ಮಂಗಳವಾರದಿಂದ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ
ಬೆಂಗಳೂರು : ಬೆಂಗಳೂರಿನಲ್ಲಿ ಈ ಹೊತ್ತು ಕೇಳಿಬರುತ್ತಿರುವ ದುಂಬಿಗಳ ಝೇಂಕಾರ ಆಗಸ್ಟ್ 15, ಹತ್ತಿರವಾಯಿತು ಎಂಬುದನ್ನು ನೆನಪಿಸುತ್ತಿದೆ. ಲಾಲ್‌ಬಾಗ್ ನಮ್ಮನ್ನು ಕೈಬೀಸಿ ಕರೆಯುತ್ತಿದೆ. ಹಚ್ಚ ಹಸುರಿನಿಂದ ಕಂಗೊಳಿಸುತ್ತಿರುವ ಲಾಲ್‌ಬಾಗ್‌ನಲ್ಲಿ ಸ್ವಾತಂತ್ರೋತ್ಸವದ ಅಂಗವಾಗಿ ಫಲಪುಷ್ಪ ಪ್ರದರ್ಶನ ಏರ್ಪಟ್ಟಿದೆ.
ಲಾಲ್‌ಬಾಗ್‌ನ ಕೇಂದ್ರಬಿಂದುವಾಗಿರುವ ಗಾಜಿನಮನೆಯಲ್ಲಿ ಸುಂದರವಾಗಿ ಅರಳಿರುವ ಹೂಗಳ ಚೆಲುವನ್ನು ನೋಡುವುದೇ ಒಂದು ಆನಂದ. ಅಧಿಕೃತವಾಗಿ ಆಗಸ್ಟ್ 7ರಿಂದ ಪುಷ್ಪಪ್ರದರ್ಶನ. ಇದಕ್ಕಾಗಿಯೇ ವ್ಯಕ್ತಿಗಳು, ಹಲವು ಸಂಘಸಂಸ್ಥೆಗಳು ವಿವಿಧ ಬಗೆಯ ಫಲಪುಷ್ಪಗಳನ್ನು ಬೆಳೆಸಿ, ವಿವಿಧ ವಿನ್ಯಾಸಗಳಲ್ಲಿ ಜೋಡಿಸಿ, ಸ್ಪರ್ಧೆಗೆ ಸಜ್ಜಾಗಿದ್ದಾರೆ.
ಸ್ವಾತಂತ್ರ್ಯದಿನಾಚರಣೆ ಹಾಗೂ ಗಣರಾಜ್ಯೋತ್ಸವ ಸಂದರ್ಭದಲ್ಲಿ ಇಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನ ಉದ್ಯಾನ ನಗರಿಯ ಅವಿಭಾಜ್ಯ ಅಂಗ. ಕಲಾತ್ಮಕವಾಗಿ ಜೋಡಿಸಿಡುವ ಫಲಪುಷ್ಪ ಸಿರಿಯನ್ನು ಕಾಣಲೆಂದೇ ದೇಶ ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ.
ಜನಮನವನ್ನು ಹಾಗೂ ತೀರ್ಪುಗಾರರನ್ನು ಮೆಚ್ಚಿಸುವ ವಿನ್ಯಾಸಕ್ಕೆ ಪ್ರಶಸ್ತಿ, ಪಾರಿತೋಷಕಗಳನ್ನೂ ನೀಡಲಾಗುತ್ತದೆ. ಮೈಸೂರು ಉದ್ಯಾನ ಕಲಾ ಸಂಘ ಹಾಗೂ ತೋಟಗಾರಿಕೆ ಇಲಾಖೆ ಸಂಯುಕ್ತಾಶ್ರಯದಲ್ಲಿ ಈ ಸ್ಪರ್ಧೆ - ಪ್ರದರ್ಶನ ನಡೆಯುತ್ತಿದೆ.
ಬೆಂಗಳೂರಿಗೆ ಕಳಶಪ್ರಾಯವಾಗಿರುವ ಲಾಲ್‌ಬಾಗ್ 97 ಹೆಕ್ಟೇರ್ ಅಥವಾ 240 ಎಕರೆ ಪ್ರದೇಶದ ಸಸ್ಯಕಾಶಿ. ಇದೊಂದು ಪ್ರವಾಸಿತಾಣವಾದರೇ, ಇದರೊಳಗೆ ನೋಡಲೇಬೇಕಾದ ಹಲವಾರು ಉಪತಾಣಗಳಿವೆ. ಗಾಜಿನ ಮನೆ,
ಜಯಚಾಮರಾಜೇಂದ್ರ ಒಡೆಯರ ಪ್ರತಿಮೆ, ಸರಕಾರಿ ಮತ್ಸ್ಯಾಗಾರ, ಸುಂದರವಾದ ಹೂ ಗಡಿಯಾರ, ಶಿಲ್ಪೋದ್ಯಾನ, ಗುಲಾಬಿ ವನ, ಕೆಂಪೇಗೌಡರ ಗೋಪುರ, ಬೃಹತ್‌ಬಂಡೆ, ಸಹಸ್ರಾರು ವರ್ಷಗಳ ಹಿಂದಿನ ವೃಕ್ಷದ ಪಳೆಯುಳಿಕೆ, ಬೇಸಿಗೆಯಲ್ಲೂ ನಿಮ್ಮನ್ನು ತಂಪಾಗಿಡುವ ತಂಡಿ ಸಡಕ್, ಲಾಲ್‌ಬಾಗ್ ಕೆರೆ ಹಾಗೂ ದ್ವೀಪ ಜೊತೆಗೆ ಸುಂದರವಾಗಿ ಜೋಡಿಸಿಟ್ಟ ಬಗೆಬಗೆಯ ಹೂಗಳು. ಬಿಡುವು ಮಾಡಿಕೊಂಡು ಪುಷ್ಪಗಳ ಸೌಂದರ್ಯವನ್ನು ಸವಿಯಲು ಹೋಗುತ್ತೀರಾ ತಾನೆ?
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications