Get Updates
Get notified of breaking news, exclusive insights, and must-see stories!

ಆಗಸ್ಟ್‌ನಲ್ಲಿ ಚುರುಕಾದ ಮಳೆ : ರೈತರ ಮುಖದಲ್ಲಿ ಚಿಮ್ಮಿದ ಮಂದಹಾಸ

ಬೆಂಗಳೂರು : ಆಗಸ್ಟ್‌ನಲ್ಲೂ ಮಳೆ ಬರುವುದು ಕಷ್ಟ ಎಂದು ಖಂಡತುಂಡವಾಗಿ ಹೇಳಿದ್ದ ಹವಾಮಾನ ಇಲಾಖೆಯ ವರದಿಗಳನ್ನು ಸುಳ್ಳಾಗಿಸುವಂತೆ ವರಮಹಾಲಕ್ಷ್ಮೀ ಹಬ್ಬದ ದಿನದಿಂದ ರಾಜ್ಯದಲ್ಲಿ ಮುಂಗಾರು ಬಲಗೊಳ್ಳುತ್ತಿದೆ.

ಮಳೆಯ ಸುಳಿವೇ ಕಾಣದ ಊರುಗಳಲ್ಲೂ ಮಳೆ ಆಗುತ್ತಿದೆ. ರೈತರ ಕಣ್ಣುಗಳಲ್ಲಿ ಭರವಸೆಯ ಮಿಂಚುಗಳು ಹೊಳೆಯುತ್ತಿವೆ. ಬಳ್ಳಾರಿ, ಹಾಸನ, ಬಸವಕಲ್ಯಾಣ, ಹುಬ್ಬಳ್ಳಿ, ಧಾರವಾಡ, ಬೆಳಗಾವಿಗಳಲ್ಲಿ ಮಳೆ ಆಗಿದೆ. ಅನಿರೀಕ್ಷಿತವಾಗಿ ಮೋಡ ಮುಸುಕಿ, ಸುರಿದ ಮಳೆಯಿಂದ ರೈತರು ಹರ್ಷಚಿತ್ತರಾಗಿದ್ದಾರೆ. ಧಾನ್ಯಲಕ್ಷ್ಮೀ ತಮಗೆ ಒಲಿದೇ ಒಲಿಯುತ್ತಾಳೆ. ವರಮಹಾಲಕ್ಷ್ಮೀ ಹಬ್ಬದ ಶುಕ್ರವಾರ ತಮಗೆ ಶುಭ ಶುಕ್ರವಾರವಾಗಿ ಪರಿಣಮಿಸಿದೆ ಎಂದು ಆನಂದದಿಂದ ನುಡಿದಿದ್ದಾರೆ.

ಬೆಳಗಾವಿ : ಉತ್ತರ ಕರ್ನಾಟಕದಲ್ಲಿ ಮಳೆ ಆರಂಭವಾಗಿರುವುದರಿಂದ ಬರಗಾಲದಿಂದ ತತ್ತರಿಸಿದ್ದ ಜನತೆಯ ಮುಖದಲ್ಲಿ ಮಂದಹಾಸ ಮೂಡಿದೆ. ಮುಂದಿನ ದಿನದಲ್ಲಿ ಕುಡಿಯುವ ನೀರಿಗೂ ಪರಿತಪಿಸುವ ಸ್ಥಿತಿ ಬರುತ್ತದೆಂದು ಭೀತರಾಗಿದ್ದ ಜನರು ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಉತ್ತರ ಕರ್ನಾಟಕದ ಕೆಲವೆಡೆ ಹಸಿ ಮಳೆ ಆದ ವರದಿಗಳು ಬಂದಿವೆ. ಗದಗ ಜಿಲ್ಲೆಯಾದ್ಯಂತ ಆಗಸ್ಟ್‌ನಲ್ಲಿ ಮಳೆ ಆರಂಭವಾಗಿದ್ದು, ಒಟ್ಟಾರೆ 240.8 ಮಿ.ಮೀಟರ್‌ ಮಳೆ ಸುರಿದಿದೆ. ಗುರುವಾರ ಬಾಗಲಕೋಟೆ ಜಿಲ್ಲೆಯಲ್ಲಿ 3 ಸೆಂಟಿ ಮೀಟರ್‌ನಷ್ಟು ಮಳೆಯಾಗಿದೆ. ಶುಕ್ರವಾರ ಕೂಡ ಇಲ್ಲಿ ಮಳೆ ಸುರಿದಿದೆ. ಈಗ ರೈತರು ಜೋಳದ ಬಿತ್ತನೆಯ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಬಳ್ಳಾರಿ : ಕಳೆದ ಎರಡು ತಿಂಗಳಿನಿಂದ ಇತ್ತ ಸುಳಿಯದಿದ್ದ ಮಳೆರಾಯ ಶುಕ್ರವಾರ ಜಿಲ್ಲೆಗೆ ಕಾಲಿಟ್ಟಿದ್ದಾನೆ. ಕೊಟ್ಟೂರು, ಕೂಡ್ಲಿಗಿಯಲ್ಲೂ ಮಳೆ ಸುರಿಸಿದ್ದಾನೆ. ಬಸವ ಕಲ್ಯಾಣ ತಾಲೂಕಿನಲ್ಲೂ ಕಳೆದೆರಡು ದಿನದಿಂದ ಮಳೆ ಆಗುತ್ತಿದೆ. ಮುಂಗಾರು ಕೈಕೊಟ್ಟರೂ ಹಿಂಗಾರು ಹಂಗಾಮಿನ ಬೆಳೆ ಬಂದೀತೆಂಬ ಆಶಾಭಾವನೆ ಈಗ ರೈತರದಾಗಿದೆ.

ಮಡಿಕೇರಿ: ಕಾವೇರಿ ಜಲಾನಯನ ಪ್ರದೇಶದಲ್ಲೂ ಮಳೆ ಚುರುಕಾಗಿದ್ದು, ಕೆ.ಆರ್‌.ಎಸ್‌.ಗೆ ನೀರು ಬರುವ ಲಕ್ಷಣಗಳೂ ಕಂಡುಬಂದಿವೆ. ಭಾಗಮಂಡಲದಲ್ಲಿ ಗುರುವಾರ 102.4 ಮಿ.ಮೀಟರ್‌ ಮಳೆ ಆಗಿದೆ.

ಹುಬ್ಬಳ್ಳಿ : ಗುರುವಾರ ಸಂಜೆಯಿಂದಲೇ ಹುಬ್ಬಳ್ಳಿಯಲ್ಲಿ ಸೋನೆ ಮಳೆ ಆರಂಭವಾಗಿದೆ. ಬಾದಾಮಿ, ಗುಳೇದಗುಡ್ಡ ಮೊದಲಾದ ಕಡೆಗಳಲ್ಲೂ ಮಳೆ ಸಣ್ಣಗೆ ಮಳೆ ಸುರಿಯುತ್ತಿದೆ. ಧಾರವಾಡ, ಕೊಪ್ಪಳ, ಬಿಜಾಪುರಗಳಲ್ಲಿ ಯೂ ಮಳೆ ಸುಳಿದಿದೆ. ಶೇಂಗಾ, ತರಕಾರಿ, ಮೆಣಸಿನಕಾಯಿ ಬಿತ್ತನೆ ಆರಂಭವಾಗಿದೆ.

ಕಾರವಾರ : ಉತ್ತರ ಕನ್ನಡದಲ್ಲೂ ಮಳೆ ಚುರುಕಾಗಿದ್ದು, ಕಾರವಾರದಲ್ಲಿ 122.3 ಮಿ.ಮೀಟರ್‌ ಮಳೆ ಆಗಿದೆ. ಘಟ್ಟಪ್ರದೇಶದಲ್ಲಿ ಮಾತ್ರ ಮಳೆಯ ಪ್ರಮಾಣ ಕಡಿಮೆ ಇದೆ.

ಹಾಸನ : ಆಗಸ್ಟ್‌ 1ರಿಂದ ಜಿಲ್ಲೆಯಾದ್ಯಂತ ಅಲ್ಲಲ್ಲಿ ಮಳೆ ಚುರುಕಾಗಿದೆ. ಬೇಲೂರು, ಗೆಂಡೆಹಳ್ಳಿ, ಅರೆ ಹಳ್ಳಿಯಲ್ಲಿ ತಲಾ 3 ಸೆಂಟಿ ಮೀಟರ್‌ನಷ್ಟು ಮಳೆಯಾಗಿದೆ. ಕಣಕಟ್ಟೆಯಲ್ಲಿ 15 ಮಿ.ಮೀಟರ್‌ ಮಳೆ ಬಿದ್ದಿದೆ. ಬೆಂಗಳೂರಿನ ಅಲ್ಲಲ್ಲಿ ಕೂಡ ಮಳೆ ಆಗುತ್ತಿದೆ.

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+