Get Updates
Get notified of breaking news, exclusive insights, and must-see stories!

ಪಿರಿಯಾಪಟ್ಟಣದ ಬೈಲುಕುಪ್ಪೆಯಲ್ಲಿ ಶಾರುಖ್‌ ಖಾನ್‌

ಮೈಸೂರು : ಪಿರಿಯಾಪಟ್ಟಣ ತಾಲ್ಲೂಕಿನ ಬೈಲುಕುಪ್ಪೆ ಬುಧವಾರ ರಂಗೇರಿತ್ತು. ಧರ್ಮ ಗುರು ದಲೈ ಲಾಮಾ ಹಾಗೂ ಬಾಲಿವುಡ್‌ ನಟ ಶಾರುಖ್‌ ಖಾನ್‌ ಅವರನ್ನು ಒಟ್ಟು ನೋಡುವ ಭಾಗ್ಯ ಅಭಿಮಾನಿಗಳದ್ದು. ಖಾಸಗಿ ಹೆಲಿಕಾಪ್ಟರಿನಲ್ಲಿ ಬಂದಿಳಿದ ಶಾರುಖ್‌ ಬಿಳಿ ವಸ್ತ್ರವೊಂದನ್ನು ಕತ್ತಿಗೆ ಸುತ್ತಿಕೊಂಡು ಬಂದಿದ್ದರು. ಆಸ್ತಿಕ ಭಾವ ಅವರಲ್ಲಿ ತುಂಬಿತ್ತು.

ತಮ್ಮ ನಿರ್ಮಾಣದ ‘ಅಶೋಕ ದಿ ಗ್ರೇಟ್‌’ ಚಿತ್ರಕ್ಕೆ ದಲೈ ಲಾಮಾ ಅವರ ಆಶೀರ್ವಾದ ಪಡೆಯಲು ಶಾರುಖ್‌ ಬಂದಿದ್ದರು. ಬೌದ್ಧ ಸನ್ಯಾಸಿಗಳ ಸ್ವಾಗತ ಅವರಿಗಾಗಿ ಕಾದಿತ್ತು. ಬಿಗಿ ಪೊಲೀಸ್‌ ಪಹರೆಯ ನಡುವೆ ಧರ್ಮ ಗುರು- ಸೆನ್ಸೇಷನ್‌ ನಟರ ಭೇಟಿಯಾಯಿತು. ಸಾಂಪ್ರದಾಯಿಕ ಶಾಲನ್ನು ಹೊದಿಸಿದ ಧರ್ಮ ಗುರು ಶಾರುಖ್‌ಗೆ ಆಶೀರ್ವಾದ ಮಾಡಿದರು.

ಭೇಟಿಯ ನಂತರ ಸುದ್ದಿಗಾರರೊಟ್ಟಿಗೆ ಶಾರುಖ್‌ ಮಾತಾಡಿದರು. ...

ಅಕ್ಟೋಬರ್‌ನಲ್ಲಿ ‘ಅಶೋಕ ದಿ ಗ್ರೇಟ್‌’ ಚಿತ್ರ ತೆರೆಕಾಣಲಿದ್ದು, ಗುರುಗಳ ಆಶೀರ್ವಾದ ಪಡೆಯಲು ಬಂದಿದ್ದೆ. ನಾನು ಧಾರ್ಮಿಕ ಮನುಷ್ಯನಲ್ಲ. ಆದರೆ, ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ. ದಲೈ ಲಾಮಾ ಅವರು ಶಾಂತಿ ಮತ್ತು ಪ್ರೀತಿ ಹಂಚುತ್ತಿದ್ದಾರೆ. ಈ ಕಾರಣಕ್ಕೆ ಅವರನ್ನು ಕಂಡರೆ ನನಗೆ ಅಪಾರ ಗೌರವ.

ನನ್ನ ಮಗ ಆರ್ಯನ್‌ಗೆ ಗುರುಗಳ ಉಪನ್ಯಾಸ ಕೇಳಿಸಬೇಕೆಂಬುದು ನನ್ನ ಆಸೆ. ನನ್ನ ಹೆಂಡತಿ ಗೌರಿ ಜೊತೆಯಲ್ಲಿ ಆತನನ್ನು ಮತ್ತೆ ಇಲ್ಲಿಗೆ ಕರೆದುಕೊಂಡು ಬರುತ್ತೇನೆ. ಐತಿಹಾಸಿಕ ಚಿತ್ರಗಳು ಜನರಿಗೆ ಬದಲಾವಣೆ ನೀಡಲಿವೆ. ಈ ಕಾರಣಕ್ಕೇ ‘ಅಶೋಕ ದಿ ಗ್ರೇಟ್‌’ ಬಗ್ಗೆ ತುಂಬಾ ಸೀರಿಯಸ್‌ ಆಗಿರುವುದು. ಡಿಸೆಂಬರ್‌ವರೆಗೆ ಈ ಕೆಲಸ ಬಿಟ್ಟು ಬೇರೆ ಯಾವ ಕೆಲಸವನ್ನೂ ನಾನು ಒಪ್ಪಿಕೊಂಡಿಲ್ಲ. ‘ಅಶೋಕ ದಿ ಗ್ರೇಟ್‌’ ಚಿತ್ರದಲ್ಲಿ ದಲೈ ಲಾಮಾ ಸಂದೇಶವೂ ಇರುತ್ತದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+