ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಮನೆ ಮಗಳಾಗಿ ತವರಿಗೆ ಬಂದಿದ್ದೇನೆ’-ಬಳ್ಳಾರಿಯಲ್ಲಿ ಸುಷ್ಮಾ ಸ್ವರಾಜ್‌

By Staff
|
Google Oneindia Kannada News

ಬಳ್ಳಾರಿ: ‘ಸಚಿವೆಯಾಗಿ ಅಥವಾ ರಾಜಕಾರಣಿಯಾಗಿ ಇಲ್ಲಿಗೆ ಬಂದಿಲ್ಲ . ಮನೆ ಮಗಳಾಗಿ ತವರಿಗೆ ಬಂದಿದ್ದೇನೆ’ ಎಂದು ಶುಕ್ರವಾರ ಬೆಳಗ್ಗೆ ಬಳ್ಳಾರಿಗೆ ಆಗಮಿಸಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್‌ ಹೇಳಿದ್ದಾರೆ.

ತಮ್ಮನ್ನು ಸ್ವಾಗತಿಸಲು ನೆರೆದಿದ್ದ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ನೋಡಿ ಪುಳಕಗೊಂಡಿದ್ದ ಅವರು ಬಳ್ಳಾರಿಯಾಂದಿಗೆ ತಮಗೆ ವ್ಯಕ್ತಿಗತ ಸಂಬಂಧವಿದೆ ಎಂದು ಸುದ್ದಿಗೋಷ್ಠಿಯಲ್ಲಿ ಬಣ್ಣಿಸಿದರು. ‘ಮನೆ ಮಗಳಾಗಿ ತವರಿಗೆ ಆಗಮಿಸಿದ್ದೇನೆ. ಇಲ್ಲಿನ ಜನತೆಯ ಪ್ರೀತಿ ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಲು ನನಗೆ ಹೊಸ ಉತ್ಸಾಹ ನೀಡಿದೆ’ ಎಂದು ಅವರು ಹೇಳಿದರು.

ಬಳ್ಳಾರಿ ಭೇಟಿಯ ಸಂದರ್ಭದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುವ ಸುಷ್ಮಾ ಸ್ವರಾಜ್‌, ಎನ್ನೋನ್ಲೇ ಇಂಡಿಯಾ ಹಾಗೂ ವಿಶುವಲ್‌ ಪಬ್ಲಿಸಿಟಿ ಏರ್ಪಡಿಸಿರುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X