ಬೆಂಗಳೂರು ಉದ್ಯಮಿಯ ಅಪಹರಣ ಒಂದು ನಾಟಕ ಅಂತಾರೆ ಪೊಲೀಸರು
ಬೆಂಗಳೂರು : ಬೆಂಗಳೂರಿನ ಉದ್ಯಮಿ ಶಾಂತಿನಾಥ್ ಅಪಹರಣ ಹಾಗೂ 25 ಲಕ್ಷ ರುಪಾಯಿ ಒತ್ತೆಹಣ ಬೇಡಿಕೆ ಪ್ರಕರಣ ಒಂದು ನಾಟಕ ಎಂದು ಪೊಲೀಸರು ಬಲವಾಗಿ ಶಂಕಿಸಿದ್ದಾರೆ. ಲಕ್ಷಾಂತರ ರುಪಾಯಿ ಸಾಲ ಮಾಡಿದ್ದ ಉದ್ಯಮಿ, ಸಾಲಗಾರರ ಕಾಟದಿಂದ ತಪ್ಪಿಸಿಕೊಳ್ಳಲು ಈ ಅಪಹರಣದ ನಾಟಕ ಆಡಿಸಿದ್ದಾರೆ ಎನ್ನುತ್ತಾರೆ. ಈ ಮಧ್ಯೆ ನಾಟಕೀಯ ರೀತಿಯಲ್ಲಿ ಉದ್ಯಮಿಯ ಬಿಡುಗಡೆಯೂ ಆಗಿದೆ.
ಬೇರೆ ಬೇರೆ ಫೈನಾನ್ಸ್ ಕಂಪನಿಗಳಿಂದ ಸುಮಾರು 25 ರಿಂದ 50 ಲಕ್ಷ ರುಪಾಯಿವರೆಗೆ ಸಾಲ ಮಾಡಿರುವ ನಾಗರಬಾವಿಯ ಪಯೋನಿರ್ ಪ್ರೌಢಶಾಲೆಯ ಮುಖ್ಯಸ್ಥ ಜಿ.ಆರ್. ಶಾಂತಿನಾಥ್ (45) ಸಾಲಗಾರರಿಂದ ತಪ್ಪಿಸಿಕೊಳ್ಳಲು, ಅಪಹರಣ ನಾಟಕ ಸೃಷ್ಟಿಸಿ, ಪತ್ನಿಯಿಂದ ಅಪಹರಣದ ಮೊಕದ್ದಮೆ ದಾಖಲಿಸುವ ನಾಟಕ ಆಡಿರಬಹುದೆಂದು ಎಂದು ಪೊಲೀಸರು ತಿಳಿಸಿದ್ದಾರೆ.
ಶಾಂತಿನಾಥ್ ಅವರು, ತಮ್ಮ ಗೆಳೆಯ ಬಸವರಾಜ್ ಅವರಿಂದ ಸಾಕಷ್ಟು ಸಾಲ ಪಡೆದಿದ್ದು, ಅವರಿಂದ ತಪ್ಪಿಸಿಕೊಳ್ಳಲೆಂದೇ ಈ ನಾಟಕ ಆಡಿಸಿದ್ದಾರೆಂಬುದು ಪೊಲೀಸರ ಬಲವಾದ ಶಂಕೆ. ಈ ಮಧ್ಯೆ ಶಾಂತಿನಾಥ್ ಅವರನ್ನು ಅಪಹರಣಕಾರರು ತಮಿಳುನಾಡಿನ ಕೊಯಮತ್ತೂರು ಬಳಿ ಬಿಟ್ಟು ಪರಾರಿಯಾಗಿದ್ದಾರೆ.
ತಮ್ಮನ್ನು ಕರೆದೊಯ್ಯುತ್ತಿದ್ದ ಕಾರಿಗೂ, ಲಾರಿಗೂ ಡಿಕ್ಕಿಯಾಗಿದ್ದರಿಂದ ಅಪಹರಣಕಾರರು ತಮ್ಮನ್ನು ಕಾರಿನಿಂದ ಇಳಿಸಿ, ಪರಾರಿಯಾದರು ಎಂದು ಶಾಂತಿನಾಥ್ ತಿಳಿಸಿರುವುದಾಗಿ ವರದಿಯಾಗಿದೆ. ಆದರೆ, ಇದೊಂದು ನಾಟಕ ಎನ್ನುವ ನಗರ ಪೊಲೀಸರು, ಶಾಂತಿನಾಥ್ ಬೆಂಗಳೂರಿಗೆ ಬಂದ ನಂತರ ನಿಜ ಬಯಲಾಗುತ್ತದೆ ಎನ್ನುತ್ತಾರೆ.
ಈಗ ಶಾಂತಿನಾಥ್ ಸೇಲಂ ಜಿಲ್ಲೆಯ ವಲ್ಲಂಪೆಟ್ಟಿ ಪೊಲೀಸ್ ಠಾಣೆಯಲ್ಲಿದ್ದು, ಬೆಂಗಳೂರು ಪೊಲೀಸರು ಹಾಗೂ ಅವರ ಮನೆಯವರು, ಶಾಂತಿನಾಥ್‌ರನ್ನು ಬೆಂಗಳೂರಿಗೆ ಕರೆತರಲು ಅಲ್ಲಿಗೆ ತೆರಳಿದ್ದಾರೆ. ಕೆಂಗೇರಿಗೇಟ್ ಎಸಿಪಿ ಶ್ರೀಧರಮೂರ್ತಿ, ಚಂದ್ರಲೇಔಟ್ ಇನ್ಸ್‌ಪೆಕ್ಟರ್ ಟಿ.ಡಿ. ದುರ್ಗಯ್ಯ ತನಿಖೆ ನಡೆಸುತ್ತಿದ್ದಾರೆ.
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications