ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಬೇಗನೇ ಬಾಳು,ಬೇಗನೇ ಸಾಯಿ, ಸುಂದರ ಶವ ಬಿಟ್ಟುಹೋಗು’

By Staff
|
Google Oneindia Kannada News

ಲಂಡನ್‌ : ಯುವಕನೊಬ್ಬ ಆತ್ಮ ಹತ್ಯೆ ಮಾಡಿಕೊಳ್ಳುವುದಕ್ಕೆ ಮುಂಚೆ ಚೀಟಿ ಬರೆದಿಡುವುದು ಹೊಸದಲ್ಲ. ಆದರೆ ತಾನು ಸಾಯುತ್ತಿರುವುದರ ಹಿಂದಿರುವ ಕಾರಣಗಳನ್ನು ವಿವರಿಸಿ ವೆಬ್‌ಸೈಟೊಂದನ್ನು ನಿರ್ಮಿಸಿರುವ ಯುವಕನ ವಿಷಯವನ್ನು ಬ್ರಿಟನ್‌ನ ಪತ್ರಿಕೆಗಳು ವರದಿ ಮಾಡಿವೆ.

ಸೈಮನ್‌ ಕೆಲ್ಲಿ ಎಂಬ 18 ವರ್ಷದ ಹುಡುಗ, ಆತ್ಮಹತ್ಯೆ ಹೇಗೆ ಮಾಡುವುದು ಎಂಬ ಬಗ್ಗೆ ಸರ್ಚ್‌ ಇಂಜಿನ್‌ ಮುಖಾಂತರ ಮಾಹಿತಿಗಳನ್ನು ಸಂಗ್ರಹಿಸಿ, ನಂತರ ತನ್ನದೇ ಆದ ವೆಬ್‌ಸೈಟ್‌ ನಿರ್ಮಿಸಿ, ಅಲ್ಲಿ ತಾನು ಆತ್ಮ ಹತ್ಯೆ ಮಾಡಿಕೊಳ್ಳಲು ಕಾರಣ ಮತ್ತು ಯಾವ ವಿಧಾನದ ಮೂಲಕ ಆತ್ಮ ಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎನ್ನುವುದರ ಬಗ್ಗೆ ಮಾಹಿತಿ ನೀಡಿದ್ದಾನೆ.

ತನ್ನ ವೆಬ್‌ಸೈಟ್‌ಗೆ ಆತ ಬೇಗನೇ ಬಾಳು, ಬೇಗನೇ ಸಾಯಿ, ಸುಂದರವಾದ ಶವವನ್ನು ಬಿಟ್ಟುಹೋಗು ಎಂಬ ಶೀರ್ಷಿಕೆ ಕೊಟ್ಟಿದ್ದಾನೆ. ಮಾರ್ಚ್‌ ತಿಂಗಳಿನಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳಲು ನಿಶ್ಚಯಿಸಿದ ಸೈಮನ್‌ಗೆ ತನ್ನ ಮನೆಯಲ್ಲಿ ಒಂಟಿಯಾಗಿರುವ ಅವಕಾಶವೇ ಸಿಗಲಿಲ್ಲ. ತಂದೆ ಪಾಲ್‌ ಮತ್ತು ತಾಯಿ ಹಿಲರಿ ಅಮೆರಿಕಾಕ್ಕೆ ತೆರಳಿದಾಗ ಸೈಮನ್‌ ಇಹಲೋಕ ಯಾತ್ರೆ ಮುಗಿಸಿದ್ದಾನೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X