳ್ಳುವಿಕೆ ಹಾಗೂ ಮಾರಾಟವನ್ನು ನಿಲ್ಲಿಸುವ ಆಂದೋಲನವನ್ನು ಹಮ್ಮಿಕೊಳ್ಳಲಾಗುವುದು ಎಂದು ಬಂದ್‌ ಬಗ್ಗೆ ಸೋಮವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ಎಫ್‌ಎಐಪಿಟಿ ಅಧ್ಯಕ್ಷ ಅಶೋಕ್‌ ಬಧ್ವಾರ್‌ ತಿಳಿಸಿದರು.

ಡೀಲರ್‌ಗಳ ಮೇಲೆ ವಿಧಿಸಿರುವ ಸುಂಕವನ್ನು ಸರ್ಕಾರ ಪರಿಷ್ಕರಿಸಬೇಕು ಎಂದು ಒತ್ತಾಯಿಸಿದ ಅಶೋಕ್‌, ಇಂಧನ ಕಲಬೆರಕೆಯ ಆರೋಪಗಳ ಹಿನ್ನೆಲೆಯಲ್ಲಿ ತೈಲ ಕಂಪನಿಗಳು ತಾವು ಸರಬರಾಜು ಮಾಡುತ್ತಿರುವ ಇಂಧನದ ಗುಣಮಟ್ಟವನ್ನು ಮೊದಲು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಬಂಕ್‌ಗಳಲ್ಲಿ ತೈಲ ಗುಣಮಟ್ಟ ಪರೀಕ್ಷೆ ಮಾಡುವ ಉಪಕರಣಗಳನ್ನು ಅಳವಡಿಸುವ ಮೂಲಕ ಸರಬರಾಜಾಗುವ ತೈಲದ ಗುಣಮಟ್ಟವನ್ನೂ ಮಾರಾಟಗಾರರೂ ಪರೀಕ್ಷಿಸಬಹುದಾಗಿದೆ ಎಂದು ಅವರು ಹೇಳಿದರು. ಬೇಡಿಕೆಗಳನ್ನು ಈಡೇರಿಸುವಂತೆ ಕಳೆದ ಅಕ್ಟೋಬರ್‌ನಲ್ಲಿ ಹೂಡಿದ್ದ ಮುಷ್ಕರವನ್ನು, ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ರಾಮ್‌ನಾಯಕ್‌ ಅವರ ಭರವಸೆಯ ಮೇರೆಗೆ ವಾಪಸ್ಸು ಪಡೆಯಲಾಗಿತ್ತು . ಆದರೆ, ಸಚಿವರು ತಮ್ಮ ಮಾತುಗಳನ್ನು ಉಳಿಸಿಕೊಳ್ಳದ ಕಾರಣ ಮತ್ತೆ ಮುಷ್ಕರ ಅನಿವಾರ್ಯವಾಗಿದೆ ಎಂದು ಅಶೋಕ್‌ ಸ್ಪಷ್ಟಪಡಿಸಿದರು.

ಈ ನಡುವೆ ಎಫ್‌ಎಐಪಿಟಿ ನಡೆಸುತ್ತಿರುವ ಮುಷ್ಕರಕ್ಕೆ ಬೆಂಬಲ ವ್ಯಕ್ತ ಪಡಿಸಿರುವ ಅಖಿಲ ಭಾರತ ಎಲ್‌ಪಿಜಿ ಸರಬರಾಜುದಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪಿ.ಎನ್‌. ಸೇಥ್‌ ಅವರು, ತಮ್ಮ ಒಕ್ಕೂಟ ಕೂಡ ಮುಷ್ಕರದಲ್ಲಿ ಭಾಗವಹಿಸುತ್ತದೆ ಎಂದು ಹೇಳಿದ್ದಾರೆ.

(ಪಿಟಿಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+