Get Updates
Get notified of breaking news, exclusive insights, and must-see stories!

ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ನೆಲಮನೆ ದೇವೇಗೌಡ ನಿಧನ

ಬೆಂಗಳೂರು : ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ನೆಲಮನೆ ಪ್ರಕಾಶನದ ಸಂಸ್ಥಾಪಕ ನೆಲೆಮನೆ ಕೆ. ದೇವೇಗೌಡ ಶನಿವಾರ ಇಲ್ಲಿ ನಿಧನರಾದರು. ಅವರಿಗೆ 51 ವರ್ಷ ವಯಸ್ಸಾಗಿತ್ತು. ಮೃತರಿಗೆ ಪತ್ನಿ, ನಾಲ್ವರು ಪುತ್ರಿಯರು ಹಾಗೂ ಒಬ್ಬ ಪುತ್ರ ಇದ್ದಾರೆ.

ಮೈಸೂರಿನ ಡಿ. ಬನುಮಯ್ಯ ವಾಣಿಜ್ಯ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ದೇವೇಗೌಡರು ಗುರುವಾರ ರಾತ್ರಿ ಹೃದಯಾಘಾತಕ್ಕೊಳಗಾದಾಗ ಅವರನ್ನು ಬೆಂಗಳೂರಿನ ಕಿಮ್ಸ್‌ ಆಸ್ಪತ್ರೆಗೆ ಸೇರಿಸಲಾಗಿತ್ತು. ಅವರ ದೇಹಸ್ಥಿತಿ ತುಂಬಾ ಗಂಭೀರವಾದ ಕಾರಣ ಜಯದೇವ ಹೃದ್ರೋಗ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ಆದರೆ, ತೀವ್ರ ಹೃದಯಾಘಾತಕ್ಕೊಳಗಾಗಿದ್ದ ಅವರು, ಶನಿವಾರ ಮಧ್ಯಾಹ್ನ ಕೊನೆಯುಸಿರೆಳೆದರು. ದೇವನೂರು ಮಹದೇವರ ದ್ಯಾವನೂರು ಎಂಬ ಕಥಾ ಸಂಕಲವನ್ನು ಮೊಟ್ಟ ಮೊದಲು ಪ್ರಕಟಿಸಿದ ದೇವೇಗೌಡರು. ತಮ್ಮ ಪ್ರಕಾಶನ ಸಂಸ್ಥೆಗೆ ಶ್ರೀರಂಗಪಟ್ಟಣ ಬಳಿಯ ತಮ್ಮ ಹುಟ್ಟೂರಾದ ನೆಲಮನೆಯ ಹೆಸರನ್ನೇ ಇಟ್ಟಿದ್ದರು. ಭಾನುವಾರ ನೆಲಮನೆಯಲ್ಲೇ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಯಲಿದೆ.

ಸಮಾಜವಾದಿ ಚಿಂತನೆಯ ನೆಲೆಯಿಂದ ಬಂದ ದೇವೇಗೌಡರು ತಮ್ಮ ವಿದ್ಯಾರ್ಥಿ ದೆಸೆಯಲ್ಲೇ ಸಮಾಜವಾದಿ ಯುವಜನ ಸಭಾ, ಬರಹಗಾರರ ಒಕ್ಕೂಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಲೋಕನಾಯಕ ಜಯಪ್ರಕಾಶ ನಾರಾಯಣರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು, ಪ್ರಗತಿಪರ ಚಳವಳಿಯ ಮೂಸೆಯಲ್ಲಿ ಬೆಳೆದ ಅವರು, ಆಲನಹಳ್ಳಿ ಶ್ರೀಕೃಷ್ಣ, ಪಿ. ಲಂಕೇಶ್‌ರ ಪುಸ್ತಕಗಳನ್ನು ಹೊರತಂದಿದ್ದಲ್ಲದೆ, ಪಿ. ಲಂಕೇಶರ ಪಲ್ಲವಿ ಚಿತ್ರಕ್ಕೆ ಹಣ ಹೂಡಿ ನಿರ್ಮಾಪಕರೂ ಆಗಿದ್ದರು.

ಜೆ.ಎಚ್‌. ಪಟೇಲ್‌ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ದೇವೇಗೌಡರು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ದೇವೇಗೌಡರ ನಿಧನಕ್ಕೆ ಸಾಹಿತ್ಯ ಕ್ಷೇತ್ರದ ಹಲವು ಗಣ್ಯರು, ರಾಜಕಾರಣಿಗಳು ತಮ್ಮ ಶೋಕ ವ್ಯಕ್ತಪಡಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+