‘ವಿಫ್ರೋ ಇನ್ಫೋಟೆಕ್’ ಸೀಮೋಲ್ಲಂಘನ ಗಾಥೆಗೆ ಸಿಂಗಪೂರ್ ಸೇರ್ಪಡೆ
ಬೆಂಗಳೂರು : ಐಟಿ ದೈತ್ಯ ‘ವಿಫ್ರೋ ಲಿಮಿಟೆಡ್’ನ ಪ್ರಮುಖ ವಿಭಾಗವಾದ ‘ವಿಫ್ರೋ ಇನ್ಫೋಟೆಕ್’ ಸೀಮೋಲ್ಲಂಘನದ ಮತ್ತೊಂದು ಸಾಹಸಗಾಥೆ ಬರೆದಿದ್ದು , ಮಂಗಳವಾರ ಸಿಂಗಪೂರ್ನಲ್ಲಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.
ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಜಾಗತಿಕ ನಾಯಕರಲ್ಲೊಂದಾದ ವಿಫ್ರೋ ಲಿಮಿಟೆಡ್ ಮಾರುಕಟ್ಟೆಯಲ್ಲಿ 6.8 ಬಿಲಿಯನ್ ಡಾಲರ್ಗಳ ವಹಿವಾಟನ್ನು ಹೊಂದಿದೆ. ಸಿಂಗಪೂರನ್ನು ಪ್ರಾದೇಶಿಕ ಕೇಂದ್ರಸ್ಥಾನವಾಗಿಸಿಕೊಂಡಿರುವ ವಿಫ್ರೋ ಲಿಮಿಟೆಡ್ ಮಲೇಷಿಯಾ, ಥೈಲ್ಯಾಂಡ್, ಫಿಲಿಫೈನ್ಸ್, ಇಂಡೋನೇಷಿಯಾ, ವಿಯಾಟ್ನಂ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ಗಳಲ್ಲೂ ತನ್ನ ಸೇವಾ ವ್ಯಾಪ್ತಿಯನ್ನು ಹೊಂದಿದೆ.
ಮೂಲಭೂತ ನಿರ್ವಹಣಾ ಸೇವೆಗಳು, ವಾಣಿಜ್ಯ ಪರಿಹಾರೋಪಯಗಳು, ವ್ಯವಸ್ಥೆಯ ಹೊಂದಾಣಿಕೆ, ತ್ರಾಸದಾಯಕ ಮಾಹಿತಿಯ ನಿರ್ವಹಣೆ ಸೇರಿದಂತೆ ವಿವಿಧ ಸೇವೆಗಳನ್ನು ವಿಫ್ರೋ ಇನ್ಫೋಟೆಕ್ ತನ್ನ ಗ್ರಾಹಕರಿಗೆ ಒದಗಿಸುತ್ತಿದೆ ಎಂದು ವಿಫ್ರೋ ಇನ್ಫೋಟೆಕ್ನ ಏಷ್ಯಾ ಫೆಸಿಪಿಕ್ ಕಾರ್ಯ ಚಟುವಟಿಕೆಗಳನ್ನು ಔಪಚಾರಿಕವಾಗಿ ಪ್ರಕಟಿಸಿರುವ ಅದರ ಅಧ್ಯಕ್ಷ ಸುರೇಶ್ ವಸ್ವಾನಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಐಟಿ ಸೇವೆಗಳನ್ನು ಒದಗಿಸುವ ಮೊದಲ 10 ಜಾಗತಿಕ ಕಂಪನಿಗಳಲ್ಲಿ ಒಂದಾಗುವ ಮಹತ್ವಾಕಾಂಕ್ಷೆಯ ಗುರಿಯನ್ನು ವಿಫ್ರೋ ಇನ್ಫೋಟೆಕ್ ಹೊಂದಿರುವುದಾಗಿಯೂ ಸುರೇಶ್ ತಮ್ಮ ಹೇಳಿಕೆಯಲ್ಲಿ ಹೇಳಿದ್ದಾರೆ.
(ಯುಎನ್ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications