ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರ್ಧ ಮಳೆಗಾಲ ಮುಗಿದರೂ ಬಾರದ ಮಳೆ ಆಗಸ್ಟ್‌ನಲ್ಲೂ ಬರಲ್ಲ

By Staff
|
Google Oneindia Kannada News

ಬೆಂಗಳೂರು : ಒಣಗಿ ಭಣಗುಟ್ಟುತ್ತಿರುವ ಜೂನ್‌ ಜುಲೈ ತಿಂಗಳ ಬೇಗೆ ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. ಆಗಸ್ಟ್‌ನಲ್ಲಿಯೂ ಮಳೆ ಬರುವ ಸಾಧ್ಯತೆ ತೀರಾ ಕಡಿಮೆ ಎಂದು ಹವಾಮಾನ ಇಲಾಖೆ ಹೇಳಿದೆ.

ಅರ್ಧ ಮಳೆಗಾಲ ಕಳೆದು ಹೋದ ನಂತರವೂ ಮಳೆ ಬರಬಹುದು ಎಂದು ರಾಜ್ಯದ ಜನತೆ ನಿರೀಕ್ಷಿಸುತ್ತಿದ್ದರೆ, ಮಳೆ ಬರುವುದು ಕಷ್ಟ ಸಾಧ್ಯ ಎಂದು ಖಂಡತುಂಡವಾಗಿ ಹವಾಮಾನ ಇಲಾಖೆಯ ವರದಿ ಹೇಳುತ್ತಿದೆ. ಬೇಸಿಗೆಯ ನಂತರ ಮಳೆಗಾಲ ಬಂದಿದೆ ಎಂಬುದೇ ತಿಳಿಯುತ್ತಿಲ್ಲ. ಇತಿಹಾಸದಲ್ಲಿಯೂ ಬರಗಾಲಗಳು ಕಾಣಿಸಿಕೊಂಡಿವೆ. ಆದರೆ ಇತ್ತೀಚಿನ ದಶಕಗಳಲ್ಲಿ ಬರಗಾಲ ಆಗಾಗ ಕಾಣಿಸಿಕೊಳ್ಳಲಾರಂಭಿಸಿದೆ. ಇದರಿಂದ ಜನಜೀವನಕ್ಕೆ ವಿಪರೀತ ತೊಂದರೆಯಾಗುತ್ತಿದೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಎ.ಎಲ್‌.ಕೊಪ್ಪರ್‌ ಹೇಳುತ್ತಾರೆ.

40 ವರ್ಷಗಳಲ್ಲಿ ಜೂನ್‌ ಇಷ್ಟೊಂದು ಭಣಗುಟ್ಟಿರಲಿಲ್ಲ
ಈ ವರ್ಷದ ಏಪ್ರಿಲ್‌ ಮತ್ತು ಮೇ ತಿಂಗಳಿನಲ್ಲಿ ಮಳೆ ಸಾಕಷ್ಟು ಬಂದಿದ್ದು, ಜನರಲ್ಲಿ ಆಶಾವಾದ ಹುಟ್ಟಿತ್ತು. ಆದರೆ ಮೇ ತಿಂಗಳಿನಲ್ಲಿ ಹೋದ ಮಳೆ ಮತ್ತೆ ದಯಮಾಡಿಸಿಲ್ಲ. ಕಳೆದ 40 ವರ್ಷಗಳ ಅವಧಿಯಲ್ಲಿ ಈ ಬಾರಿಯದು ಅತೀ ಒಣ ಜೂನ್‌ ತಿಂಗಳು ಎಂದು ದಾಖಲಾಗಿದೆ. ಬೆಂಗಳೂರು ಮತ್ತು ಉತ್ತರ ಕರ್ನಾಟಕದಲ್ಲಿ ಬಿದ್ದ ಮಳೆ 10 ಮಿಲಿ ಮೀಟರ್‌ನ ಆಸುಪಾಸಿಗೇ ಇದೆ. ಪ್ರತಿ ವರ್ಷ ಮೇ ತಿಂಗಳ ಅಂತ್ಯಕ್ಕೆ ಹವಾಮಾನ ಇಲಾಖೆ ಬಿಡುಗಡೆ ಮಾಡುತ್ತಿದ್ದ ಮಳೆ ವಿವರ ಈ ವರ್ಷ ಇನ್ನೂ ಬಂದಿಲ್ಲ. ಯಾಕೆಂದರೆ ರಾಜ್ಯದಲ್ಲಿ ಸಾಕಷ್ಟು ಮಳೆಯೇ ಆಗಿಲ್ಲ.

ಮಳೆಗಾಲ ಮುಗಿಯಲು ಇನ್ನೆರಡು ತಿಂಗಳು ಮಾತ್ರ ಉಳಿದಿದೆ. ಶ್ರಾವಣದ ಚಿಟಿಪಿಟಿ ಮಳೆಯಾಗಲಿ, ಪುಷ್ಯದ ಜಡಿಮಳೆಯಾಗಲಿ ರಾಜ್ಯಕ್ಕೆ , ಅದರಲ್ಲಿಯೂ ಉತ್ತರ ಕರ್ನಾಟಕಕ್ಕೆ ಬಂದಿಲ್ಲ. ಕರ್ನಾಟಕವನ್ನು ಬರಪೀಡಿತ ರಾಜ್ಯವೆಂದು ಘೋಷಿಸುವಂತೆ ಕೇಂದ್ರಕ್ಕೆ ಮನವಿ ಮಾಡಿಕೊಳ್ಳಲಾಗಿದೆ.

ಕುರಿಮಾಂಸದ ಬೆಲೆ 100 ರೂನಿಂದ 60 ಕ್ಕಿಳಿದಿದೆ
ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಮಂದಿ ಗುಳೇ ಹೊರಟಿರುವುದು, ದನಕರುಗಳು ಕಸಾಯಿ ಖಾನೆ ಸೇರುತ್ತಿರುವುದು, ಕುರಿ ಮಾಂಸದ ದರ 100 ರೂಪಾಯಿಯಿಂದ 60 ರೂಪಾಯಿಗೆ ಇಳಿದಿರುವುದು ರಾಜ್ಯ ಈಗಾಗಲೇ ಕ್ಷಾಮದಿಂದ ತತ್ತರಿಸುತ್ತಿರುವುದನ್ನು ಹೇಳುತ್ತಿದೆ.

ಆದರೆ ಇನ್ನಾದರೂ ಮಳೆ ಬರಬಹುದು ಎಂಬ ನಿರೀಕ್ಷೆ, ಹವಾಮಾನ ಇಲಾಖೆಯ ವರದಿಯಿಂದಾಗಿ ಸುಳ್ಳಾಗಿದೆ. ಆದರೂ ಸೆಪ್ಟೆಂಬರ್‌ ಅಕ್ಟೋಬರ್‌ ಹೊತ್ತಿಗೆ ರಾಜ್ಯಕ್ಕೆ ಸಾಕಷ್ಟು ಮಳೆ ಬರಬಹುದು ಎಂದು ಹೇಳುತ್ತಾ ಜನರ ಸೋಲುವ ಕಣ್ಣುಗಳಿಗೆ ಕೊಪ್ಪರ್‌ ಭರವಸೆ ತುಂಬಿದ್ದಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X