Get Updates
Get notified of breaking news, exclusive insights, and must-see stories!

ಬೆಂಗಳೂರಿನಲ್ಲಿ ಉದ್ಯಮಿ ಅಪಹರಣ, 25 ಲಕ್ಷ ಒತ್ತೆ ಹಣಕ್ಕೆ ಆಗ್ರಹ

ಬೆಂಗಳೂರು : ಮುಂಬಯಿ ಮಾಫಿಯಾ ನೆರಳು ಹಾಗೂ ಭೂಗತ ಲೋಕದ ಕುಖ್ಯಾತ ಛೋಟಾ ಶಕೀಲ್‌ನ ಬೇರುಗಳು ನಗರದಲ್ಲಿ ಕಾಣಿಸಿಕೊಳ್ಳುತ್ತಿರುವ ಬೆನ್ನಿನಲ್ಲೇ ಉದ್ಯಮಿಯಾಬ್ಬರನ್ನು ದುಷ್ಕರ್ಮಿಗಳು ಅಪಹರಿಸಿದ್ದು , 25 ಲಕ್ಷ ರುಪಾಯಿ ಒತ್ತೆಹಣ ನೀಡಲು ಬೇಡಿಕೆ ಸಲ್ಲಿಸಿದ್ದಾರೆ.

ಶಾಂತಿನಾಥನ್‌ ಎನ್ನುವ ಉದ್ಯಮಿಯನ್ನು ಚಂದ್ರಾ ಲೇ ಔಟ್‌ನ ಕೆನರಾ ಬ್ಯಾಂಕ್‌ ಬಳಿ ಶನಿವಾರ ಅಂಬಾಸಡರ್‌ ಕಾರ್‌ನಲ್ಲಿ ಬಂದ ಗುರುತು ಸಿಗದ ದುಷ್ಕರ್ಮಿಗಳು ಅಪಹರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತಮಿಳುನಾಡಿನ ಸೇಲಂ ಬಳಿಯಿಂದ ಅಪಹೃತ ಉದ್ಯಮಿಯ ಮನೆಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿರುವ ದುಷ್ಕರ್ಮಿಗಳು 25 ಲಕ್ಷ ರುಪಾಯಿ ಒತ್ತೆ ಹಣ ಸಲ್ಲಿಸಲು ಆಗ್ರಹಿಸಿದ್ದಾರೆ.

ಅಪಹೃತ ಶಾಂತಿನಾಥನ್‌ ಅವರನ್ನು ದುಷ್ಕರ್ಮಿಗಳಿಂದ ಸುರಕ್ಷಿತವಾಗಿ ಪಾರು ಮಾಡಲು ಬೆಂಗಳೂರು ಪೊಲೀಸರು, ಕಾರ್ಯೋನ್ಮುಖರಾಗಿದ್ದು ಹೆಚ್ಚಿನ ವಿವರಗಳು ತಿಳಿದುಬಂದಿಲ್ಲ .

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+