ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿರಸಿಯಲ್ಲಿ ಬೇಡ್ತಿ ಅಘನಾಶಿನಿ ಉಳಿಸಿ ಹೋರಾಟ

By Staff
|
Google Oneindia Kannada News

ಶಿರಸಿ : ಕೊಜೆಂಟ್ರಿಕ್ಸ್‌, ನಾಗಾರ್ಜುನ ವಿದ್ಯುತ್‌ ಸ್ಥಾವರಗಳ ವಿರುದ್ಧ ಕರಾವಳಿ ಪರಿಸರಾಸಕ್ತರ ಹೋರಾಟ ತಣ್ಣಗಾಗುತ್ತಿದ್ದಂತೆಯೇ ಉತ್ತರ ಕನ್ನಡದಲ್ಲಿ ಬೇಡ್ತಿ ಅಘನಾಶಿನಿ ಉಳಿಸಿ ಹೋರಾಟ ಆರಂಭವಾಗಿದೆ.

ಉತ್ತರ ಕನ್ನಡದ 110 ಕಿ. ಮೀ. ವ್ಯಾಪ್ತಿಯ ಪಶ್ಚಿಮ ಘಟ್ಟವನ್ನು ಹಾದು ಹೋಗುವ ಕೈಗಾ ನರೇಂದ್ರ ಹೈ ಪವರ್‌ ಟೆನ್ಶನ್‌ ಲೈನ್‌ ಅಳವಡಿಕೆಯ ಸರಕಾರದ ಪ್ರಸ್ತಾವನೆಯನ್ನು ವಿರೋಧಿಸಿ ‘ವೃಕ್ಷ ಲಕ್ಷ ಆಂದೋಲನ’ ಈ ಹೋರಾಟವನ್ನು ಕೈಗೆತ್ತಿಕೊಂಡಿದೆ.

ಪಶ್ಚಿಮ ಘಟ್ಟ ಉಳಿಸಿ ಹೋರಾಟದಡಿ ಮೊದಲ ಹಂತದಲ್ಲಿ ಯಲ್ಲಾಪುರದ ಕಣ್ಣಿಗೇರಿ ಹಳ್ಳಿಯಲ್ಲಿ ಭಾನುವಾರ ಬೃಹತ್‌ರ್ಯಾಲಿಯನ್ನು ಆಯೋಜಿಸಲಾಗಿತ್ತು. ಕೈಗಾ ಕೈ ಬಿಡಿ, ಜಂಗಲ್‌ ಬಚಾವೋ ಎಂಬ ಘೋಷಣೆಗಳೊಂದಿಗೆ ಕೈಗಾ ನರೇಂದ್ರ ಹೈ ಪವರ್‌ ಟೆನ್ಶನ್‌ ಲೈನ್‌ ಅಳವಡಿಕೆ ಪ್ರಸ್ತಾಪವನ್ನು ಕೈ ಬಿಡುವಂತೆ ಆಗ್ರಹಿಸಲಾಯಿತು.

ಹೈ ಪವರ್‌ ಟೆನ್ಶನ್‌ ಲೈನ್‌ ಅಳವಡಿಕೆಯಿಂದಾಗುವ ತೊಂದರೆಗಳು -

  • ಜಿಲ್ಲೆಯ ಧಾರಣ ಸಾಮರ್ಥ್ಯ ಅಳೆಯದೇ ಯಾವುದೇ ಯೋಜನೆ ಶುರು ಮಾಡುವುದು ಅಪಾಯಕರ
  • 520 ಎಕರೆ ದಟ್ಟ ಅರಣ್ಯ ಪ್ರದೇಶ ನಾಶವಾಗಲಿದೆ
  • ಲೈನ್‌ ಅಳವಡಿಕೆಯ ಬಗ್ಗೆ ಸ್ಥಳೀಯರಿಗೆ ಈ ವರಗೆ ಯಾವುದೇ ಮಾಹಿತಿ ನೀಡಿಲ್ಲ. ಅಲ್ಲದೆ ಈ ಯೋಜನೆಯಿಂದಾಗಿ ಸ್ಥಳೀಯರ ದೈನಂದಿನ ಜೀವನ ಏರುಪೇರಾಗಲಿದೆ
(ಇನ್ಫೋ ವಾರ್ತೆ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X