Get Updates
Get notified of breaking news, exclusive insights, and must-see stories!

ಎಲ್‌ಟಿಟಿಇ ಬೆದರಿಕೆ : ಸಾಯಿಬಾಬಾಗೆ ಬಿಗಿ ಪೊಲೀಸ್‌ ಭದ್ರತೆ

ಬೆಂಗಳೂರು : ಸಾಯಿಬಾಬಾ ಅವರಿಗೆ ಎಲ್‌ಟಿಟಿಇ ಬೆದರಿಕೆ ಒಡ್ಡಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಅವರಿಗೆ ಸಾಕಷ್ಟು ಭದ್ರತೆ ಒದಗಿಸುವಂತೆ ಆಂಧ್ರಪ್ರದೇಶ ಪೊಲೀಸರು ಕರ್ನಾಟಕ ಪೊಲೀಸರನ್ನು ಕೋರಿದ್ದು, ವೈಟ್‌ಫೀಲ್ಡ್‌ ಬಳಿಯ ಬಾಬಾ ಬೃಂದಾವನ ಆಶ್ರಮದಲ್ಲೀಗ ಬಿಗಿ ಪೊಲೀಸ್‌ ಪಹರೆ ಇದೆ.

ಹೈದರಾಬಾದ್‌ನ ಇನ್ಸ್‌ಪೆಕ್ಟರ್‌ ಜನರಲ್‌ ಆಫ್‌ ಪೊಲೀಸ್‌ ಅವರ ಸಂದೇಶದ ಮೇರೆಗೆ ಕರ್ನಾಟಕ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕರು ಬಾಬಾ ಅವರಿಗೆ ಬಿಗಿ ಬಂದೋಬಸ್ತ್‌ ಒದಗಿಸುವಂತೆ ಬೆಂಗಳೂರು ಪೊಲೀಸರಿಗೆ ನಿರ್ದೇಶಿಸಿದ್ದಾರೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ಪತ್ರಿಕೆ ವರದಿ ಮಾಡಿದೆ.

ತನ್ನ ವಿರುದ್ಧ ಶ್ರೀಲಂಕಾ ಸರ್ಕಾರದ ದೌರ್ಜನ್ಯವನ್ನು ಬಾಬಾ ಯಾವುದೇ ಸಭೆ- ಸಮಾರಂಭಗಳಲ್ಲೂ ಖಂಡಿಸಿಲ್ಲ. ಹೀಗಾಗಿ ಜಗತ್ತಿನ ಯಾವುದೇ ತಮಿಳರೂ ಅವರ ಆರಾಧನೆ ಮಾಡಕೂಡದೆಂದು ಸರ್ಕಲ್‌ ಡೈಜೆಸ್ಟ್‌ ಎಂಬ ಇ- ಮೇಲ್‌ ಸುದ್ದಿ ಪತ್ರದ ಮೂಲಕ ಎಲ್‌ಟಿಟಿಇ ಎಚ್ಚರಿಕೆ ಕೊಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

ಲಂಕಾ ಅಧ್ಯಕ್ಷೆ ಚಂದ್ರಿಕಾ ಕುಮಾರತುಂಗೆ ಬಾಬಾ ಅವರನ್ನು ಭೇಟಿಯಾಗಿದ್ದರು. ಲಂಕಾ ಸರ್ಕಾರದ ಕೆಲವು ಅಧಿಕಾರಿಗಳೂ ಬಾಬಾ ನಿಕಟವರ್ತಿಗಳೆಂಬ ಸುದ್ದಿಗಳೂ ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಬಾಬಾ ಅವರು ಲಂಕಾ ಸರ್ಕಾರ ತಮ್ಮ ಮೇಲೆ ನಡೆಸುತ್ತಿರುವ ಹಿಂಸಾಚಾರದ ವಿರುದ್ಧ ದನಿಯೆತ್ತದಿರುವುದಕ್ಕೆ ಎಲ್‌ಟಿಟಿಇ ಅವರಿಗೆ ಬೆದರಿಕೆ ಹಾಕಿದೆ ಎನ್ನಲಾಗುತ್ತಿದೆ.

ತಮಿಳುನಾಡಿನ ಊಟಿಯಲ್ಲಿರುವ ಬಾಬಾ ಅವರ ಇನ್ನೊಂದು ಆಶ್ರಮಕ್ಕೆ ಭದ್ರತೆ ಒದಗಿಸುವಂತೆ ತಮಿಳುನಾಡು ಪೊಲೀಸರಿಗೂ ಸಂದೇಶ ತಲುಪಿದೆ. ಈಗ ಬೆಂಗಳೂರಲ್ಲಿ ಬಾಬಾ ಯಾವುದೇ ಸಮಾರಂಭಗಳಿಗೆ ಹಾಜರಾಗುವಾಗ ಹಾಗೂ ಪುಟ್ಟಪರ್ತಿಯಿಂದ ಬೆಂಗಳೂರಿಗೆ ಸಂಚರಿಸುವಾಗ ಸದಾ ಅವರಿಗೆ ಬಿಗಿ ಪೊಲೀಸ್‌ ಪಹರೆ ಒದಗಿಸಲಾಗುತ್ತಿದೆ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+