ಯುಟಿಐ ಹಗರಣ : ಬೇಸತ್ತ ಪ್ರಧಾನಿಯಿಂದ ರಾಜೀನಾಮೆ ಇಂಗಿತ
ನವದೆಹಲಿ : ರಾಷ್ಟ್ರೀಯ ಪ್ರಜಾ ಸತ್ತಾತ್ಮಕ ಮೈತ್ರಿ ಕೂಟದ ಒಗ್ಗಟ್ಟು ಹಾಗೂ ಶಿಸ್ತು ಕಾಪಾಡಲು ತಾವು ಅಸಮರ್ಥರಾಗಿರುವ ಕಾರಣ ತಮ್ಮ ಹುದ್ದೆಗೆ ರಾಜೀನಾಮೆ ಕೊಡುವ ಆಶಯವನ್ನು ಪ್ರಧಾನಿ ಎ.ಬಿ.ವಾಜಪೇಯಿ ಮಂಗಳವಾರ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಸಂಸದೀಯ ಸಭೆಯಲ್ಲಿ ಭಾಗವಹಿಸಿ ಅವರು ಮಾತಾಡುತ್ತಿದ್ದರು. ಬಿಜೆಪಿ ಹಿರಿಯ ಸದಸ್ಯರು ರಾಜೀನಾಮೆ ನೀಡಬೇಡಿ ಎಂದು ಪ್ರಧಾನಿಯವರನ್ನು ಕೋರಿದ್ದಾರೆ.
ಯುಟಿಐ ಹಗರಣದಲ್ಲಿ ಪ್ರಧಾನಿ ಕಚೇರಿಯ ಪಾತ್ರವೂ ಇದೆ ಎಂದು ಶಿವಸೇನೆಯ ಸದಸ್ಯ ಸಂಜಯ್ ನಿರುಪಮ ಆರೋಪಿಸಿರುವ ಕಾರಣಕ್ಕೆ ಸಭೆಯಲ್ಲಿ ಪ್ರಧಾನಿ ಈ ಆಶಯ ವ್ಯಕ್ತಪಡಿಸಿದರು. ಯುಟಿಐ ಮಾಜಿ ಅಧ್ಯಕ್ಷ ಪಿ.ಎಸ್.ಸುಬ್ರಹ್ಮಣ್ಯಂ ಮುಂಬಯಿಯಿಂದ ದೆಹಲಿಗೆ ಜುಲೈ 17ರಿಂದ 21ರ ಅವಧಿಯಲ್ಲಿ ಮಾಡಿದ ದೂರವಾಣಿ ಕರೆಗಳ ಪೈಕಿ ಎರಡು ಕರೆಗಳು ಪ್ರಧಾನಿ ಕಚೇರಿಗೆ ಹೋಗಿದ್ದವು ಎಂಬುದು ಪತ್ತೆಯಾಗಿದೆ ಎಂದು ಸಂಜಯ್ ನಿರುಪಮ ಆರೋಪಿಸಿದ್ದಾರೆ.
ಯಾರನ್ನೂ ಹೆಸರಿಸದ ಸಂಜಯ್, ಪ್ರಧಾನಿ ಕಚೇರಿಯಲ್ಲಿ ಯಾರಿಗೆ ಕರೆ ಹೋಗಿತ್ತೋ ಅವರು ಈಗ ಯೋಜನಾ ಆಯೋಗದಲ್ಲಿದ್ದಾರೆ. ಪ್ರಸಕ್ತ ವಿತ್ತ ವರ್ಷದ ಬಜೆಟ್ಟು ಸಂಸತ್ತಿನಲ್ಲಿ ಮಂಡನೆಯಾದ ಒಂದು ತಾಸಿಗೆ ಮುಂಚೆ ಪದಚ್ಯುತ ಯುಟಿಐ ಅಧ್ಯಕ್ಷರಿಗೆ ಹಣಕಾಸು ಕಾರ್ಯದರ್ಶಿ ಫೋನಾಯಿಸಿದ್ದರು ಎಂದು ದೂರಿದ್ದಾರೆ.
(ಯುಎನ್ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications