ಜರ್ಮನಿಗೆ ಇನ್ನಷ್ಟು ಭಾರತೀಯ ಐಟಿ ತಜ್ಞರ ಅಗತ್ಯವಿದೆ
ಬರ್ಲಿನ್ : ಕಳೆದ ವರ್ಷ ಭಾರತೀಯ ಐಟಿ ತಜ್ಞರಿಗೆ ಗ್ರೀನ್ ಕಾರ್ಡ್ ಸೌಲಭ್ಯ ನೀಡಿ ಕರೆಸಿಕೊಳ್ಳುತ್ತಿದ್ದ ಜರ್ಮನಿ ಈಗ ಮತ್ತೆ ಭಾರತೀಯ ಐಟಿ ತಜ್ಞರಿಗಾಗಿ ತನ್ನ ಸಾಫ್ಟ್ವೇರ್ ಕ್ಷೇತ್ರದ ಬಾಗಿಲು ತೆರೆದಿದೆ.
ಸುಮಾರು 9 ಸಾವಿರ ಕಂಪ್ಯೂಟರ್ ತಜ್ಞರು ಜರ್ಮನಿ ಸಾಫ್ಟ್ವೇರ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಜರ್ಮನಿ ಫೆಡರೇಷನ್ ಆಫ್ ಇಂಡಸ್ಟ್ರಿ ಪ್ರಕಾರ ದೇಶಕ್ಕೆ ಇನ್ನಷ್ಟು ಕಂಪ್ಯೂಟರ್ ತಜ್ಞರ ಅಗತ್ಯವಿದೆ. ನಮಗೆ ಸುಮಾರು 1.5 ಲಕ್ಷ ಐಟಿ ಪರಿಣತರ ಅಗತ್ಯವಿದೆ. ಸರಕಾರವು ಮಾಹಿತಿ ತಂತ್ರಜ್ಞಾನ ಕ್ಷೇತ್ರದತ್ತ ಮಾತ್ರ ಗಮನ ಹರಿಸಿರುವುದರಿಂದ ಐಟಿಯೇತರ ವಲಯಗಳಲ್ಲಿಯೂ ಕೆಲಸ ಮಾಡಲು ಅಧಿಕಾರಿಗಳ ಅಗತ್ಯವಿದೆ.
ಮೆಟಲ್ ವರ್ಕ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಅಕೌಂಟ್ನಲ್ಲಿ 24 ಲಕ್ಷ ಹುದ್ದೆಗಳು ಖಾಲಿಯಾಗಿವೆ. ಬಾವೇರಿಯಾ ಪ್ರದೇಶವೊಂದರಲ್ಲಿಯೇ ಸುಮಾರು 30 ಸಾವಿರ ಉದ್ಯೋಗಗಳು ಖಾಲಿ ಬಿದ್ದಿವೆ. ಇವೆಲ್ಲ ಭರ್ತಿಯಾಗಬೇಕಿದ್ದರೆ ಹೊರ ದೇಶಗಳಿಂದ ಪರಿಣತರು, ಅಧಿಕಾರಿಗಳು ಬರಬೇಕಾಗುತ್ತದೆ. ಆದರೆ ಇತ್ತೀಚಿನ ಸಮೀಕ್ಷೆಯಾಂದರ ಪ್ರಕಾರ ದೇಶದ ಶೇ. 62 ಮಂದಿ ಜರ್ಮನ್ನರು ವಿದೇಶಿಯರ ಆಗಮನವನ್ನು ವಿರೋಧಿಸುತ್ತಾರೆ.
ಇತ್ತೀಚೆಗಷ್ಟೇ ವಿರೋಧ ಪಕ್ಷದಲ್ಲಿರುವ ಕ್ರಿಶ್ಚಿಯನ್ ಯೂನಿಯನ್ ಪಾರ್ಟಿ ಜರ್ಮನಿಗೆ ವಿದೇಶಿ ತಜ್ಞರ ಅಗತ್ಯವಿರುವುದನ್ನು ಒಪ್ಪಿಕೊಂಡಿದೆ. ವರ್ಷಕ್ಕೆ ಸುಮಾರು 10 ಸಾವಿರ ವಿದ್ಯಾರ್ಥಿಗಳು ಜರ್ಮನಿ ವಿಶ್ವವಿದ್ಯಾಲಯದಿಂದ ಪದವಿ ಮುಗಿಸಿಕೊಂಡು ಹೊರಬಂದರೂ ಅವರೆಲ್ಲಾ ಅಮೆರಿಕಾದ ಕಡೆಗೆ ನೋಡುತ್ತಿರುತ್ತಾರೆ. ಇದರಿಂದ ಜರ್ಮನಿ ಹೊರ ದೇಶಗಳಿಂದ ಪರಿಣತರನ್ನು ನಿರೀಕ್ಷಿಸುತ್ತಿದೆ.
(ಎಎಫ್ಪಿ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications