ಮೈಸೂರು ಮೃಗಾಲಯದಲ್ಲಿ ಮಿಲನ ಮಹೋತ್ಸವ !
ಮೈಸೂರು : ಇತ್ತೀಚೆಗಷ್ಟೇ ಬೆಂಗಳೂರು ಬಳಿಯ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಯುರೋಪ್‌ನ ವಿವಿಧ ಭಾಗಗಳಲ್ಲಿ ಬಂಧಮುಕ್ತವಾದ ಸರ್ಕಸ್ ಹುಲಿ-ಸಿಂಹ ಬಂದಿಳಿದದ್ದು ನಿಮಗೆ ತಿಳಿದಿರಬಹುದು.. ಈಗ ವಿದೇಶೀ ಅತಿಥಿಗಳು ಮೈಸೂರು ಮೃಗಾಲಯಕ್ಕೂ ಆಗಮಿಸಿದ್ದಾರೆ. ಯಾರಿವರು ?
ಜಗದ್ವಿಖ್ಯಾತವಾದ ಶ್ರೀಚಾಮರಾಜೇಂದ್ರ ಮೃಗಾಲಯಕ್ಕೆ ಬಂದಿರುವ ಈ ವಿದೇಶೀ ಅತಿಥಿಗಳನ್ನು ಕಾಣಲು ಸಾರ್ವಜನಿಕರು ಕನಿಷ್ಠ 6 ವಾರವಾದರೂ ಕಾಯಬೇಕು. ಅಂದ ಹಾಗೆ ಮೈಸೂರಿಗೆ ಬಂದಿರುವ ವಿದೇಶೀ ಅತಿಥಿಗಳು ಯಾರು ಗೊತ್ತೆ? ಕಾಂಗರೂ ಜಾತಿಗೆ ಸೇರಿದ ವಲ್ಲಭಿಗಳು.
ಅರ್ಟಿಸ್ ಮೃಗಾಯಲದ ನಿರ್ದೇಶಕ ಡಾ. ರಾಬರ್ಟ್ ವ್ಯಾಂಡ್ ಪಾಲ್ ಫೆಬ್ರವರಿ ತಿಂಗಳಿನಲ್ಲಿ ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿದ್ದ ನೆನಪಿಗಾಗಿ ಈ ಎರಡು ಗಂಡು ವಲ್ಲಭಿಗಳನ್ನು ನೀಡಿದ್ದಾರೆ. ಅಂದಹಾಗೆ 1995ರಿಂದ ಜೋಡಿಯಿಲ್ಲದೆ ಹಪಹಪಿಸುತ್ತಿದ್ದ 4 ಹೆಣ್ಣು ವಲ್ಲಭಿಗಳಿಗೆ ಈ ಹೊಸ ಗಂಡು ವಲ್ಲಭಿಗಳು ಸಂಗಾತಿಗಳಾಗಲಿದ್ದಾರೆ. ಈ ವಿಷಯವನ್ನು ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕ ಎನ್. ರಾಜಶೇಖರ್ ತಿಳಿಸಿದ್ದಾರೆ.
ಕ್ರಮವಾಗಿ 5 ಮತ್ತು 2 ವರ್ಷ ವಯಸ್ಸಿನ ಈ ಗಂಡು ವಲ್ಲಭಿಗಳು ಬುಧವಾರ ರಾತ್ರಿ ಮೈಸೂರು ಮೃಗಾಲಯಕ್ಕೆ ಆಗಮಿಸಿವೆ. ಆಸ್ಟ್ರೇಲೀಯಾ ಮೂಲದ ಈ ಪ್ರಾಣಿಗಳನ್ನು ಮೊದಲು ಆರು ವಾರಗಳ ಕಾಲ ಪ್ರತ್ಯೇಕವಾಗಿರಿಸಿ, ಹವಾಮಾನಕ್ಕೆ ಹೊಂದಿಕೊಂಡ ನಂತರ ಹೆಣ್ಣು ವಲ್ಲಭಿಗಳಿರುವ ಜಾಗದಲ್ಲಿ ಬಿಡುವ ಮೂಲಕ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುವುದು ಎಂದೂ ಅವರು ಹೇಳಿದ್ದಾರೆ.
ವಲ್ಲಭಿ ಯಾರಿವರು: ವಲ್ಲಭಿ ಕಾಂಗರೂ ಜಾತಿಯ ಒಂದು ಮುದ್ದು ಪ್ರಾಣಿ. ಆಸ್ಟ್ರೇಲಿಯಾ ಖಂಡದ ಸ್ಥಳೀಯ ಭಾಷೆಯ ಪ್ರಕಾರ, ವಲ್ಲ ಎಂದರೆ ಹಾರು, ನೆಗೆ, ಜಿಗಿ ಎಂದರ್ಥ. ಕಾಂಗರೂ ಜಾತಿಯ ಮಾರ್ಸಪಿಯಾಲಿಯ ವರ್ಗಕ್ಕೆ ಸೇರಿದ ಹಾಗೂ ಉದರದಲ್ಲಿ ಚೀಲ ಹೊಂದಿರುವ ಸಸ್ತನಿ ಇದು.
ಸಸ್ಯಾಹಾರಿಗಳಾದ ವಲ್ಲಭಿಗಳು ಹುಲ್ಲು, ಎಲೆ, ಕಾಳು, ತರಕಾರಿ ತಿನ್ನುತ್ತವೆ. 10 ರಿಂದ 12 ವರ್ಷಗಳ ಕಾಲ ಬದುಕುತ್ತವೆ. 40 ದಿನಗಳ ಕಾಲ ಗರ್ಭ ಧರಿಸುತ್ತವೆ. ಇವುಗಳ ಮರಿಗೆ ಜೋಯೆ ಎನ್ನುತ್ತಾರೆ. ಮರಿಗಳು ಜನ್ಮಾನಂತರ ಕೂಡ ಉದರದ ಬಳಿಯ ಚೀಲದಲ್ಲಿದ್ದು ರಕ್ಷಣೆ ಪಡೆದು ಅಭಿವೃದ್ಧಿಹೊಂದಿದ ಬಳಿಕ ನೆಲಕ್ಕೆ ಜಿಗಿಯುತ್ತವೆ. ಅಪಾಯದ ಸಂದರ್ಭಗಳಲ್ಲಿ ಕೂಡ ಮರಿಗಳು ತಾಯಿಯ ಉದರ ಚೀಲದಲ್ಲಿ ಹೋಗಿ ಅಡಗಿ ಕೂರುತ್ತವೆ.
ಅಂದಹಾಗೆ, ಭಾರತದಲ್ಲಿರುವ ಮೃಗಾಲಯಗಳ ಪೈಕಿ ಮೈಸೂರು ಮೃಗಾಯಲವೊಂದರಲ್ಲೇ ವಲ್ಲಭಿಗಳು ಇರುವುದು. ಮೈಸೂರು ಮೃಗಾಲಯದಲ್ಲಿ ಸುಮಾರು 120 ವಿವಿಧ ಜಾತಿಯ 1,164 ಪ್ರಾಣಿಗಳಿವೆ.
ವಾರ್ತಾ ಸಂಚಯ
ಮುಖಪುಟ / ನೋಡು ಬಾ ನಮ್ಮೂರ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications