Get Updates
Get notified of breaking news, exclusive insights, and must-see stories!

ಹೊಸತು! ಮಳೆಗಾಲದಲ್ಲೂ ನೀರು ಕಾಯಿಸುವ ಸೋಲಾರ್‌ ಹೀಟರ್‌!

ಬೆಂಗಳೂರು : ರಾಜ್ಯ ಸರ್ಕಾರೀ ಸ್ವಾಮ್ಯದ ಮೈಸೂರ್‌ ಸೇಲ್ಸ್‌ ಇಂಟರ್‌ ನ್ಯಾಷನಲ್‌ ಲಿಮಿಟೆಡ್‌ ಅಭಿವೃದ್ಧಿಪಡಿಸಿದ ಸೋಲಾರ್‌ ಹೀಟರನ್ನು ಜುಲೈ 30ರಿಂದ ಮಾರುಕಟ್ಟೆಗೆ ತರಲಿದೆ.

ಗೃಹ ಹಾಗೂ ಕೈಗಾರಿಕೆಗಳಲ್ಲಿ ಬಳಸಬಹುದಾದ ಈ ಸೋಲಾರ್‌ ಹೀಟರ್‌ಗಳನ್ನು ಅತ್ಯಾಧುನಿಕ ತಂತ್ರಜ್ಞಾನದಿಂದ ತಯಾರಿಸಲಾಗಿದೆ. ಇಎಸ್‌ಎಸ್‌ಪಿಎಲ್‌ ಈ ಸೋಲಾರ್‌ ಹೀಟರ್‌ಗಳ ತಯಾರಿಕೆಗೆಂದೇ 4.5 ಕೋಟಿ ವೆಚ್ಚದ ಘಟಕವನ್ನು ನಿರ್ಮಿಸಿದೆ ಎಂದು ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ಐ.ಎಂ.ವಿಠ್ಠಲಮೂರ್ತಿ ಶುಕರ್ವಾರ ಸುದ್ದಿಗಾರರಿಗೆ ತಿಳಿಸಿದರು.

ಪ್ರತಿಕೂಲ ಹವಾಮಾನದಲ್ಲೂ ಗ್ರಾಹಕರಿಗೆ ಅನುಕೂಲವಾಗುವಂತೆ ಗೀಸರನ್ನು ಸೋಲಾರ್‌ ಹೀಟರ್‌ನ ಒಳಗಡೆಯೇ ಅಳವಡಿಸಲಾಗಿದೆ. ಇಂಡಿಯನ್‌ ರಿನ್ಯೂಯಬಲ್‌ ಎನರ್ಜಿ ಡೆವೆಲಪ್‌ಮೆಂಟ್‌ ಏಜೆನ್ಸಿ ಈ ಸೋಲಾರ್‌ ಹೀಟರನ್ನು ಅನುಮೋದಿಸಿದೆ. ಎಂಎಸ್‌ಐಎಲ್‌ ಹಾಗೂ ಇಎಸ್‌ಎಸ್‌ಪಿಎಲ್‌, ಆಹಾರ ಸಂಸ್ಕರಣಾ ಘಟಕಗಳಿಗೆ ಅನುವಾಗಬಲ್ಲ ಬಿಸಿಗಾಳಿ ಸೋಲಾರ್‌ ಗವಾಕ್ಷಿ ಮತ್ತಿತರ ವಿಶೇಷ ಉತ್ಪನ್ನಗಳನ್ನು ತಯಾರಿಸುವ ನಿಟ್ಟಿನಲ್ಲಿ ಯೋಜನೆ ಹಮ್ಮಿಕೊಳ್ಳಲಿವೆ. ಹೊಸ ಉತ್ಪನ್ನದಿಂದ ಪ್ರಸಕ್ತ ವಿತ್ತ ವರ್ಷದಲ್ಲಿ 10 ಕೋಟಿ ರುಪಾಯಿ ಆದಾಯದ ನಿರೀಕ್ಷೆಯಿದ್ದು, 18 ಕೋಟಿ ರುಪಾಯಿ ನಿವ್ವಳ ವಹಿವಾಟನ್ನು ಕಂಪನಿ ನಡೆಸಲಿದೆ ಎಂದು ವಿಠ್ಠಲಮೂರ್ತಿ ಹೇಳಿದರು.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+