ಇಂಗ್ಲೆಂಡಿನ ಮಾಹಿತಿ ತಂತ್ರಜ್ಞಾನದಲ್ಲಿ ಭಾರತದ ಜೋರು ಬಂಡವಾಳ
ಬ್ರಿಟನ್ : ಇಂಗ್ಲೆಂಡಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅತಿ ಹೆಚ್ಚು ಬಂಡವಾಳ ಹೂಡಿರುವ ದೇಶಗಳ ಯಾದಿಯಲ್ಲಿ ಭಾರತ 8ನೇ ಸ್ಥಾನದಲ್ಲಿದೆ ಎಂದು ಭಾರತದ ಹೈ ಕಮಿಷನರ್ ನರೇಶ್ವರ್ ದಯಾಳ್ ತಿಳಿಸಿದ್ದಾರೆ. ವಿವಿಧ ಪರಿಣತರು ಮಾಹಿತಿ ತಂತ್ರಜ್ಞಾನದಲ್ಲಿ ಭಾರತ-ಬ್ರಿಟನ್ನಿನ ಒಡಂಬಡಿಕೆ ವಗೈರೆಗಳ ಬಗ್ಗೆ ಆಡಿರುವ ಮಾತುಗಳು ಇಂತಿವೆ...
ಬ್ರಿಟಿಷ್ ಆಕ್ಸಿಜನ್ ಗ್ರೂಫ್‌ನ ಅಧ್ಯಕ್ಷ ಸರ್ ಡೇವಿಡ್ ಜಾನ್- ಭಾರತ ಹಾಗೂ ಬ್ರಿಟನ್ ಎರಡೂ ರಾಷ್ಟ್ರಗಳಿಗೆ ಲಾಭದಾಯಕವಾಗುವ ರೀತಿಯಲ್ಲಿ ಇತರೆ ರಾಷ್ಟ್ರಗಳೊಟ್ಟಿಗೆ ಒಡಂಬಡಿಕೆ ಮಾಡಿಕೊಳ್ಳಬೇಕು.
ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ದ ಅಧ್ಯಕ್ಷ ಸಂಜೀವ್ ಗೋಯಂಕಾ- ವೈಮಾನಿಕ, ರಸ್ತೆ ಹಾಗೂ ಮೂಲಭೂತ ಸೌಕರ್ಯ ಮತ್ತಿತರ ಕ್ಷೇತ್ರಗಳಲ್ಲೂ ಭಾರತ- ಇಂಗ್ಲೆಂಡ್ ಕೈಜೋಡಿಸಬೇಕು. ಕೇವಲ ಮಾಹಿತಿ ತಂತ್ರಜ್ಞಾನದ ಅಭಿವೃದ್ಧಿ ಸರ್ವತೋಮುಖ ಪ್ರಗತಿಯಾಗಲಾರದು.
ಅಶೋಕ್ ಸೂಟ, ಸಿಐಐ ಉಪಾಧ್ಯಕ್ಷ ಹಾಗೂ ಮೈಂಡ್ ಟ್ರೀ ಕನ್ಸಲ್ಟಿಂಗ್ ಪ್ರೆೃ. ಲಿ. ಅಧ್ಯಕ್ಷ- ಡಾಟ್‌ಕಾಂಗಳಿಗೆ ಉಳಿಗಾಲ ಇಲ್ಲವಾಗುತ್ತಿದೆಯಾದರೂ, ಇಂಟರ್ನೆಟ್‌ಗೆ ಸಾವಿಲ್ಲ. ಬದಲಿಗೆ ಅದು ಬೆಳೆಯುತ್ತಲೇ ಇದ್ದು, ನಮ್ಮ ಜೀವನದ ಅನೇಕ ಕ್ಷೇತ್ರಗಳಲ್ಲಿ ಹಾಸುಹೊಕ್ಕಾಗಲಿದೆ.
ಕಂಪ್ಯೂಟರ್ ಸಾಪ್ಟ್‌ವೇರ್ ಸರ್ವಿಸಸ್ ಅಸೋಸಿಯೇಷನ್‌ನ ಪ್ರಧಾನ ನಿರ್ದೇಶಕ ಜಾನ್ ಹಿಗ್ಗಿನ್ಸ್- ಬ್ರಿಟನ್ನಿನ ಮಾಹಿತಿ ತಂತ್ರಜ್ಞಾನ ಮಾರುಕಟ್ಟೆಯ ಮೌಲ್ಯ 20 ಶತಕೋಟಿ ಪೌಂಡ್‌ಗಳಷ್ಟಿದೆ. -ಪ್ರ-ತಿಶತ 7ರಷ್ಟು ಗತಿಯಲ್ಲಿ ಈ ಕ್ಷೇತ್ರ ಬೆಳೆಯುತ್ತಿದ್ದು, ಭಾರತ ಮತ್ತಷ್ಟು ಬಂಡವಾಳವನ್ನು ಇಲ್ಲಿ ಹೂಡುವುದು ಒಳ್ಳೆಯದು. ಅದರಲ್ಲೂ ಸಾಫ್ಟ್‌ವೇರ್ ಮಾರುಕಟ್ಟೆ ಇಲ್ಲಿ ಭಾರೀ ಜೋರಾಗಿದೆ.
(ಏಜೆನ್ಸೀಸ್)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications