ಕುಕ್ಕರಹಳ್ಳಿ ಕೆರೆಯಲ್ಲಿ ಸತ್ತದ್ದು 1ಲಕ್ಷ ಮೀನು,ನಷ್ಟ ಅಂದಾಜು 3ಲಕ್ಷರೂ.
ಮೈಸೂರು : ಕುಕ್ಕರ ಹಳ್ಳಿ ಕೆರೆ ನೀರು ಕಲುಷಿತಗೊಂಡುದರ ಪರಿಣಾಮವಾಗಿ ಸತ್ತಿರುವ ಮೀನುಗಳ ಸಂಖ್ಯೆ ಒಂದು ಲಕ್ಷ ದಾಟಿದ್ದು ಸುಮಾರು 3 ಲಕ್ಷಕ್ಕೂ ಹೆಚ್ಚು ರೂಪಾಯಿ ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ.
ಮೀನುಗಾರರು ಸಾಧ್ಯವಿದ್ದಷ್ಟು, ಸತ್ತ ಮೀನುಗಳನ್ನು ಕೆರೆಯಿಂದ ಹೊರ ತೆಗೆಯಲು ಹೆಣಗಾಡುತ್ತಿದ್ದಾರೆ. ಮೂರು ತಿಂಗಳ ಹಿಂದೆಯಷ್ಟೇ ಎಣ್ಣೆ ಹೊಳೆ ಕೆರೆಯ ನೀರು ಕಲುಷಿತಗೊಂಡಾಗ ಮೂರು ಲಕ್ಷ ಮೀನುಗಳು ಸತ್ತಿದ್ದು ಈಗ ಕಲುಷಿತಗೊಳ್ಳುವ ಸರದಿ ಪ್ರಸಿದ್ಧ ಕುಕ್ಕರ ಹಳ್ಳಿ ಕೆರೆಯದ್ದಾಗಿದೆ.
ಕೆರೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಮೈಸೂರು ವಿಶ್ವವಿದ್ಯಾಲಯವೂ ಸೇರಿದಂತೆ ಕೆರೆಯಲ್ಲಿ ಆಗಿರುವ ಅನಾಹುತವನ್ನು ಸರಿಪಡಿಸಲು ಸರಕಾರ ಕೂಡ ಯಾವುದೇ ಪ್ರಯತ್ನ ಮಾಡಿಲ್ಲ ಎಂದು ಸ್ಥಳೀಯರು ದೂರುತ್ತಾರೆ. ಈ ಬಗ್ಗೆ ಮೀನುಗಾರಿಕಾ ವಿಭಾಗವನ್ನು ಪ್ರಶ್ನಿಸಿದಲ್ಲಿ ಕರ್ನಾಟಕ ಮೀನುಗಾರರ ಸಹಕಾರ ಮಂಡಳಿ (ಕೆಸಿಎಫ್‌ಎಫ್) ಕೆರೆಯನ್ನು ನೋಡಿಕೊಳ್ಳುವ ಜವಾಬ್ದಾರಿ ಹೊತ್ತಿದೆ ಎಂಬ ಉತ್ತರ ಬರುತ್ತದೆ.
ಕೆಸಿಎಫ್‌ಎಫ್‌ನ ಹಿರಿಯ ಅಧಿಕಾರಿಯಾಬ್ಬರ ಪ್ರಕಾರ ಕಳೆದ 15 ದಿನಗಳ ಹಿಂದೆಯಷ್ಟೇ ವಿವಿಧ ಜಾತಿಯ ಮರಿ ಮೀನುಗಳನ್ನು ಕೆರೆಗೆ ಬಿಡಲಾಗಿತ್ತು. ಅಲ್ಲದೆ ನೀರಿನಲ್ಲಿ ಸಾಕಷ್ಟು ಆಮ್ಲಜನಕವಿಲ್ಲದ ಕಾರಣ ಮೀನುಗಳು ಸತ್ತುಹೋಗಿವೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮೈಸೂರು ಶಾಖೆಯಲ್ಲಿ ನೀರಿನ ಮಾಲಿನ್ಯ ಅಳೆಯುವ ಯಾವುದೇ ಸೌಲಭ್ಯಗಳಿಲ್ಲವಾದ್ದರಿಂದ ಹೆಚ್ಚು ಮೀನುಗಳ ಸಾವನ್ನು ತಡೆಗಟ್ಟುವುದು ಕಷ್ಟವಾಯಿತು. ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ ಇಂತಹ ಸಂದರ್ಭದಲ್ಲಿ ನೀರಿನ ಪರೀಕ್ಷೆಗಾಗಿ ಅದು ಸಿಎಫ್ ಟಿಆರ್‌ಐಯನ್ನು ಅವಲಂಭಿಸುತ್ತದೆ.
ಕೆರೆಯ ಮಾಲಿನ್ಯಕ್ಕೆ ಸುತ್ತ ಮುತ್ತಲಿನ ನಿವಾಸಿಗಳೇ ಕಾರಣ ಎಂದು ಮೈಸೂರು ವಿಶ್ವ ವಿದ್ಯಾಲಯ ದೂರಿದ್ದರೂ ಮೀನುಗಾರರ ಸಹಕಾರ ಮಂಡಳಿಯ ಜೊತೆಗೆ ಕೆರೆ ಮಾಲಿನ್ಯ ನಿಯಂತ್ರಣವನ್ನು ಕೈಗೆತ್ತಿಕೊಳ್ಳುವುದಾಗಿ ವಿವಿಯ ಆಡಳಿತ ಮಂಡಳಿ ಭರವಸೆ ನೀಡಿದೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications