Get Updates
Get notified of breaking news, exclusive insights, and must-see stories!

ಆ.9 ರಂದು ರಾಜ್ಯಾದ್ಯಂತ ಕಾಲೇಜು ಅಧ್ಯಾಪಕರಿಂದ ತರಗತಿ ಬಹಿಷ್ಕಾರ

ಬೆಂಗಳೂರು : ಆಗಸ್ಟ್‌ 9 ರಂದು ರಾಜ್ಯಾದ್ಯಂತ ಕಾಲೇಜು ಬಂದ್‌ಗೆ ‘ರಾಜ್ಯ ವಿಶ್ವ ವಿದ್ಯಾಲಯ ಮತ್ತು ಕಾಲೇಜು ಅಧ್ಯಾಪಕರ ಒಕ್ಕೂಟಗಳ ಸಂಘ’ ಕರೆ ನೀಡಿದೆ.

ಕಾಲೇಜು ಶಿಕ್ಷಣವನ್ನು ಅಸ್ಥಿರಗೊಳಿಸುವ ಸರ್ಕಾರದ ಉನ್ನತ ಶಿಕ್ಷಣ ನೀತಿಯನ್ನು ಪ್ರತಿಭಟಿಸಿ ಈ ಬಂದ್‌ಗೆ ಕರೆ ನೀಡಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ರವೀಂದ್ರ ರೇಷ್ಮೆ ತಿಳಿಸಿದರು. ಆಗಸ್ಟ್‌ 9 ರಂದು ಎಲ್ಲ ಪದವಿ ಕಾಲೇಜು ಅಧ್ಯಾಪಕರು ತರಗತಿಗಳನ್ನು ಬಹಿಷ್ಕರಿಸುವ ಮೂಲಕ ಸರ್ಕಾರದ ಉನ್ನತ ಶಿಕ್ಷಣ ನೀತಿಯನ್ನು ಪ್ರತಿಭಟಿಸುವರು ಎಂದು ಅವರು ಹೇಳಿದರು.

ಸೋಮವಾರ ನಡೆದ ‘ರಾಜ್ಯ ವಿಶ್ವ ವಿದ್ಯಾಲಯ ಮತ್ತು ಕಾಲೇಜು ಅಧ್ಯಾಪಕರ ಒಕ್ಕೂಟಗಳ ಸಂಘ’ ದ ಸಭೆಯಲ್ಲಿ ಬಂದ್‌ ತೀರ್ಮಾನವನ್ನು ಕೈಗೊಳ್ಳಲಾಗಿದ್ದು , ಸರ್ಕಾರ ತನ್ನ ನೀತಿಯನ್ನು ಮಾರ್ಪಡಿಸಿಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ರವೀಂದ್ರ ರೇಷ್ಮೆ ಹೇಳಿದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+