Get Updates
Get notified of breaking news, exclusive insights, and must-see stories!

ಸುಷ್ಮಾ ಸ್ವರಾಜ್‌ ಮತ್ತೆ ಬಳ್ಳಾರಿಗೆ!ಆ.2 ರಿಂದ 3 ದಿನಗಳ ಪ್ರವಾಸ

ಬೆಂಗಳೂರು : ಕರ್ನಾಟಕದ ಭೂಪಟದಲ್ಲಿ ಬಳ್ಳಾರಿ ಎನ್ನುವ ಬಿಸಿಲು ಬಡತನ ಸಮೃದ್ಧವಾಗಿರುವ ಪ್ರದೇಶವೊಂದಿದೆ ಎನ್ನುವ ಸಂಗತಿಯನ್ನು ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾಗಾಂಧಿ ಮರೆತೇ ಹೋಗಿದ್ದರೂ, ಸುಷ್ಮಾ ಸ್ವರಾಜ್‌ (ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವೆ ) ಎನ್ನುವ ಹೆಣ್ಣು ಮಗಳಿಗೆ ಬಳ್ಳಾರಿಯ ನಂಟು ಇನ್ನೂ ತೀರಿದಂತಿಲ್ಲ . ಅವರು ಬಳ್ಳಾರಿಗೆ ಬರುತ್ತಿದ್ದಾರೆ!

ಆಗಸ್ಟ್‌ 2ರಿಂದ ಮೂರು ದಿನಗಳ ಕಾಲ ಸುಷ್ಮಾ ಸ್ವರಾಜ್‌ ಬಳ್ಳಾರಿ ಪ್ರವಾಸ ಕೈಗೊಳ್ಳಲಿದ್ದಾರೆ. ಆಗಸ್ಟ್‌ 2 ರಂದು ಬೆಳಗ್ಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯುವ ಸುಷ್ಮಾ ಸ್ವರಾಜ್‌ ಅಂದೇ ಬಳ್ಳಾರಿಗೆ ತೆರಳುವರು. ಆಗಸ್ಟ್‌ 3 ಮತ್ತು 4ರಂದು ವಿವಿಧ ಯೋಜನೆಗಳನ್ನು ಅವರು ಉದ್ಘಾಟಿಸಲಿದ್ದಾರೆ.

ಎನ್ನೋನ್ಲೇ ಇಂಡಿಯಾದ ವಾರ್ಷಿಕೋತ್ಸದ ಅಂಗವಾಗಿ ಪ್ರಚಾರ ವಲಯದ ನಿರ್ದೇಶನಾಲಯ ಆಯೋಜಿಸಿರುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲಿರುವ ಸಚಿವೆ ವಿಶುವಲ್‌ ಪಬ್ಲಿಸಿಟಿ ಹಮ್ಮಿಕೊಂಡಿರುವ ವಸ್ತು ಪ್ರದರ್ಶನವನ್ನೂ ಉದ್ಘಾಟಿಸುವರು. ಆಗಸ್ಟ್‌ 4ರಂದು ಸುಷ್ಮಾ ಬಳ್ಳಾರಿಯಿಂದ ನವದೆಹಲಿಗೆ ವಾಪಸ್ಸಾಗುವರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+