Get Updates
Get notified of breaking news, exclusive insights, and must-see stories!

ಗೋಪಿಗೆ ರಾಜೀವ್‌ ಖೇಲ್‌ ರತ್ನ, ವೆಂಕಟೇಶ್‌ ಪ್ರಸಾದ್‌ಗೆ ಅರ್ಜುನ

ನವದೆಹಲಿ : ಕರ್ನಾಟಕದ ಕ್ರಿಕೆಟಿಗ ವೆಂಕಟೇಶ ಪ್ರಸಾದ್‌, ಈಜುಗಾರ ಜೆ.ಅಭಿಜಿತ್‌, ಕಬಡ್ಡಿ ಪಟು ಸಿ.ಹೊನ್ನಪ್ಪ ಹಾಗೂ ಅಥ್ಲೀಟ್‌ ಮಿಲ್ಕಾಸಿಂಗ್‌ (ಜೀವಮಾನದ ವಿಶಿಷ್ಟ ಸೇವೆಗಾಗಿ) ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿರುವ 30 ಕ್ರೀಡಾಪಟುಗಳ ಪೈಕಿ ಸೇರಿದ್ದಾರೆ. ಅಖಿಲ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌,ಭಾರತದ ಪುಲ್ಲೇಲ ಗೋಪಿಚಂದ್‌ ಅವರನ್ನು ರಾಜೀವ್‌ ಗಾಂಧಿ ಖೇಲ್‌ ರತ್ನ ಪ್ರಶಸ್ತಿಗೆ ಆರಿಸಲಾಗಿದೆ.

ದ್ರೋಣ ಪ್ರಶಸ್ತಿಗೆ ಐವರು ತರಪೇತುದಾರರನ್ನು ಆಯ್ಕೆ ಮಾಡಲಾಗಿದೆ. ರಾಜೀವ್‌ ಗಾಂಧಿ ಖೇಲ್‌ ರತ್ನ ಪ್ರಶಸ್ತಿಯು 3 ಲಕ್ಷ ರುಪಾಯಿ, ಅರ್ಜುನ ಪ್ರಶಸ್ತಿ 1.5 ಲಕ್ಷ ರುಪಾಯಿ ಹಾಗೂ ದ್ರೋಣಚಾರ್ಯ ಪ್ರಶಸ್ತಿ 2.5 ಲಕ್ಷ ರುಪಾಯಿ ನಗದು ಪುರಸ್ಕಾರ ಒಳಗೊಂಡಿದೆ.

ಕ್ರೀಡಾ ಕ್ಷೇತ್ರಕ್ಕೆ ತಮ್ಮ ಜೀವಮಾನದಲ್ಲಿ ಸಲ್ಲಿಸಿರುವ ವಿಶಿಷ್ಟ ಸೇವೆಗಾಗಿ 15 ಕ್ರೀಡಾ ಪಟುಗಳನ್ನು ಅರ್ಜುನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ತಿಂಗಳ 29ರಂದು ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರಪತಿ ಕೆ.ಆರ್‌.ನಾರಾಯಣ್‌ ಪ್ರಶಸ್ತಿಗಳನ್ನು ಪ್ರದಾನ ಮಾಡುವರು.

ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿರುವವರು : ವೆಂಕಟೇಶ ಪ್ರಸಾದ್‌ (ಕ್ರಿಕೆಟ್‌), ಬೀನಾಮೋಲ್‌ (ಅಥ್ಲೆಟಿಕ್ಸ್‌), ಬಲ್ಜೀತ್‌ ಸಿಂಗ್‌ ಸೈನಿ ಹಾಗೂ ಟಿಂಗೊಲಿಮ ಚಾನು (ಹಾಕಿ), ಅಭಿನವ್‌ ಬಿಂದ್ರಾ (ಶೂಟಿಂಗ್‌), ಸೆಬಾಸ್ಟಿಯನ್‌ ಕ್ಸೇವಿಯರ್‌ ಹಾಗೂ ಜೆ.ಅಭಿಜಿತ್‌ (ಈಜು), ರಣಧೀರ್‌ ಸಿಂಗ್‌ ಕೃಪಾಶಂಕರ್‌ ಪಟೇಲ್‌ (ಕುಸ್ತಿ), ಜಾರ್ಜ್‌ ಥಾಮಸ್‌ (ಬ್ಯಾಡ್ಮಿಂಟನ್‌), ಸಿ.ಹೊನ್ನಪ್ಪ (ಕಬಡ್ಡಿ), ಸನಮಾಚ ಚಾನು (ವೇಟ್‌ ಲಿಫ್ಟಿಂಗ್‌), ಎಸ್‌. ವಿಜಯಲಕ್ಷ್ಮಿ (ಚೆಸ್‌).

ಜೀವಮಾನದ ವಿಶೇಷ ಸಾಧನೆಗಾಗಿ- ಕಲ್ಪನಾ ದೇವನಾಥ್‌ (ಜಿಮ್ನಾಸ್ಟಿಕ್‌), ಗುರ್‌ಬೀರ್‌ ಸಿಂಗ್‌ ಸಂದು (ಶೂಟಿಂಗ್‌), ಕೆ.ಡಿ.ಜಾಧವ್‌ ಹಾಗೂ ನರೇಶ್‌ ಕುಮಾರ್‌ (ಕುಸ್ತಿ), ಆರ್‌.ಎಸ್‌.ಭೋಲಾ, ಬಾಲ್‌ ಕಿಷನ್‌ ಸಿಂಗ್‌, ಜಲಾಲುದ್ದೀನ್‌ ರಿಜ್ವಿ ಹಾಗೂ ಮಧು ಯಾದವ್‌ (ಹಾಕಿ), ಪಿ.ವಿ.ರಾಮಣ್ಣ (ವಾಲಿಬಾಲ್‌), ಅಖ್ತರ್‌ ಅಲಿ (ಟೆನಿಸ್‌), ಮಿಲ್ಕಾ ಸಿಂಗ್‌, ರಚನಾ ಗೋವಿಲ್‌ ಹಾಗೂ ವಿಜಯ್‌ ಮಾಲಾ ಭಾನೋಟ್‌ (ಅಥ್ಲೆಟಿಕ್ಸ್‌), ಜೋಗಿಂದರ್‌ ಸಿಂಗ್‌ ಬೇಡಿ (ಅಂಗವಿಕಲರ ಅಥ್ಲೆಟಿಕ್ಸ್‌), ಸುರೇಶ್‌ ಸಿಂಗ್‌ ಕನ್ವಾಸಿ (ರೋಯಿಂಗ್‌).

ದ್ರೋಣಾಚಾರ್ಯ ಪ್ರಶಸ್ತಿಗೆ ಆಯ್ಕೆಯಾಗಿರುವವರು : ಗುರ್‌ ದಯಾಳ್‌ ಸಿಂಗ್‌ (ಹಾಕಿ), ಹಂಸ ಶರ್ಮಾ (ವೇಟ್‌ ಲಿಫ್ಟಿಂಗ್‌), ಮಹಮ್ಮದ್‌ ಆರಿಫ್‌ (ಬ್ಯಾಡ್ಮಿಂಟನ್‌), ಗೋಪಾಲ ಫಡ್ಕೆ (ಕೋಕೋ), ಭೂಪೇಂದರ್‌ ಧವನ್‌ (ಪವರ್‌ ಲಿಫ್ಟಿಂಗ್‌).

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+