ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗಸ್ಟ್‌ 1ರಿಂದ 8ರವರೆಗೆ ದಾವಣಗೆರೆಯಲ್ಲಿ ಸ್ತನಪಾನ ಸಪ್ತಾಹ

By Staff
|
Google Oneindia Kannada News

ಜನರಿಗೆ ತಾಯ ಎದೆಹಾಲಿನ ಬಗ್ಗೆ ಸಾಕಷ್ಟು ಅರಿವಿಲ್ಲದಿರುವ ಕಾರಣ ವರ್ಷಕ್ಕೆ 11 ಕೋಟಿ ಲೀಟರ್‌ನಷ್ಟು ತಾಯಿ ಎದೆಹಾಲು ನಷ್ಟವಾಗುತ್ತಿದೆ ! ಹೀಗಾಗಿ ತಾಯಂದಿರಲ್ಲಿ ಸೂಕ್ತ ತಿಳಿವಳಿಕೆ ಮೂಡಿಸಲು ಜಿಲ್ಲೆಯಲ್ಲಿ ಆಗಸ್ಟ್‌ 1ರಿಂದ 7ರವರೆಗೆ ವಿಶ್ವ ಸ್ತನಪಾನ ಸಪ್ತಾಹ ಆಚರಿಸಲಾಗುವುದು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್‌.ಜಿ. ಸದಾಶಿವ ಗೌಡ ಶುಕ್ರವಾರ ಈ ವಿಷಯ ತಿಳಿಸಿದ್ದಾರೆ. ಮಗುವಿಗೆ ತಾಯಿಯ ಎದೆಹಾಲು ಅಮೃತವಿದ್ದಂತೆ. ಸಾರಜನಕ, ಕೊಬ್ಬು, ಪ್ರೊಟೀನು ಮೊದಲಾದ ಅಂಶಗಳು ತಾಯ ಹಾಲಿನಲ್ಲಿ ಸಮರ್ಪಕ ಪ್ರಮಾಣದಲ್ಲಿರುತ್ತದೆ. ಮಗು ಬೌದ್ಧಿಕವಾಗಿ ಬೆಳೆಯಲು ಹಾಗೂ ರೋಗ ನಿರೋಧಕ ಶಕ್ತಿ ಪಡೆಯಲು ಅದು ದಿವ್ಯೌಷಧ. ಇದರ ಬಗ್ಗೆ ಇನ್ನೂ ಜನರಲ್ಲಿ ಜಾಗೃತಿ ಇಲ್ಲದಿರುವುದು ದುರಾದೃಷ್ಟಕರ ಎಂದು ಸದಾಶಿವ ಗೌಡ ಹೇಳಿದ್ದಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X