‘ಅಜ್ಞಾತವಾಸ ಮುಗಿಯಿತು’- ಮೈಸೂರಿನಲ್ಲಿ ದೇವೇಗೌಡರ ಘೋಷಣೆ
ಮೈಸೂರು : ‘ದೇವರ ದಯದಿಂದ ಒದಗಿದ್ದ ಸಂಕಷ್ಟಗಳೆಲ್ಲ ಪರಿಹಾರವಾಗಿವೆ. ಆರೋಗ್ಯವೂ ಸುಧಾರಿಸಿದೆ. ಅಜ್ಞಾತವಾಸ ಮುಗಿದಿದ್ದು , ಇನ್ನು ಮುಂದೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ರಾಜಕಾರಣದಲ್ಲಿ ಭಾಗವಹಿಸುತ್ತೇನೆ’.
ದೇವೇಗೌಡರ ಮುಖದಲ್ಲಿ ತೆಳುನಗೆ ಹರಡಿತ್ತು . ಮಾತುಗಳಲ್ಲಿ ಯಾವತ್ತಿನ ಹುಮ್ಮಸ್ಸು , ಆತ್ಮ ವಿಶ್ವಾಸ ಹಾಗೂ ಸಾಧಿಸಿಯೇ ತೀರುವ ಕೆಚ್ಚು . ಕೆಲವು ದಿನಗಳ ಕಾಲ ಅನಾರೋಗ್ಯ ಹಾಗೂ ಕೌಟುಂಬಿಕ ಸಮಸ್ಯೆಗಳ ಕಾರಣ ಸಕ್ರಿಯ ರಾಜಕಾರಣದಿಂದ ದೂರವಿದ್ದ ದೇವೇಗೌಡ ಗುರುವಾರ ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಮತ್ತೆ ತಮ್ಮ ರಾಜಕೀಯ ಪ್ರವೇಶವನ್ನು ಘೋಷಿಸಿದರು.
ಇಷ್ಟಕ್ಕೂ ದೇವೇಗೌಡ ರಾಜಕೀಯದಿಂದ ದೂರವಿದ್ದುದು ಯಾವತ್ತು ?
ಅವರಿಗೆ ರಾಜಕೀಯ ಬಿಟ್ಟು ಏನೂ ಗೊತ್ತಿಲ್ಲ . ದಿನ ಬೆಳಗಾಗುವುದು ಮುಗಿಯುವುದೂ ರಾಜಕೀಯದೊಂದಿಗೆ ಎನ್ನುತ್ತಾರೆ ಅಭಿಮಾನಿಗಳು. ಇದು ಸುಳ್ಳೇನೂ ಅಲ್ಲ . ಆದರೆ ಈಚಿನ ದಿನಗಳಲ್ಲಿ ಆರೋಗ್ಯ ಅವರನ್ನು ಕಟ್ಟಿ ಹಾಕಿತ್ತು . ಮೊನ್ನೆಯಷ್ಟೇ ಅಮೇರಿಕಾ ಪ್ರವಾಸವನ್ನೂ ಗೌಡರು ಮುಗಿಸಿ ಮರಳಿದ್ದಾರೆ. ಅಲ್ಲಿನ ಕನ್ನಡ ಬಂಧುಗಳೊಂದಿಗೆ ಒಂದಾಗಿ ಬೆರೆತಿದ್ದಾರೆ, ಬೆರಗಾಗಿದ್ದಾರೆ.
ದೇವೇಗೌಡ ಈಗ ಮತ್ತೆ ಗೆಲುವಾಗಿದ್ದಾರೆ. ಅವರೇ ಹೇಳುವಂತೆ ಕುಟುಂಬದ ಹಾಗೂ ಆರೋಗ್ಯದ ಸಮಸ್ಯೆಗಳು ಮುಗಿದವು. ಅಜ್ಞಾತವಾಸವೂ ಮುಗಿದಿದೆ. ಇನ್ನು ಮುಂದೆ ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ ಎಂದು ಗೌಡರು ಸ್ಪಷ್ಟವಾಗಿ ಹೇಳುತ್ತಾರೆ.
ಸದ್ಯಕ್ಕೆ ಗೌಡರ ಆದ್ಯತೆ ಪಕ್ಷವನ್ನು ಬಲಪಡಿಸುವುದು ಹಾಗೂ ಜನಸೇವೆ. ರಾಷ್ಟ್ರ ಹಾಗೂ ಸಕ್ರಿಯ ರಾಜಕಾರಣದಲ್ಲಿ ತೊಡಗುತ್ತೇನೆ ಎಂದು ಗೌಡರು ಹೇಳುವಾಗ ಹುಮ್ಮಸ್ಸು ಅವರ ಮಾತುಗಳಲ್ಲಿ ತುಳುಕುತ್ತದೆ.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications