ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಾತಂತ್ರ್ಯಚಳವಳಿ-ಲೋಹಿಯಾ ಸ್ಮೃತಿಗಳ ಸೆಂಟ್ರಲ್‌ ಜೈಲ್‌ ಸ್ಥಳಾಂತರ

By Staff
|
Google Oneindia Kannada News

ಬೆಂಗಳೂರು : ಬಿಗಿ ಪೊಲೀಸ್‌ ಬಂದೋಬಸ್ತ್‌ ನಡುವೆ 1183 ಕೈದಿಗಳನ್ನು ಲಗೇಜು ಸಮೇತ ಸ್ಥಳಾಂತರಿಸುವ ಮೂಲಕ, ಐತಿಹಾಸಿಕ ಸೆಂಟ್ರಲ್‌ ಜೈಲನ್ನು (ಕೇಂದ್ರ ಕಾರಾಗೃಹ) ನಗರದ ಹೊರವಲಯದ ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸುವ ಕಾರ್ಯ ಹೆಚ್ಚೂ ಕಡಿಮೆ ಪೂರ್ಣಗೊಂಡಿದೆ.

ಸರ್ಕಾರದ ಆದೇಶದ ಮೇರೆಗೆ ಕಳೆದ ಕೆಲವು ದಿನಗಳಿಂದ ಜೈಲಿನ ಸ್ಥಳಾಂತರ ಕಾರ್ಯ ನಡೆಯುತ್ತಿದೆ ಎಂದು ಶನಿವಾರ ಜೈಲಿನ ಅಧೀಕ್ಷಕ ಪಿ.ಎನ್‌.ಜಯಸಿಂಹ ಸುದ್ದಿಗಾರರಿಗೆ ತಿಳಿಸಿದರು. ಮೊದಲಿಗೆ ಜೈಲಿನಲ್ಲಿದ್ದ ಕಾರ್ಖಾನೆಗಳು, ನಂತರದಲ್ಲಿ ಕೈದಿಗಳನ್ನು ಸ್ಥಳಾಂತರಿಸಲಾಯಿತು ಎಂದರು.

ಪ್ರಸ್ತುತ 3000 ಕೈದಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿ ಆಶ್ರಯ ಪಡೆದಿದ್ದು , ಉಳಿದ 400 ಕೈದಿಗಳು ಭಾನುವಾರ ಹೊಸ ಜೈಲಿನ ಆಶ್ರಯಕ್ಕೆ ಬರುವರು. ಇದರಿಂದಾಗಿ, ಆಗಸ್ಟ್‌ 5 (ಭಾನುವಾರ) ರಿಂದ ಸೆಂಟ್ರಲ್‌ ಜೈಲ್‌ ಸಂಪೂರ್ಣ ತೆರವಾಗಲಿದೆ.

ಸೆಂಟ್ರಲ್‌ ಜೈಲ್‌ ಮುಂದೇನು ?
ತೆರವಾಗುವ ಕೇಂದ್ರ ಕಾರಾಗೃಹವನ್ನು ಸರ್ಕಾರ ಮುಂದೇನು ಮಾಡುತ್ತದೆ ಅನ್ನುವ ಪ್ರಶ್ನೆ ಸದ್ಯಕ್ಕೆ ಬಗೆಹರಿದಿಲ್ಲ . ಕೆಲವರು ಕಾರಾಗೃಹವನ್ನು ಉದ್ಯಾನವಾಗಿ ಪರಿವರ್ತಿಸಿ ಎಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದರೆ, ಇನ್ನೂ ಕೆಲವರು ವಸ್ತು ಪ್ರದರ್ಶನಾಲಯವನ್ನಾಗಿ ಪರಿವರ್ತಿಸಲು ಆಗ್ರಹಿಸುತ್ತಿದ್ದಾರೆ. ಎರಡೂ ಪ್ರಸ್ತಾವನೆಗಳನ್ನು ಟೇಬಲ್‌ ಮೇಲಿಟ್ಟುಕೊಂಡಿರುವ ಸರ್ಕಾರ ಇನ್ನೂ ತನ್ನ ಮೌನ ಮುರಿದಿಲ್ಲ .
ಅಂದಹಾಗೆ- ಈ ಜೈಲು ದೇಶದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಿಗೆ ಹಾಗೂ ಲೋಹಿಯಾ ವಾದಿಗಳಿಗೆ ಆಶ್ರಯ ನೀಡಿತ್ತು .

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X