Get Updates
Get notified of breaking news, exclusive insights, and must-see stories!

ಇ-ವಾಣಿಜ್ಯ ಸಲ್ಯುಷನ್ಸ್‌ಗೆ ‘ಇನ್ಫೋಸಿಸ್‌-ಇಂಟೆಲ್‌’ ಪ್ರಯೋಗಾಲಯ

ಬೆಂಗಳೂರು : ಇಂಟೆಲ್‌ ಕಾರ್ಪೊರೇಷನ್‌ನ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕ್ರೇಗ್‌ ಬ್ಯಾರೆಟ್‌ ಇನ್ಫೋಸಿಸ್‌ ಆವರಣದಲ್ಲಿ ಇನ್ಫೋಸಿಸ್‌- ಇಂಟೆಲ್‌ ಇ- ವಾಣಿಜ್ಯ ಸಲ್ಯುಷನ್ಸ್‌ ಪ್ರಯೋಗಾಲಯವನ್ನು ಶುಕ್ರವಾರ ಉದ್ಘಾಟಿಸಿದರು.

ಎರಡು ದಿನಗಳ ಕಾಲದ ಬೆಂಗಳೂರಿನ ತಮ್ಮ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರೊಂದಿಗಿನ ಉಪಹಾರ ಸಭೆಯಾಂದಿಗೆ ಬ್ಯಾರೆಟ್‌ ಪ್ರಾರಂಭಿಸಿದರು. ಒಂದು ತಾಸು ಕಾಲದ ಈ ಭೇಟಿಯಲ್ಲಿ ಕೃಷ್ಣ ಹಾಗೂ ಬ್ಯಾರೆಟ್‌ ನಡುವೆ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಚಾರ ವಿನಿಮಯ ನಡೆಯಿತು.

‘ಇನ್ಫೋಸಿಸ್‌- ಇಂಟೆಲ್‌’ ಇ- ವಾಣಿಜ್ಯ ಸಲ್ಯುಷನ್ಸ್‌ಗೆ ಸಂಬಂಧಿಸಿದ ಮೊದಲ ಪ್ರಯೋಗಾಲಯವಿದು. ಇಂಟೆಲ್‌ ವಿನ್ಯಾಸದ ಆಧಾರದಲ್ಲಿ ಇದು ಕಾರ್ಯ ನಿರ್ವಹಿಸಲಿದೆ. ಸಾಫ್ಟ್‌ವೇರ್‌ ಎಂಜಿನಿಯರಿಂಗ್‌ ಮತ್ತು ತಂತ್ರಜ್ಞಾನ ಪ್ರಯೋಗಾಲಯಗಳ ಗುಣಗಳನ್ನೂ ಇದು ಹುದುಗಿಸಿಟ್ಟುಕೊಂಡಿದೆ ಎಂದು ಬ್ಯಾರೆಟ್‌ ಹೇಳಿದರು.

ಉತ್ತರದಾಯಿಕವಾಗಿ ಬಂದ ಸಂಪತ್ತನ್ನು ಬಳಸಿಕೊಂಡು ಇಂಟೆಲ್‌ ಪ್ಲಾಟ್‌ ಫಾರ್ಮ್‌ನಂಥವುಗಳನ್ನು ಸ್ಥಾಪಿಸಲು ಕಂಪನಿಗಳಿಗೆ ಅನುವು ಮಾಡಿಕೊಡುವ ಲೆಗಾಕಾಮ್‌ ಸರ್ವಿಸ್‌ಗೆ ಬ್ಯಾರೆಟ್‌ ಚಾಲನೆ ನೀಡಿದರು. ಇ- ವಾಣಿಜ್ಯ ಸಲ್ಯುಷನ್ಸ್‌ ಒದಗಿಸುವ ಯೋಜನೆಯಲ್ಲಿ ಇಂಟೆಲ್‌ ಪ್ಲಾಟ್‌ಫಾರ್ಮ್‌ ಹಾಗೂ ಆರ್ಕಿಟೆಕ್ಚರ್‌ ಮೂಲದಲ್ಲಿ ಇನ್ಫೋಸಿಸ್‌ ಕಾರ್ಯ ನಿರ್ವಹಿಸಲಿದೆ.

ಇಂಟೆಲ್‌ ಜೊತೆ ಕೈಜೋಡಿಸುವ ವಿಶೇಷ ಅವಕಾಶ ನಮ್ಮ ಕಂಪನಿಗೆ ಸಿಕ್ಕಿರುವುದು ಸಂತೋಷ ತಂದಿದೆ ಎಂದು ಇನ್ಫೋಸಿಸ್‌ ಅಧ್ಯಕ್ಷ ಎನ್‌.ಆರ್‌.ನಾರಾಯಣ ಮೂರ್ತಿ ಹೇಳಿದರು.

ತಂತ್ರಜ್ಞಾನದಲ್ಲಿ ವಿನ್ಯಾಸ ಹಾಗೂ ಅಭಿವೃದ್ಧಿಗೆ ಪೂರಕವಾದ ತ್ವರಿತ ಸೇವೆಯನ್ನು ‘ಇನ್ಫೋಸಿಸ್‌- ಇಂಟೆಲ್‌’ ಒದಗಿಸಲಿದೆ. ಕಂಪನಿಗಳ ಸರ್ವತೋಮುಖ ಪ್ರಗತಿಯಗೇ ನಮ್ಮ ಒತ್ತು ಎಂದು ಬ್ಯಾರೆಟ್‌ ತಿಳಿಸಿದರು.

(ಯುಎನ್‌ಐ)

ವಾರ್ತಾ ಸಂಚಯ
ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+