• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾರ್ಕೋಟಕ ವಿಷವಾಗಿದೆ ಹಿರಿಯೂರು ಬಳಿಯ ಅಂತರ್ಜಲ

By Staff
|

*ಮುರುಗೇಶ ಹಿರೇಮಠ್‌

ದಾವಣಗೆರೆ : ಭಾನುವಾರ ಕಾಂಚಿಪುರದ ಕಾಲೇಜು ಸಮಾರಂಭವೊಂದರಲ್ಲಿ ಕೇಂದ್ರ ಸಚಿವ ಮುರಳಿ ಮನೋಹರ ಜೋಷಿ ಕಲುಷಿತ ನೀರು ಕುಡಿದು ವಾಂತಿ ಮಾಡಿಕೊಂಡ ಅಸ್ವಸ್ಥರಾದದ್ದು ದೇಶಾದ್ಯಂತ ಭಾರೀ ಸುದ್ದಿಯಾಯಿತು. ತತ್‌ಕ್ಷಣವೇ ವೈದ್ಯರ ತಂಡ ಪ್ರವಾಸಿ ಬಂಗಲೆಯಲ್ಲಿ ಸಚಿವರನ್ನು ತಪಾಸಣೆ ಮಾಡಿ, ಉಪಚರಿಸಿ, ಅವರ ಆರೋಗ್ಯ ಸ್ಥಿತಿ ಈಗ ಸಹಜವಾಗಿದೆ ಎಂದು ಘೋಷಿಸಿತು.

ನಿತ್ಯವೂ ರಾಷ್ಟ್ರಾದ್ಯಂತ ಕಲುಷಿತ ನೀರು ಕುಡಿದು ಅಸ್ವಸ್ಥರಾಗುವವರ, ದೀರ್ಘಾವಧಿ ಕಾಯಿಲೆಗೆ ತುತ್ತಾಗಿ ಆಸ್ಪತ್ರೆ ಸೇರುವವರ ಸಂಖ್ಯೆ ಕಡಿಮೆ ಏನಿಲ್ಲ. ಆದರೆ, ಇದ್ದು ಸುದ್ದಿ ಆಗದು ಅಷ್ಟೇ. ಇದಕ್ಕೆ ರಾಜ್ಯವೂ ಹೊರತೇನಲ್ಲ. ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಂತೂ ಅಂತರ್ಜಲ ಸಂಪೂರ್ಣ ಕಲುಷಿತಗೊಂಡಿದೆ.

ಹಿರಿಯೂರು ಹಾಗೂ ಸುತ್ತಮುತ್ತಲ ಪ್ರದೇಶಗಳ ಬೋರ್‌ವೆಲ್‌ ನೀರು ದುರ್ನಾತ ಬೀರುತ್ತಿದೆ, ಕಮಟು ವಾಸನೆ ಹೊರಹೊಮ್ಮುತ್ತಿದೆ. ಈ ನೀರು ಕುಡಿದ ಮಂದಿ ಹಲವು ಬಗೆಯ ರೋಗಗಳಿಗೆ ತುತ್ತಾಗಿದ್ದಾರೆ. ರಾಜ್ಯ ಪರಿಸರ ಖಾತೆ ಸಚಿವರ ಕ್ಷೇತ್ರದಲ್ಲೇ ಜಲ ಮಾಲಿನ್ಯ ತಾಂಡವವಾಡುತ್ತಿದ್ದರೂ, ಕಂಡೂ ಕಾಣದಂತಿರುವುದು ನಾಗರಿಕರನ್ನು ವಿಸ್ಮಯಗೊಳಿಸಿದೆ.

ವರವಲ್ಲ .. ಶಾಪ : ಚಿತ್ರದುರ್ಗ ಜಿಲ್ಲೆಯ ರೈತರ ಪಾಲಿಗೆ ವರವೆಂಬಂತೆ ಸ್ಥಾಪನೆಯಾದ ವಾಣಿ ವಿಲಾಸ ಸಹಕಾರಿ ಸಕ್ಕರೆ ಕಾರ್ಖಾನೆ ಹಾಗೂ ಕಾರ್ಖಾನೆಗೆ ಹೊಂದಿಕೊಂಡಂತೆ ಇರುವ ಡಿಸ್ಟಿಲರಿ ಇಂದು ಶಾಪವಾಗಿದೆ. ಕಾರ್ಖಾನೆಯಿಂದ ಹೊರಬಹುತ್ತಿರುವ ತ್ಯಾಜ್ಯ ವಿಷಪೂರಿತವಾಗಿದ್ದು, ಅದು ಭೂಮಿಯನ್ನು ಸೇರಿ, ಅಂತರ್ಜಲವನ್ನು ವಿಷಮಯಗೊಳಿಸುತ್ತಿದೆ.

ಸಕ್ಕರೆ ಕಾರ್ಖಾನೆ ಮತ್ತು ಡಿಸ್ಟಿಲರಿಗಳು ಎತ್ತರದ ಪ್ರದೇಶದಲ್ಲಿದ್ದು ಕಾರ್ಖಾನೆ ಬಳಕೆಗೆ ವೇದಾವತಿ ನದಿಯಿಂದ ನೀರು ಪಡೆಯಲಾಗುತ್ತಿದೆ. ಶುದ್ಧ ನೀರು ಪಡೆವ ಕಾರ್ಖಾನೆ, ಶುದ್ಧೀಕರಿಸದ ತ್ಯಾಜ್ಯ ನೀರನ್ನು ತಗ್ಗು ಪ್ರದೇಶಕ್ಕೆ ಹರಿದು ಬಿಟ್ಟಿರುವುದೇ ಈ ಅನಾಹುತಕ್ಕೆ ಕಾರಣ ಎಂಬುದು ಇಲ್ಲಿನ ಪರಿಸರವಾದಿಗಳ - ನಾಗರಿಕರ ಅಭಿಪ್ರಾಯ.

ದುರ್ನಾತ : ಹಿರಿಯೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿತ್ರದುರ್ಗ ಅಥವಾ ಚಳ್ಳಕೆರೆಯತ್ತ ಹೊರಟರೆ, ಮೈಲಿಗಟ್ಟಲೆ ದೂರಕ್ಕೂ ದುರ್ನಾತ ಬಡಿಯುತ್ತದೆ. ತ್ಯಾಜ್ಯ ನೀರಿನ ಪ್ರಭಾವದಿಂದ ಗಿಡಮರಗಳು ಒಣಗುತ್ತಿವೆ. ಅಷ್ಟೇಕೆ ಕಾರ್ಖಾನೆಯ ಆವರಣದಲ್ಲಿದ್ದ ಸುಮಾರು 4,500 ತೆಂಗಿನಮರಗಳೂ ಇಂದು ಒಣಗಿಹೊಗಿವೆ.

ಇದರ ವಿರುದ್ಧ ಹಲವು ವರ್ಷಗಳಿಂದಲೂ ಜನರು ಪ್ರತಿಭಟಿಸುತ್ತಲೇ ಇದ್ದಾರೆ. ಇವರ ಕೂಗೂ ಕೇವಲ ಅರಣ್ಯ ರೋಧನವಾಗಿದೆ ಅಷ್ಟೇ. ಬಬ್ಬೂರು, ಚಿನ್ನಯ್ಯನಹಟ್ಟಿಯ ಬೋರ್‌ವೆಲ್‌ಗಳ ನೀರಂತೂ ಸಂಪೂರ್ಣ ಕಲುಷಿತಗೊಂಡಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಈ ಕೊಳವೆ ಬಾವಿಗಳ ನೀರು ಕುಡಿಯಲು ಯೋಗ್ಯವಲ್ಲ ಎಂದು ಸರ್ಟಿಫಿಕೇಟ್‌ ಕೂಡ ನೀಡಿದ್ದರೆ, ಕೃಷಿ ಇಲಾಖೆ ಈ ನೀರನ್ನು ಕೃಷಿಗೂ ಬಳಸದಂತೆ ಎಚ್ಚರಿಕೆ ನೀಡಿದೆ.

ರಾಸಾಯನಿಕ ವಸ್ತುಗಳನ್ನೊಳಗೊಂಡ ಈ ತ್ಯಾಜ್ಯದ ದುಷ್ಪರಿಣಾಮಗಳ ಪಟ್ಟಿ ದೊಡ್ಡದಾಗುತ್ತಾ ಸಾಗಿದ್ದರೂ ಅಧಿಕಾರಸ್ಥರು ಮಾತ್ರ ತಲೆ ಕೆಡಿಸಿಕೊಂಡಿಲ್ಲ. ಕಾರ್ಖಾನೆಯಲ್ಲಿ ತ್ಯಾಜ್ಯ ಶುದ್ಧೀಕರಣ ಘಟಕ ಹೆಸರಿಗೆ ಮಾತ್ರ ಇದೆ. ಬಬ್ಬೂರು ಗ್ರಾಮದಲ್ಲಂತೂ ಈ ನೀರಿನಿಂದ ಕೃಷಿ ಭೂಮಿಯೆಲ್ಲಾ ಹಾಳಾಗಿದೆ. ಎಕರೆಯಾಂದಕ್ಕೆ 6 ಸಾವಿರ ಪರಿಹಾರ ನೀಡುವುದಾಗಿ ಡಿಸ್ಟಿಲರಿಯ ವ್ಯವಸ್ಥಾಪಕರು ಪ್ರಕಟಿಸಿದ್ದಾರಾದರೂ, ಈ ವರೆಗೆ ಯಾವುದೇ ರೈತನಿಗೆ ಪರಿಹಾರ ಸಿಕ್ಕಿಲ್ಲ. ಅದಕ್ಕೇ ಕವಿ ಬರೆದದ್ದು..

ಶ್ರೀಮಂತ ಸೀನುತಿರೆ ಕೇರಿ ಕೇರಿಯಲಿ ಪ್ರತಿಧ್ವನಿ

ಬಡವ ಸನ್ನಿಪಾತದಲಿ ಸಾಯುತಿರೆ ಕೇಳುವವರಿಲ್ಲ, ನೋಡುವವರಿಲ್ಲ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X