Get Updates
Get notified of breaking news, exclusive insights, and must-see stories!

ವೈಭವಾಡಂಬರದ ದಸರೆಯ ಆಚರಣೆಗೆ ಈ ವರ್ಷವೂ ಅಡ್ಡಿ

ಬೆಂಗಳೂರು : ಕಳೆದ ವರ್ಷ ಡಾ. ರಾಜ್‌ಕುಮಾರ್‌ ಅಪಹರಣದ ಹಿನ್ನೆಲೆಯಲ್ಲಿ ಕನ್ನಡಿಗರ ಹೆಮ್ಮೆಯ ನಾಡಹಬ್ಬ ದಸರಾವನ್ನು ಸರಳವಾಗಿ ಆಚರಿಸಲಾಗಿತ್ತು. ಅದರ ಹಿಂದಿನ ವರ್ಷ ಒರಿಸ್ಸಾದ ಭೀಕರ ಚಂಡಮಾರುತದ ಹಿನ್ನೆಲೆಯಲ್ಲಿ ದಸರಾ ಮಹೋತ್ಸವ ಸರಳವಾಗೇ ನಡೆದಿತ್ತು.

ಈ ಬಾರಿ ಯಾವುದೇ ಅಡ್ಡಿ - ಆತಂಕಗಳಿಲ್ಲ. ಸಂಭ್ರಮದಿಂದ, ಅದ್ಧೂರಿ ಹಾಗೂ ವೈಭವಾಡಂಬರದಿಂದ ನಾಡಹಬ್ಬ ಆಚರಿಸಬಹುದು ಎಂಬ ಉತ್ಸಾಹಕ್ಕೆ ಭೀಕರ ಬರ ತಣ್ಣೀರೆರೆಚಿದೆ. ಈ ತಿಂಗಳ ಆದಿಯಲ್ಲಿ ದಸರೆಯನ್ನು ವೈಭವದಿಂದ ಆಚರಿಸಲು ತಾತ್ವಿಕವಾಗಿ ಒಪ್ಪಿಗೆ ಸೂಚಿಸಿದ್ದ ಸರಕಾರ ತನ್ನ ನಿಲುವು ಬದಲಿಸಿದೆ.

ಈ ಸಂಬಂಧ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್‌. ವಿಶ್ವನಾಥ್‌ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ದಸರಾ ಮಹೋತ್ಸವ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ದಸರೆಯನ್ನು ಅತ್ಯಂತ ಸರಳವಾಗಿ ಆಚರಿಸುವ ನಿರ್ಧಾರಕ್ಕೆ ಬರಲಾಗಿದೆ.

ಈ ವಿಷಯವನ್ನು ವಿಶ್ವನಾಥ್‌ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ. ಅಕ್ಟೋಬರ್‌ 19ರಿಂದ 26ರವರೆಗೆ ನಡೆಯಲಿರುವ ದಸರಾ ಉತ್ಸವ ಆಚರಣೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 73.5 ಲಕ್ಷ ರುಪಾಯಿ ಮೀಸಲಾಗಿರಿಸಲಾಗಿದೆ. ಆದರೆ, ಬರದ ಹಿನ್ನೆಲೆಯಲ್ಲಿ ಕೇವಲ 23.5 ಲಕ್ಷ ರುಪಾಯಿ ವೆಚ್ಚ ಮಾಡಿ, ಉಳಿದ ಹಣವನ್ನು ಬರ ಪರಿಹಾರಕ್ಕೆ ಬಳಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+