Get Updates
Get notified of breaking news, exclusive insights, and must-see stories!

ಕುದುರೆಮುಖ ಕಂಪೆನಿಯಲ್ಲಿ ಮತ್ತೆ ಗಣಿಗಾರಿಕೆ ಆರಂಭ

ಚಿಕ್ಕಮಗಳೂರು : ಗುತ್ತಿಗೆ ಅವಧಿ ವಿಸ್ತರಣೆ ವಿಷಯದಲ್ಲಿ ತಲೆದೋರಿದ್ದ ವಿವಾದದಿಂದಾಗಿ ಕಳೆದ 10 ದಿನಗಳಿಂದ ಸ್ಥಗಿತಗೊಂಡಿದ್ದ ಕುದುರೆಮುಖ ಕಬ್ಬಿಣ ಅದಿರು ಗಣಿಗಾರಿಕಾ ಕಂಪೆನಿ ಭಾನುವಾರ ರಾತ್ರಿಯಿಂದ ಮತ್ತೆ ಕೆಲಸ ಆರಂಭಿಸಿದೆ.

ಜುಲೈ 24ಕ್ಕೆ ಗಣಿಗಾರಿಕೆ ಅವಧಿ ಮುಗಿದಿದ್ದ ಸಂದರ್ಭದಲ್ಲಿ ಗಣಿಗಾರಿಕಾ ಕಂಪೆನಿಗೆ ಗುತ್ತಿಗೆ ಅವಧಿಯನ್ನು ವಿಸ್ತರಿಸುವುದರ ವಿರುದ್ಧ ಸಾಹಿತಿ ಯು.ಆರ್‌. ಅನಂತಮೂರ್ತಿ ಅವರ ನೇತೃತ್ವದಲ್ಲಿ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿತ್ತು.

ಕೇಂದ್ರ ಸರಕಾರ, ಕುದುರೆಮುಖ ಕಂಪೆನಿಗೆ ಮೂರು ತಿಂಗಳವರೆಗೆ ಗುತ್ತಿಗೆ ಅವಧಿಯನ್ನು ವಿಸ್ತರಿಸಿದ್ದರೂ, ರಾಜ್ಯ ಸರಕಾರದ ಅಂಕಿತ ಬೀಳುವುದು ತಡವಾಗಿತ್ತು. ಕಳೆದ 10 ದಿನಗಳಲ್ಲಿ ಕಂಪೆನಿಯು ಉತ್ಪಾದನೆ ಸ್ಥಗಿತಗೊಳಿಸಿದುದರ ಪರಿಣಾಮ 15 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಕಂಪೆನಿ ಮೂಲಗಳು ತಿಳಿಸಿವೆ.

ಕುದುರೆಮುಖ ಕಂಪೆನಿಯು ಗಣಿಗಾರಿಕೆಯನ್ನು ಮತ್ತೆ ಆರಂಭಿಸುತ್ತಿದ್ದಂತೆಯೇ ಪರಿಸರ ಸಂಘಟನೆಗಳು ತಮ್ಮ ಹೋರಾಟವನ್ನು ತೀವ್ರಗೊಳಿಸುವುದಾಗಿ ಹೇಳಿದ್ದು ತಮ್ಮ ಕಾರ್ಯಕ್ರಮಗಳನ್ನು ಸದ್ಯದಲ್ಲೇ ಪ್ರಕಟಿಸಲಿವೆ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+