ಆಗಸ್ಟ್ 2ರಂದು ಇಂಟೆಲ್ ಕಾರ್ಪೊರೇಷನ್ನ ಬ್ಯಾರೆಟ್ ಬೆಂಗಳೂರಿಗೆ
ಬೆಂಗಳೂರು : ಆಗಸ್ಟ್ 2ರಂದು ಸಿಲಿಕಾನ್ ನಗರಿಗೆ ಸಿಲಿಕಾನ್ ದಿಗ್ಗಜರೊಬ್ಬರು ಬಂದಿಳಿಯಲಿದ್ದಾರೆ. ಉದ್ದಿಮೆದಾರರ ಕಣ್ಣೆಲ್ಲಾ ಎರಡು ದಿನಗಳ ಕಾಲ ಬೆಂಗಳೂರಿನತ್ತಲೇ ನೆಡಲಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರ್ತಿಸಿಕೊಂಡಿರುವ ಇಂಟೆಲ್ ಕಾರ್ಪೊರೇಷನ್ನಿನ ಕ್ರೇಗ್ ಆರ್. ಬ್ಯಾರೆಟ್ ಬೆಂದಕಾಳೂರಿಗೆ ಎರಡು ದಿನಗಳ ಭೇಟಿ ಕೊಡಲಿದ್ದಾರೆ.
ನಗರಿಯಲ್ಲಿನ ಇಂಟೆಲ್ ಕೇಂದ್ರವನ್ನು ವಿಸ್ತರಿಸುವ ಕಾರ್ಯಕ್ರಮಕ್ಕೆ ಬ್ಯಾರೆಟ್ ಚಾಲನೆ ಕೊಡುವರೋ? ಅಮೆರಿಕ ಆರ್ಥಿಕ ಹಿನ್ನಡೆಯ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ತಮ್ಮ ಕಂಪನಿಯ ವಹಿವಾಟು ಹೆಚ್ಚಿಸುವ ಹೆಜ್ಜೆಗಳನ್ನೇನಾದರೂ ಇಡುವರೋ? ಎಂಬ ಪ್ರಶ್ನೆಗಳು ಉದ್ದಿಮೆದಾರರ ಮನದಲ್ಲಿ ಸುಳಿದಾಡುತ್ತಿವೆ. ಕಂಪನಿಯ 15 ಕೇಂದ್ರಗಳ ಪೈಕಿ ಬೆಂಗಳೂರಲ್ಲೂ ಒಂದು ಕೇಂದ್ರವಿದೆ. ಜೊತೆಗೆ ಏರ್ಪೋರ್ಟ್ ರಸ್ತೆಯಲ್ಲಿ ಕಂಪನಿಯ ತುಂಡು ಭೂಮಿಯೂ ಇದೆ. ಈ ಭೂಮಿಯಲ್ಲಿ ಐಟಿ ಅಲೆಯೆಬ್ಬಿಸುವ ಉದ್ದಿಶ್ಯ ಬ್ಯಾರೆಟ್ ಅವರದ್ದಿರಬಹುದೇ ಎಂಬ ಅನುಮಾನವೂ ಈ ಹೊತ್ತು ಕೇಳಿಬರುತ್ತಿದೆ.
ಆಗಸ್ಟ್ 2 ಹಾಗೂ 3ರ ಎರಡು ದಿನಗಳ ತಮ್ಮ ಭೇಟಿಯಲ್ಲಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹಾಗೂ ಉದ್ದಿಮೆದಾರರನ್ನು ಬ್ಯಾರೆಟ್(ವಿಶೇಷವಾಗಿ ಇನ್ಫೋಸಿಸ್ ನಾರಾಯಣ ಮೂರ್ತಿ ಹಾಗೂ ವಿಪ್ರೋದ ಅಜೀಂ ಪ್ರೇಂಜಿ ?) ಭೇಟಿಯಾಗಲಿದ್ದಾರೆ. ಬ್ಯಾರೆಟ್ ಭೇಟಿ ಕಾಯೋ, ಹಣ್ಣೋ ಅನ್ನೋದು ಆಗಸ್ಟ್ 3ರ ಹೊತ್ತಿಗೆ ಬಹುತೇಕ ಗೊತ್ತಾಗಲಿದೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications