ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಬ್ಯಾಂಡಿಟ್‌ ಕ್ವೀನ್‌’ ಫೂಲನ್‌ದೇವಿಗೆ ಗುಂಡಿಕ್ಕಿ ಹತ್ಯೆ

By Staff
|
Google Oneindia Kannada News

ನವದೆಹಲಿ : ರಾಜಧಾನಿಯ ಅಶೋಕ ರಸ್ತೆಯಲ್ಲಿ ಸಮಾಜವಾದಿ ಪಕ್ಷದ ಸಂಸತ್‌ ಸದಸ್ಯೆ ಹಾಗೂ ‘ಚಂಬಲ್‌ ಕಣಿವೆಯ ಮಾಜಿ ಡಕಾಯಿತ ರಾಣಿ’ ಫೂಲನ್‌ದೇವಿ ಅವರನ್ನು ಬುಧವಾರ ಬೆಳಗ್ಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಫೂಲನ್‌ದೇವಿ ಹತ್ಯೆಯ ವಿಷಯವನ್ನು ಸಂಸದೀಯ ವ್ಯವಹಾರಗಳ ಸಚಿವ ಪ್ರಮೋದ್‌ ಮಹಾಜನ್‌ ಬುಧವಾರ ಲೋಕಸಭೆಯಲ್ಲಿ ಪ್ರಕಟಿಸಿದರು. ಫೂಲನ್‌ ಹತ್ಯೆಯ ವರದಿಗಳ ಕುರಿತಂತೆ ಕಾಂಗ್ರೆಸ್‌ನ ಪ್ರಿಯರಂಜನ್‌ ದಾಸ್‌ ಮುನ್ಷಿ ಅವರ ಪ್ರಶ್ನೆಗೆ ಸಚಿವರು ಉತ್ತರಿಸುತ್ತಿದ್ದರು.

ಫೂಲನ್‌ದೇವಿ ಅವರನ್ನು ಅವರ ನಿವಾಸದ ಎದುರಿನಲ್ಲಿಯೇ ಹಂತಕರು ಗುಂಡಿಟ್ಟು ಕೊಂದಿದ್ದಾರೆ. ಗುಂಡಿನ ದಾಳಿಯಲ್ಲಿ ಫೂಲನ್‌ ಸಾವಿಗೀಡಾದರೆ ಆಕೆಯ ಅಂಗರಕ್ಷಕ ಗಾಯಗೊಂಡಿದ್ದಾನೆ. ಹತ್ಯೆಯ ಹೆಚ್ಚಿನ ವಿವರಗಳು ತಿಳಿದುಬಂದಿಲ್ಲ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X