ಬೆಂಗಳೂರಿನಲ್ಲಿ ಅಕ್ಟೋಬರ್ 15ರಿಂದ ತ್ರಿಭಾಷಾ ನಾಟಕೋತ್ಸವ
ಬೆಂಗಳೂರು : ದೃಷ್ಟಿ ಕಲಾವಿದರ ಸಂಘ ಬರುವ ಅಕ್ಟೋಬರ್‌ನಿಂದ ಏಳು ದಿನಗಳ ‘ವಿಭಿನ್ನ- 2001’ ತ್ರಿಭಾಷಾ ನಾಟಕೋತ್ಸವವನ್ನು ಆಯೋಜಿಸಲಿದೆ.
ಉತ್ಸವದಲ್ಲಿ ಹಿಂದಿ, ಇಂಗ್ಲಿಷ್ ಮತ್ತು ಕನ್ನಡ ಭಾಷಾ ನಾಟಕ ಪ್ರದರ್ಶನಗಳು ನಗರದ ಗುರುನಾನಕ್ ಭವನದಲ್ಲಿ ನಡೆಯಲಿದ್ದು, ಮೂವರು ಹಿರಿಯ ರಂಗ ಕಲಾವಿದರು ತೀರ್ಪುಗಾರರ ಸ್ಥಾನದಲ್ಲಿರುತ್ತಾರೆ. ಉತ್ತಮವಾಗಿ ಪ್ರದರ್ಶಿತವಾದ ನಾಟಕಕ್ಕೆ ಕೊನೆಯ ದಿನ ಪ್ರಶಸ್ತಿ ಫಲಕದೊಂದಿಗೆ 5000 ರೂಪಾಯಿಗಳ ನಗದು ಬಹುಮಾನ ನೀಡಲಾಗುವುದು ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಇದಲ್ಲದೆ ಸಮಾಧಾನಕರ ಬಹುಮಾನಗಳನ್ನು ಗಿಟ್ಟಿಸಿಕೊಳ್ಳುವ ನಾಟಕ ತಂಡಕ್ಕೆ 2000 ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕ ಸಿಗಲಿದೆ. ಬೆಳಕು, ರಂಗಸಜ್ಜಿಕೆ ವಿಭಾಗದವರಿಗೂ ಪ್ರೋತ್ಸಾಹಕರ ಬಹುಮಾನವಿರುತ್ತದೆ. ರಾಜ್ಯದ ಕಾಲೇಜುಗಳ ನಾಟಕ ಸಂಘಗಳೂ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ರಾಷ್ಟ್ರೀಯ ನಾಟಕ ಶಾಲೆ, ಯುವಜನ ಮತ್ತು ಕ್ರೀಡಾ ವಿಭಾಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಈ ಉತ್ಸವದಲ್ಲಿ ನಡೆಯುವ ಈ ರಂಗೋತ್ಸವದಲ್ಲಿ ಹಿಂದಿ ಚಿತ್ರ ನಟರಾದ ನಾನಾ ಪಾಟೇಕರ್ ಹಾಗೂ ಓಂಪುರಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಹೆಚ್ಚಿನ ವಿಷಯಕ್ಕೆ ಸಂಪರ್ಕಿಸಬೇಕಾದ ವಿಳಾಸ -ದೃಷ್ಟಿ, 108/1, ರೋಹಿಣಿ ಅಪಾರ್ಟ್‌ಮೆಂಟ್ಸ್, 9 ನೇ ಅಡ್ಡ ರಸ್ತೆ, ವಿಲ್ಸನ್ ಗಾರ್ಡನ್, ಬೆಂಗಳೂರು, 560 027, ಫೋನ್ - 98440-56179, ಫ್ಯಾಕ್ಸ್- (080) 5545168
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications