ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಬೆಂಗಳೂರು ಐಟಿ.ಕಾಂ ಮೇಳ-2001’ ರತ್ತ ಹೊರಳಿದ ವಿಶ್ವದ ಕಣ್ಣು

By Staff
|
Google Oneindia Kannada News

ಮುಂಬಯಿ : ನವಂಬರ್‌ 1 ರಿಂದ 5 ದಿನಗಳ ಕಾಲ ನಡೆಯುವ ಬೆಂಗಳೂರು ಐಟಿ ಡಾಟ್‌ಕಾಂ ಮೇಳ ಕಳೆದ ಬಾರಿಯ ಮೇಳಕ್ಕಿಂತ ಹೆಚ್ಚು ಪ್ರದರ್ಶಕರನ್ನು ಸೆಳೆಯಲಿದ್ದು , ಯುರೋಪ್‌- ಅಮೇರಿಕಾಗಳ ಮಾಹಿತಿ ತಂತ್ರಜ್ಞಾನ ಹಾಗೂ ಟೆಲಿಕಾಂ ಕ್ಷೇತ್ರಗಳ ದಿಗ್ಗಜರು ಸೇರಿದಂತೆ ಸುಮಾರು 500 ಪ್ರದರ್ಶಕರು ಮೇಳದಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಕಳೆದ ವರ್ಷದ ಮೇಳದಲ್ಲಿ 372 ಕಂಪನಿಗಳು ಭಾಗವಹಿಸಿದ್ದವು.

ಏಷ್ಯಾದ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಪ್ರದರ್ಶನ ಮಳಿಗೆಯಾಗಿರುವ ಬೆಂಗಳೂರಿನಲ್ಲಿ ಜರುಗುವ ಈ ಐಟಿ.ಕಾಂ ಮೇಳ ವಿಶ್ವದ ಗಮನವನ್ನು ಸೆಳೆದಿದೆ ಎಂದು ಕರ್ನಾಟಕ ಸರ್ಕಾರದ ಐಟಿ ಕಾರ್ಯದರ್ಶಿ ವಿವೇಕ್‌ ಕುಲಕರ್ಣಿ ಹೇಳಿದರು. ಮೈಕ್ರೋಸಾಫ್ಟ್‌ , ಐಬಿಎಂ ಮುಂತಾದ ಐಟಿ ಪ್ರಚಂಡರು ಮೇಳದಲ್ಲಿ ಭಾಗವಹಿಸುವುದು ಮಾತ್ರವಲ್ಲದೆ ವಿವಿಧ ಕಾರ್ಯಕ್ರಮಗಳನ್ನು ಪ್ರಾಯೋಜಿಸಲು ಒಪ್ಪಿರುವುದಾಗಿ ಅವರು ಹೇಳಿದರು.

ಅಮೇರಿಕಾ, ಇಂಗ್ಲೆಂಡ್‌, ಜರ್ಮನಿ, ಜಪಾನ್‌, ತೈವಾನ್‌, ಬೆಲ್ಜಿಯಂ, ಮಾರಿಷಸ್‌ ಸೇರಿದಂತೆ ವಿವಿಧ ದೇಶಗಳು ತಮ್ಮ ಪ್ರದರ್ಶನ ಮಳಿಗೆಗಳನ್ನು ಮೇಳದಲ್ಲಿ ತೆರೆಯಲಿವೆ. ಸುಮಾರು 60 ಸಾವಿರ ಐಟಿ ಪರಿಣತರು ಈ ಮೇಳದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ವಿವೇಕ್‌ ಕುಲಕರ್ಣಿ ಹೇಳಿದರು.

ಕರ್ನಾಟಕ ಸರ್ಕಾರದ ಆತಿಥ್ಯದಲ್ಲಿ ನಡೆಯುವ ಬೆಂಗಳೂರು ಐಟಿ.ಕಾಂ ಮೇಳವನ್ನು ನಾಸ್‌ಕಾಂ ಪ್ರಾಯೋಜಿಸಿದ್ದು, 10 ಸಾವಿರ ಚದರ ಅಡಿ ಪ್ರದೇಶದಲ್ಲಿ ಮೇಳ ನಡೆಯಲಿದೆ. ಈ ಮೇಳವು ಕೇವಲ ಪ್ರದರ್ಶನ ಮಾತ್ರವಲ್ಲದೆ ಕೊಡು- ಕೊಳ್ಳುವಿಕೆಯ ವೇದಿಕೆಯೂ, ಭಾರತೀಯ ಉದ್ಯಮ ವಿದೇಶಿ ಸಂಪನ್ಮೂಲಗಳನ್ನು ಹೊಂದುವ ಅವಕಾಶವೂ ಆಗಿದೆ ಎಂದು ಕುಲಕರ್ಣಿ ತಿಳಿಸಿದರು. ಕಳೆದ ವರ್ಷ ಜರುಗಿದ ಮೇಳ 200 ಮಿಲಿಯನ್‌ ಡಾಲರ್‌ ವಹಿವಾಟು ನಡೆಸಿದುದನ್ನು ಇಲ್ಲಿ ಸ್ಮರಿಸಬಹುದು.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X