ಲಕ್ಷ್ಮಣ್ಗೆ ಮಂಡಿನೋವು : ಟೆಸ್ಟ್ ಸರಣಿಯಲ್ಲಿ ಆಡುವುದಿಲ್ಲ
ಕೊಲಂಬೊ : ಭಾರತ ಕ್ರಿಕೆಟ್ ಪಾಳಯದಲ್ಲಿ ಉಲ್ಬಣಿಸಿರುವ ಸೋಲಿನ ಕಾಯಿಲೆ ನಡುವೆ ಚೆನ್ನಾಗಿ ಆಡುತ್ತಿರುವ ಆಟಗಾರರಿಗೆ ಆರೋಗ್ಯ ಕೈಕೊಟ್ಟಿದೆ. ಮೊನ್ನೆ ಟೂರ್ನಿಯಲ್ಲಿ ಮೊದಲ ಜಯ ದಕ್ಕಿಸಿಕೊಟ್ಟ ವಿವಿಎಸ್ ಲಕ್ಷ್ಮಣ್ಗೆ ಮಂಡಿ ನೋವು, ವೇಗಿ ಜಾಹೀರ್ ಖಾನ್ಗೆ ಬಲ ಹಿಮ್ಮಡಿ ನೋವು, ಆಶಿಶ್ ನೆಹ್ರಾಗೆ ತೊಡೆ ಸಂಧಿಯ ಸ್ನಾಯುಗಳ ತೊಂದರೆ.
ಮೂಳೆ ಸ್ಕ್ಯಾನಿಂಗ್ಗಾಗಿ ಜಾಹಿರ್ ಖಾನ್ ಆಗಸ್ಟ್ 3ರಂದು ಚೆನ್ನೈಗೆ ಹಾರಬೇಕಿತ್ತು. ಆದರೆ ಅವರು ಸರಣಿ ಮುಗಿದ ನಂತರ ಚಿಕಿತ್ಸೆ ಪಡೆಯಲು ನಿರ್ಧರಿಸಿದ್ದಾರೆ. ಒಂದು ದಿನದ ಸರಣಿ ಮುಗಿದ ತಕ್ಷಣ ನೆಹ್ರಾ ಹಾಗೂ ಲಕ್ಷ್ಮಣ್ ತವರಿಗೆ ಮರಳಿ, ಚಿಕಿತ್ಸೆ ಪಡೆಯಲಿದ್ದಾರೆ. ಲಕ್ಷ್ಮಣ್ಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದ್ದು, ಅವರು ಆಗಸ್ಟ್ 14ರಿಂದ ಶ್ರೀಲಂಕಾದಲ್ಲಿ ಪ್ರಾರಂಭವಾಗುವ ಟೆಸ್ಟ್ ಸರಣಿಯ ಯಾವ ಪಂದ್ಯದಲ್ಲೂ ಆಡುವುದಿಲ್ಲ ಎಂದು ತಂಡದ ಮ್ಯಾನೇಜ್ಮೆಂಟ್ ಸ್ಪಷ್ಟಪಡಿಸಿದೆ.
ಶ್ರೀಲಂಕಾ- ಭಾರತ- ನ್ಯೂಜಿಲೆಂಡ್ ನಡುವಣ ಒಂದು ದಿನದ ತ್ರಿಕೋನ ಸರಣಿಯಲ್ಲಿ ಭಾರತ ಇನ್ನು 2 ಪಂದ್ಯಗಳನ್ನು ಆಡಬೇಕಿದ್ದು, ಫೈನಲ್ಸ್ ಪ್ರವೇಶಿಸಬೇಕಿದ್ದಲ್ಲಿ ಪಾಯಿಂಟ್ಸ್ ಹೆಚ್ಚಿಸಿಕೊಳ್ಳಲು ಹೆಣಗಾಡಬೇಕಿದೆ. ಇಂಥಾ ಒತ್ತಡದ ಪರಿಸ್ಥಿತಿಯಲ್ಲಿ ಯಶಸ್ವಿ ಬೌಲರ್ಗಳು ಹಾಗೂ ಫಾರ್ಮ್ ಕಂಡುಕೊಂಡಿರುವ ಬ್ಯಾಟ್ಸ್ಮನ್ ಗಾಯಾಳುಗಳಾಗಿರುವುದು ತಂಡಕ್ಕೆ ದೊಡ್ಡ ಪೆಟ್ಟಾಗಿದೆ.
(ಏಜೆನ್ಸೀಸ್)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications