Get Updates
Get notified of breaking news, exclusive insights, and must-see stories!

ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಲೋಕಸಭೆ ಸಮ್ಮತಿ

ನವದೆಹಲಿ : ಮಣಿಪುರದಲ್ಲಿ ಕೇಂದ್ರಾಡಳಿತ ಹೇರುವ ಸಂಬಂಧ ಲೋಕಸಭೆ ತನ್ನ ಅನುಮೋದನೆ ಸೂಚಿಸಿದೆ. ಕೇಂದ್ರ ಸರಕಾರ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲು ಕೆಳಮನೆಯಲ್ಲಿ (ಲೋಕಸಭೆ)ಯಲ್ಲಿ ಕೋರಿದ್ದ ಅನುಮತಿಗೆ ಅವಿರೋಧ ಅನುಮೋದನೆ ದೊರೆತಿದೆ.

ಈ ಸಂಬಂಧ ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಉತ್ತರ ನೀಡಿದ ಗೃಹ ಸಚಿವ ಎಲ್‌. ಕೆ. ಆಡ್ವಾಣಿ ಅವರು, ಉಭಯ ಸದನಗಳಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಅನುಮತಿ ಸಿಕ್ಕ ತರುವಾಯ ಯಾವುದೇ ಕಾರಣಕ್ಕೂ ಅಲ್ಲಿ ಸರಕಾರ ರಚಿಸುವ ಪ್ರಯತ್ನ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಸರಕಾರವು ಮಣಿಪುರ ವಿಧಾನಸಭೆಯನ್ನು ವಿಸರ್ಜಿಸಿ, ಅಲ್ಲಿ ಹೊಸದಾಗಿ ಚುನಾವಣೆ ನಡೆಸಲು ಕೈಗೊಂಡಿರುವ ನಿರ್ಧಾರಕ್ಕೆ ಬದ್ಧವಾಗಿದೆ ಎಂದ ಅವರು, ಯಾವುದೇ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಸಂಸತ್ತು ಅನುಮೋದನೆ ನೀಡಿದ ಬಳಿಕ ವಿಧಾನಸಭೆಯನ್ನು ಕಡ್ಡಾಯವಾಗಿ ವಿಸರ್ಜಿಸಬೇಕು ಎಂದು ಬೊಮ್ಮಾಯಿ ಅವರ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪನ್ನು ಸ್ಮರಿಸಿದರು.

(ಯು.ಎನ್‌.ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+