Get Updates
Get notified of breaking news, exclusive insights, and must-see stories!

ಎಲ್ಲಾ ಹೆಂಗಸರಿಗಾಗಿ ... ಮದುವೆಗೂ ರಿಜಿಸ್ಟ್ರೇಷನ್‌ ಕಡ್ಡಾಯ !

ಬೆಂಗಳೂರು : ಮದುವೆಯನ್ನು ನೋಂದಣಿ ಮಾಡಿಸುವುದು ಇನ್ನು ಮುಂದೆ ಕಡ್ಡಾಯವಾಗಲಿದೆ. ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ದಕ್ಕಿಸಿಕೊಡಲು ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಇಟ್ಟಿರುವ ಹೊಸ ಹೆಜ್ಜೆ ಇದು.

ಸದ್ಯದಲ್ಲೇ ಮದುವೆಗಳ ನೋಂದಣಿ ಕಡ್ಡಾಯಗೊಳಿಸಿ, ಸದನದಲ್ಲಿ ವಿಧೇಯಕವನ್ನು ಪ್ರಕಟಿಸಲಾಗುವುದು ಎಂದು ವಿಧಾನಸಭೆಯಲ್ಲಿ ಚರ್ಚೆಯ ವೇಳೆ ತಿಳಿಸಿದರು. ಮದುವೆ ನೋಂದಣಿ ಮಾಡಿಸಲು ಅನುಸರಿಸಬೇಕಾದ ಮಾರ್ಗಗಳ ಕರಡನ್ನೂ ಸಿದ್ಧಪಡಿಸಲಾಗುವುದು ಎಂದರು.

ಸ್ತ್ರೀ ಶಕ್ತಿ ಯೋಜನೆಯ ಬಗ್ಗೆ ಮಾತಾಡುತ್ತಾ, ಪ್ರಸ್ತುತ 64,600 ಮಹಿಳಾ ಸಮೂಹಗಳು ಯೋಜನೆಯಲ್ಲಿದ್ದು, ಈ ಸಂಖ್ಯೆಯನ್ನು 1 ಲಕ್ಷದವರೆಗೆ ವಿಸ್ತರಿಸಲಾಗುವುದು. ಈವರೆಗೆ ಈ ಮಹಿಳಾ ಸಮೂಹಗಳು 16 ಕೋಟಿ ರುಪಾಯಿವರೆಗೆ ಹಣ ಉಳಿತಾಯ ಮಾಡಿವೆ ಎಂದು ಹೇಳಿದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+