ಅತ್ತ ಹುಲಿ, ಇತ್ತ ದರಿ,ಬೆಳ್ತಂಗಡಿ ರೈತರಿಗೆ ಎಲ್ಲಿದೆ ದಾರಿ ?
ಬೆಳ್ತಂಗಡಿ : ತಾಲ್ಲೂಕಿನ ಸಾವಿರಕ್ಕೂ ಹೆಚ್ಚು ರೈತ ಕುಟುಂಬಗಳು ಅರಣ್ಯ ವಿಭಾಗ ಮತ್ತು ಕಂದಾಯ ವಿಭಾಗದ ಕಾನೂನು ಕಟ್ಟಳೆಗಳ ನಡುವೆ ಸಿಕ್ಕಿ ಹಾಕಿಕೊಂಡಿದ್ದು ತಾವು ಕೃಷಿ ಮಾಡುತ್ತಿದ್ದ ಭೂಮಿಯನ್ನು ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ.
ಈ ತಾಲ್ಲೂಕಿನಲ್ಲಿ 1,358 ಕೃಷಿಯನ್ನು ಅವಲಂಬಿಸಿರುವ ಕುಟುಂಬಗಳಿವೆ. ದಟ್ಟ ಅರಣ್ಯದ ಪಕ್ಕದಲ್ಲಿರುವ ಊರಾದ್ದರಿಂದ ಹೆಚ್ಚಿನ ಕೃಷಿ ಭೂಮಿಯೆಲ್ಲಾ ಸುರಕ್ಷಿತ ಅರಣ್ಯದ ಜಾಗವನ್ನು ಆಕ್ರಮಿಸಿಕೊಂಡು ಹೊಲ ರೂಪುಗೊಂಡಿದೆ. ಕಳೆದ 40 ವರ್ಷಗಳಿಂದಲೂ ಈ ಭೂಮಿಯಲ್ಲಿ ಸಾಗುವಳಿ ನಡೆದಿದ್ದು, ಸಣ್ಣ ಹಿಡುವಳಿದಾರರು ಕೃಷಿಗಾಗಿ ಅನುಮತಿ ಪತ್ರವೊಂದನ್ನು ಬರೆಯಿಸಿಕೊಂಡು ತಮ್ಮ ಪಾಡಿಗೆ ಕೃಷಿ ಮಾಡಿಕೊಂಡು ಬರುತ್ತಿದ್ದಾರೆ.
ಎರಡೂ ಕೈಗಳಲ್ಲೊಂದೊಂದು ನೋಟೀಸು...
ಅರಣ್ಯ ಇಲಾಖೆ ರೈತರಿಗೆ 20ರಿಂದ 25 ಸಾವಿರ ರೂಪಾಯಿ ದಂಡ ವಿಧಿಸಿ ನೋಟೀಸು ಕಳಿಸಿದೆ. ಅತ್ತ ಬೆಳ್ತಂಗಡಿ ತಹಸೀಲ್ದಾರರು ಕೃಷಿಗಾಗಿ ರೈತರಿಗೆ ನೀಡಿರುವ ಅನುಮತಿ ಪತ್ರವನ್ನು ನಿಷ್ಕಿೃಯಗೊಳಿಸುವುದಾಗಿ ನೋಟೀಸು ಬಿಟ್ಟಿದ್ದಾರೆ. ಎರಡೂ ನೋಟೀಸುಗಳ ಕೈಲಿ ಹಿಡಿದುಕೊಂಡು ರೈತರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಕಾಯ್ದೆ ತಿದ್ದುಪಡಿ ತಂದು ಬೆಳ್ತಂಗಡಿಯ ರೈತರನ್ನು ರಕ್ಷಿಸುವಂತೆ ಸುರಕ್ಷಿತ ಅರಣ್ಯ ವಿಭಾಗದ ಸಮಿತಿ ರಾಜ್ಯದ ಎಲ್ಲ ಲೋಕಸಭಾ ಸದಸ್ಯರಿಗೆ ಸೂಚಿಸಿದೆ. ಸಮಿತಿಯ ಅಧ್ಯಕ್ಷ ಪಿ. ಎನ್. ರಾಜನ್ ಬೆಳ್ತಂಗಡಿಯಲ್ಲಿ 2,756 ಎಕರೆ ವಿಸ್ತಾರದ ಆಕ್ರಮಿತ ಅರಣ್ಯ ಪ್ರದೇಶದಲ್ಲಿ ರೈತರು ದಶಕಗಳಿಂದ ದುಡಿಯುತ್ತಿದ್ದಾರೆ. ಲೋಕಸಭಾ ಸದಸ್ಯರು ರೈತ ಕುಟುಂಬಗಳನ್ನು ರಕ್ಷಿಸಬೇಕು ಎನ್ನುತ್ತಾರೆ.
ಸಂಸದರು ನೆರವಿಗೆ ಬರುತ್ತಾರಾ ?
40 ವರ್ಷಗಳಿಂದ ಮೌನವಾಗಿದ್ದ ಅರಣ್ಯ ವಿಭಾಗ ಮತ್ತು ಹಿಂದೆ ಕೃಷಿಗೆ ಅನುಮತಿ ನೀಡಿದ್ದ ತಹಸೀಲ್ದಾರ್ ಕಚೇರಿ ಅನುಮತಿ ರದ್ದುಪಡಿಸುವ ಬಗ್ಗೆ ಏಕ ಕಾಲಕ್ಕೇ ನೋಟೀಸು ಕಳಿಸಿ ರೈತರನ್ನು ಧೃತಿಗೆಡಿಸುತ್ತಿದೆ. ಇದು ಅಮಾನವೀಯ ಪ್ರಕ್ರಿಯೆ, ಕೃಷಿ ಉತ್ಪನ್ನಗಳ ಬೆಲೆ ಕುಸಿತದಿಂದ ತತ್ತರಿಸಿರುವ ರೈತನಿಗೆ ಕಷ್ಟಕಾಲದಲ್ಲೇ ಏಟು ನೀಡುವುದು ಸರಿಯಲ್ಲ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ಸದ್ಯಕ್ಕೆ ಲೋಕಸಭೆಯನ್ನು ಪ್ರತಿನಿಧಿಸುವ ರಾಜಕಾರಣಿಗಳು ಮಾತ್ರ ಬೆಳ್ತಂಗಡಿ ರೈತರ ಸಂದಿಗ್ಧ ಪರಿಸ್ಥಿತಿಯನ್ನು ತಿಳಿಗೊಳಿಸಬಲ್ಲರು. ಆದರೆ ಅವರ ಬಳಿ ಮೊತ್ತ ಮೊದಲು ಇರಬೇಕಾದ್ದು ಆಸಕ್ತಿ ಅಲ್ವಾ ?
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications