ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋಡ ಕರಗಿಸಿ, ಮಳೆ ಸುರಿಸಲು 1 ಕೋಟಿ ರು.ನೆರವು ಯಾಚನೆ!

By Staff
|
Google Oneindia Kannada News

ಬೆಂಗಳೂರು: ಮೋಡಗಳ ಕರಗಿಸಿ, ಮಾನವನೇ ಮಳೆ ಸುರಿಸುವಂತೆ ಮಾಡುವಷ್ಟು ನಮ್ಮ ವಿಜ್ಞಾನ ಮುಂದುವರೆದಿದೆಯೇ ? ಹಾಗಿದ್ದರೆ ಕರ್ನಾಟಕ ಎದುರಿಸುತ್ತಿರುವ ಬರ ಪರಿಸ್ಥಿತಿ ನಿವಾರಣೆಗೆ ಇದೇ ಯಾಕೆ ಮಾರ್ಗವಾಗಬಾರದು ?

ಬರ ಪರಿಹಾರಕ್ಕೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಸಲ್ಲಿಸಿರುವ ಮನವಿ ಪತ್ರದಲ್ಲಿ ರಾಜ್ಯಸಭೆಯ ಮಾಜಿ ಸದಸ್ಯ ಎಫ್‌.ಎಂ.ಖಾನ್‌ ಈ ವಿಷಯವನ್ನೂ ಪ್ರಸ್ತಾಪಿಸಿದ್ದಾರೆ. ಬರ ಪರಿಹಾರಕ್ಕೆ ನೆರವು ನೀಡುವುದರ ಜೊತೆಗೆ ಮೋಡಗಳ ಮೇಲೆ ರಾಸಾಯನಿಕಗಳನ್ನು ಸಿಂಪಡಿಸಿ ಮಳೆ ಸುರಿಸಲು 1 ಕೋಟಿ ರುಪಾಯಿ ಪ್ರತ್ಯೇಕ ನೆರವನ್ನು ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗಿದೆ.

1975ರಲ್ಲಿ ಲಿಂಗನಮಕ್ಕಿ ಜಲಾನಯನ ಪ್ರದೇಶಗಳಲ್ಲಿ ರಾಸಾಯನಿಕಗಳನ್ನು ಸಿಂಪಡಿಸಿ ಮಳೆ ಸುರಿಸುವ ವಿಧಾನ ಯಶಸ್ವಿಯಾಗಿದ್ದನ್ನು ಉದಾಹರಿಸಿರುವ ಖಾನ್‌, ಈ ವಿಧಾನವನ್ನು ರಾಜಕಾರಣಿಗಳು ತಾತ್ಸಾರ ಧೋರಣೆಯಿಂದ ಕಾಣುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X