ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ರಿಕೆಟ್‌ಸಿಯಾ ಕಾಯಿಲೆ! ಅಮೆರಿಕಾದ ಬಳುವಳಿಯೇ?

By Staff
|
Google Oneindia Kannada News

ಬೆಂಗಳೂರು : ಅಮೆರಿಕಾದಂತಹ ದೇಶಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಅಪರೂಪದ ಕಾಯಿಲೆ ‘ರಿಕೆಟ್‌ಸಿಯಾ’ ಬೆಂಗಳೂರಿನಲ್ಲಿಯೂ ಕಾಣಿಸಿಕೊಂಡಿದ್ದು ಇಬ್ಬರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಲ್ಯ ಆಸ್ಪತ್ರೆಯಲ್ಲಿ ಆರು ಮತ್ತು ಏಳು ವರ್ಷ ವಯಸ್ಸಿನ ಇಬ್ಬರು ಮಕ್ಕಳು ರಿಕೆಟ್‌ಸಿಯಾದಿಂದ ನರಳುತ್ತಿದ್ದಾರೆ. ಚರ್ಮದಲ್ಲಿ ಬೊಬ್ಬೆಗಳು, ಜ್ವರ, ತಲೆ ನೋವು ಮತ್ತು ಮಾಂಸ ಖಂಡಗಳ ವಿಪರೀತ ನೋವು ಈ ರೋಗದ ಲಕ್ಷಣಗಳಾಗಿವೆ ಎಂದು ಆಸ್ಪತ್ರೆಯ ವೈದ್ಯರು ಹೇಳುತ್ತಾರೆ.

ಹೊರ ದೇಶಗಳ ಪ್ರಯಾಣಿಕರ ಮೂಲಕ ಈ ರೋಗ ಹರಡಿರಬಹುದಾಗಿದೆ ಎಂದು ಶಂಕಿಸಲಾಗಿದೆ. ವಿಪರೀತ ಜ್ವರ, ಚರ್ಮದಲ್ಲಿ ಬೊಬ್ಬೆಗಳು ಹಾಗೂ ಮೈ ಕೈ ನೋವು ಕಾಣಿಸಿಕೊಂಡಾಗ ಇಬ್ಬರು ಮಕ್ಕಳನ್ನು ಆಸ್ಪತ್ರೆಗೆ ಸೇರಿಸಲಾಯಿತು. ಅವರಿಗೆ ಮಲೇರಿಯಾ ಇರಬಹುದೆಂದು ಆರಂಭದಲ್ಲಿ ಶಂಕಿಸಲಾಗಿತ್ತು. ಆದರೆ ನಂತರ ಮಕ್ಕಳಿಗೆ ರಿಕೆಟ್‌ಸಿಯಾ ಇರುವುದಾಗಿ ಪತ್ತೆ ಹಚ್ಚಲಾಯಿತು ಎಂದು ಆಸ್ಪತ್ರೆಯ ಅಧೀಕ್ಷಕ ಡಾ. ಆರ್‌. ಎ. ಪರಂಗುಸಾ ದಾಸ್‌ ಹೇಳಿದ್ದಾರೆ.

ನಾಯಿಗಳ ಮೂಲಕ ಹರಡುವ ಈ ರೋಗ ಸಾಕು ಪ್ರಾಣಿಗಳನ್ನು ಅತೀ ಮುದ್ದು ಮಾಡುವವರಿಗೆ ಬರುವ ಸಾಧ್ಯತೆ ಹೆಚ್ಚು. ಈ ರೋಗಕ್ಕೆ ತಕ್ಷಣವೇ ಚಿಕಿತ್ಸೆ ನೀಡದೇ ಇದ್ದಲ್ಲಿ ದೇಹದ ಯಾವುದಾದರೂ ಅಂಗ ನಿಷ್ಕಿೃಯವಾಗಬಹುದು. ಪ್ರಾಣಾಪಾಯವೂ ಇಲ್ಲದಿಲ್ಲ ಎಂದು ಮಲ್ಯ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಇಂತಹ ಪ್ರಕರಣಗಳು ಇತರೆಡೆಯಲ್ಲಿಯೂ ಕಾಣಿಸಿಕೊಂಡಿರಬಹುದು. ಆದರೆ ಅದನ್ನು ರಿಕೆಟ್‌ಸಿಯಾ ಎಂದು ಗುರುತಿಸಲಾಗದೇ ಮಲೇರಿಯಾ ಅಥವಾ ಇನ್ಯಾವುದೋ ರೋಗವೆಂದು ಪರಿಗಣಿಸಿರಬಹುದು. ವೈರಸ್‌ನಿಂದ ಈ ರೋಗ ಹರಡುವ ಸಾಧ್ಯತೆ ತೀರಾ ಕಡಿಮೆ ಇದ್ದು, ಈ ವಿಷಯದ ಬಗ್ಗೆ ವೈದ್ಯರ ತಂಡ ಆಳವಾದ ಅಧ್ಯಯನ ನಡೆಸಲಿದೆ ಎಂದು ಡಾ. ದಾಸ್‌ ಹೇಳಿದ್ದಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X