Get Updates
Get notified of breaking news, exclusive insights, and must-see stories!

ಬರ ಪರಿಸ್ಥಿತಿ : ಸೋಮವಾರ ಸಂಜೆ ದೆಹಲಿಗೆ ಕೃಷ್ಣ ನಿಯೋಗ

ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಮಳೆಯ ವೈಫಲ್ಯದಿಂದ ತಲೆದೋರಿರುವ ಭೀಕರ ಬರದ ಹಿನ್ನೆಲೆಯಲ್ಲಿ ಕೇಂದ್ರದಿಂದ ಹೆಚ್ಚಿನ ಹಣಕಾಸು ನೆರವು ಕೋರಲು ಎಸ್‌.ಎಂ.ಕೃಷ್ಣ ನೇತೃತ್ವದ ನಿಯೋಗ ಸೋಮವಾರ ಸಂಜೆ ದೆಹಲಿಗೆ ತೆರಳಲಿದೆ.

ಮಂಗಳವಾರ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರನ್ನು ಭೇಟಿ ಮಾಡುವ ನಿಯೋಗ, ರಾಜ್ಯದ ಬರ ಪರಿಸ್ಥಿತಿಯನ್ನು ವಿವರಿಸಿ, 849 ಕೋಟಿ ರುಪಾಯಿಗಳ ನೆರವಿಗೆ ಮನವಿಪತ್ರ ಅರ್ಪಿಸಲಿದೆ. ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ಕೂಡಲೇ 100 ಕೋಟಿ ರುಪಾಯಿ ಬಿಡುಗಡೆ ಮಾಡುವಂತೆಯೂ ನಿಯೋಗ ಪ್ರಧಾನಿಯವರನ್ನು ಕೋರಲಿದೆ.

ನಿಗದಿತ ಕಾರ್ಯಕ್ರಮದಂತೆ ನವದೆಹಲಿಯಲ್ಲಿ ಮಂಗಳವಾರ ರಾಜ್ಯ ಸಂಸತ್‌ ಸದಸ್ಯರ ಸಭೆಯನ್ನು ನಡೆಸಿ, ಸಮಾಲೋಚಿಸಿದ ಬಳಿಕ ಸಂಸದರು ಹಾಗೂ ರಾಜ್ಯ ವಿಧಾನಮಂಡಳದ ಉಭಯ ಸದನಗಳ ನಾಯಕರನ್ನೊಳಗೊಂಡ ಸರ್ವಪಕ್ಷ ನಿಯೋಗ ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿ, ಮನವಿ ಪತ್ರ ಅರ್ಪಿಸಲಿದೆ.

ಈ ನಿಯೋಗದಲ್ಲಿ ಪ್ರತಿಪಕ್ಷ ನಾಯಕರಾದ ಜಗದೀಶ ಶೆಟ್ಟರ್‌, ಕೆ.ಎಚ್‌.ಶ್ರೀನಿವಾಸ್‌, ಪಿ.ಜಿ.ಆರ್‌. ಸಿಂಧ್ಯಾ, ಬಸವರಾಜ ಹೊರಟ್ಟಿ, ಚೆನ್ನಿಗಪ್ಪ, ಎಂ.ಸಿ. ನಾಣಯ್ಯ, ಡಿ.ಎಚ್‌. ಶಂಕರಮೂರ್ತಿ ಅವರುಗಳಿರುತ್ತಾರೆ. ರಾಜ್ಯಕ್ಕೆ ಆಗಮಿಸಿದ್ದ ಪಿ.ಕೆ. ಮಿಶ್ರಾ ನೇತೃತ್ವದ ಕೇಂದ್ರ ತಂಡ ಬರ ಪರಿಸ್ಥಿತಿಯ ಅಧ್ಯಯನ ನಡೆಸಿ ದೆಹಲಿಗೆ ಹಿಂತಿರುಗಿರುವ ಹಿನ್ನೆಲೆಯಲ್ಲಿ ನಿಯೋಗದ ಈ ಭೇಟಿಗೆ ಮಹತ್ವ ಬಂದಿದೆ.

ವಾರ್ತಾ ಸಂಚಯ
ಮುಖಪುಟ / ಕೃಷ್ಣಗಾರುಡಿಯ ಕನ್ನಡಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+