ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಐಓಎಫ್‌’ ಅತ್ಯಮೂಲ್ಯ ಸ್ಮಾರಕಗಳ ರಕ್ಷಣೆ ಯೋಜನಾ ಪಟ್ಟಿಯಲ್ಲಿ ಹಂಪಿ

By Staff
|
Google Oneindia Kannada News

ಬೆಂಗಳೂರು : ದೇಶದ ಅತ್ಯಮೂಲ್ಯ ಸ್ಮಾರಕಗಳನ್ನು ರಕ್ಷಿಸುವ ಮತ್ತು ಅಭಿವೃದ್ಧಿಗೊಳಿಸವ ಯೋಜನೆಯಾಂದನ್ನು ಇಂಡಿಯನ್‌ ಆಯಿಲ್‌ ಫೌಂಡೇಷನ್‌ (ಐಓಎಫ್‌) ಆರಂಭಿಸಿದ್ದು, ಈ ಯೋಜನೆಯಡಿ ರಾಜ್ಯದಿಂದ ಹಂಪಿ ಕ್ಷೇತ್ರವನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿದೆ.

ದೇಶದ ಪ್ರಥಮ ಪೆಟ್ರೋಲಿಯಂ ಕಂಪೆನಿ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌, ಕೇಂದ್ರ ಸರಕಾರದ ನಿಸರ್ಗ ಮತ್ತು ಸಾಂಸ್ಕೃತಿಕ ನಿಧಿ ಹಾಗೂ ಭಾರತೀಯ ಪುರಾತತ್ವ ಸಮೀಕ್ಷಾ ವಿಭಾಗದ ಸಹಯೋಗದಲ್ಲಿ ಈ ಅಭಿವೃದ್ಧಿ ಕಾರ್ಯವನ್ನು ನಿರ್ವಹಿಸುವುದು. ಈ ವಿಷಯವನ್ನು ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌(ಐಓಸಿ) ನ ಎಂ. ಎ ಪಠಣ್‌ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಯೋಜನೆಯ ಪ್ರಥಮ ಹಂತದಲ್ಲಿ ಹಂಪೆಗೆ ಆಗಮಿಸುವ ಪ್ರವಾಸಿಗಳಿಗೆ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗುವುದು ಹಾಗೂ ಸಂಪರ್ಕ, ಸಾರಿಗೆ, ವಾಣಿಜ್ಯ ಮಳಿಗೆ, ಬ್ಯಾಂಕ್‌, ಉಪಾಹಾರ ಮಂದಿರಗಳನ್ನು ನಿರ್ಮಿಸಲಾಗುವುದು. ಅಲ್ಲದೆ ಅವುಗಳನ್ನು ನಿರ್ವಹಿಸಿಕೊಂಡು ಹೋಗುವ ಹೊಣೆಯನ್ನೂ ಐಓಎಫ್‌ ವಹಿಸಿ ಕೊಳ್ಳುವುದು.

ಸದ್ಯಕ್ಕೆ ಹಾಕಿಕೊಂಡಿರುವ ಅಭಿವೃದ್ಧಿ ಯೋಜನೆಯನ್ನು ಕಾರ್ಯಗತಗೊಳಿಸಲು ರಾಜ್ಯ ಸರಕಾರದಿಂದ ನಿವೇಶನ ಸಿಗಬೇಕಾಗಿದೆ. ಕುತುಬ್‌ ಮಿನಾರ್‌ ಸೇರಿದಂತೆ ಉತ್ತರ ಭಾರತದ ಹಲವು ಸ್ಮಾರಕಗಳಲ್ಲಿಯೂ ಐಓಎಫ್‌ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಂಡಿದೆ ಎಂದು ಪಠಣ್‌ ತಿಳಿಸಿದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X