ಐಟಿ ಕಾಯ್ದೆ ಜಾರಿದೂರವೇಕೆ ದಾರಿ?
ಬೆಂಗಳೂರು : ಕಾನೂನಾತ್ಮಕ ಅಂಶಗಳು ಹಾಗೂ ನಿಯಂತ್ರಣ ನೀತಿಗಳ ನಡುವೆ ಕಂದಕ ಇರುವುದರಿಂದಲೇ ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಜಾರಿ ವಿಳಂಬವಾಗುತ್ತಿದೆ. ಈ ಅಂತರವನ್ನು ಇಲ್ಲವಾಗಿಸಿದಲ್ಲಿ ಕಾಯ್ದೆ ಜಾರಿಗೆ ತರುವುದು ಸುಲಭವಾಗಲಿದೆ ಎಂದು ರಾಷ್ಟ್ರೀಯ ಸಾಫ್ಟ್‌ವೇರ್ ಮತ್ತು ಸರ್ವಿಸಸ್ ಕಂಪನಿಗಳ ಒಕ್ಕೂಟ (ನಾಸ್‌ಕಾಮ್) ಇ- ಕಾಮರ್ಸ್ ಕುರಿತು ಸಿದ್ಧಪಡಿಸಿರುವ ವರದಿಯಲ್ಲಿ ಹೇಳಿದೆ.
ಬೋಸ್ಟನ್ ಕನ್ಸಲ್ಟೆನ್ಸಿ ಗ್ರೂಪ್ಸ್ ಅಧ್ಯಯನ ನಡೆಸಿ ವರದಿಯನ್ನು ಸಿದ್ಧಪಡಿಸಿದೆ. ಅದರಲ್ಲಿ ಉಲ್ಲೇಖಿತವಾಗಿರುವಂತೆ,
ಕಾಯ್ದೆ ಜಾರಿಗೆ ತರುವಲ್ಲಿ ಸರ್ಕಾರದ ನಿಷ್ಕಿೃಯತೆ ಉದ್ದಿಮೆಯಲ್ಲಿ ಸ್ಪರ್ಧಾತ್ಮಕ ಮನೋಭಾವ ಕುಂದಲು ಕಾರಣವಾಗುತ್ತದೆ. ಹೀಗಾದಲ್ಲಿ ಏಷ್ಯಾದ ಇತರೆ ರಾಷ್ಟ್ರಗಳಿಗಿಂತ ಭಾರತ ಐಟಿ ಕ್ಷೇತ್ರದಲ್ಲಿ ಹಿಂದುಳಿಯುತ್ತದೆ. ಕಾಯ್ದೆ ರಚನಕಾರರ ಅಪಸ್ವರ, ಮೂಲಭೂತ ಸೌಕರ್ಯ ಕುರಿತ ಸಮಸ್ಯೆಗಳು ಹಾಗೂ ಕಾನೂನಾತ್ಮಕ ತೊಡಕುಗಳು ಮಾಹಿತಿ ತಂತ್ರಜ್ಞಾನದ ದಾಪುಗಾಲಿಗೂ ಎಡರುಗಳಾಗುತ್ತವೆ.
ಸರ್ಕಾರಕ್ಕೆ ನಾಸ್‌ಕಾಮ್ ಮೊರೆ ಕೇಳಿಸೀತೆ ?
ಸರ್ಕಾರದ ನಡೆಯ ಕಾರಣ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಪ್ರಸ್ತುತ ಅವ್ಯವಸ್ಥೆಗಳ ನಿವಾರಣೆಗೆ 10 ಅಂಶಗಳ ಪ್ರಣಾಳಿಕೆಯನ್ನೂ ನಾಸ್‌ಕಾಮ್ ಸಿದ್ಧಪಡಿಸಿದ್ದು, ಈ ವಾರ ಕೇಂದ್ರ ಸರ್ಕಾರಕ್ಕೆ ಅದನ್ನು ನೀಡಲಿದೆ. ಇವುಗಳನ್ನು ಸರ್ಕಾರ ತಲೆಗೆ ಹಾಕಿಕೊಂಡಲ್ಲಿ , 2005ರ ಹೊತ್ತಿಗೆ ಇ- ಕಾಮರ್ಸ್‌ನಲ್ಲಿ ಭಾರತ 1,950 ಶತಕೋಟಿ ರುಪಾಯಿ ವಹಿವಾಟು ನಡೆಸಲಿದೆ ಎಂಬುದು ನಾಸ್‌ಕಾಮ್ ವಾದ.
ಲೂಪ್‌ಹೋಲ್ಸ್ : ಎಷ್ಟೋ ಪ್ರಮಾಣೀಕೃತ ಸಂಸ್ಥೆಗಳು ಇ- ಕಾಮರ್ಸ್ ವ್ಯಾಪ್ತಿಗೆ ಸೇರಿಲ್ಲ. ಇ- ಕಾಮರ್ಸ್‌ನ ವ್ಯಾಪ್ತಿಯ ನಿಖರ ಸ್ವರೂಪವನ್ನು ಸರ್ಕಾರ ಇನ್ನೂ ಗೊತ್ತುಪಡಿಸಿಲ್ಲವಾದ್ದರಿಂದ ಇ- ವಹಿವಾಟಿನ ವಿಷಯದಲ್ಲಿ ಗೊಂದಲಗಳಿವೆ. ಇವು ನಿವಾರಣೆಯಾಗಬೇಕು ಎಂದು ನಾಸ್‌ಕಾಮ್ ತನ್ನ ವರದಿಯಲ್ಲಿ ಒತ್ತಿ ಹೇಳಿದೆ.
ನಾಸ್‌ಕಾಮ್‌ನ ಎರಡು ದಿನಗಳ ಅವಧಿಯ ವಾರ್ಷಿಕ ಸಮ್ಮೇಳನ ಉದ್ದೇಶಿಸಿ ಮಾತಾಡಿದ ಕೇಂದ್ರ ಮಾಹಿತಿ ತಂತ್ರಜ್ಞಾನ ಕಾರ್ಯದರ್ಶಿ ಆರ್.ಆರ್.ಶಾ, ಪ್ರಮಾಣೀಕೃತ ಕಂಪನಿಗಳನ್ನು ಇನ್ನು ಒಂದೆರಡು ತಿಂಗಳಲ್ಲಿ ಇ- ಕಾಮರ್ಸ್ ವ್ಯಾಪ್ತಿಗೆ ತರಲಾಗುವುದು ಎಂದು ಭರವಸೆ ಕೊಟ್ಟರು.
ಇನ್ನೊಂದು ತೊಡಕು... : ವಿದ್ಯುನ್ಮಾನ ಒಪ್ಪಂದಗಳು ಮತ್ತು ತೆರಿಗೆ ನೀತಿಯಲ್ಲಿನ ತೊಡಕುಗಳೂ ಮಾಹಿತಿ ತಂತ್ರಜ್ಞಾನ ಕಾನೂನು ಜಾರಿ ವಿಳಂಬಕ್ಕೆ ಕಾರಣವಾಗಿವೆ. ಭಾರತೀಯ ಒಪ್ಪಂದ ಕಾನೂನಿಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ರಕ್ಷಣಾ ಕವಚವಿಲ್ಲ. ಇವನ್ನೆಲ್ಲಾ ಸರಿ ಪಡಿಸಿ, ಸಾಧ್ಯವಿರುವೆಡೆಯೆಲ್ಲಾ ಇ- ಅಳವಡಿಕೆಗೆ (ಇ- ಅಡಾಪ್ಷನ್) ಸರ್ಕಾರ ಒತ್ತು ನೀಡಿದಲ್ಲಿ ಮಾತ್ರ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಯಶಸ್ವಿ ಅನುಷ್ಠಾನ ಸಾಧ್ಯ ಎಂದು ನಾಸ್‌ಕಾಮ್ ವರದಿಯ ಮೂಲಕ ಸರ್ಕಾರಕ್ಕೆ ತಿಳಿಹೇಳಿದೆ.
(ಯುಎನ್‌ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications