Get Updates
Get notified of breaking news, exclusive insights, and must-see stories!

ಆಗ್ರಾ ಶೃಂಗಸಭೆ ವೈಫಲ್ಯಕ್ಕೆ ವಿಷಾದ ಪಡುವ ಅಗತ್ಯವಿಲ್ಲ - ವಾಜಪೇಯಿ

ನವದೆಹಲಿ : ಆಗ್ರಾ ಶೃಂಗಸಭೆ ವೈಫಲ್ಯದ ಕುರಿತು ಭಾರತ ವಿಷಾದ ಪಡುವ ಅಗತ್ಯವಿಲ್ಲ ಎಂದು ಪ್ರಧಾನಿ ವಾಜಪೇಯಿ ಮಂಗಳವಾರ ಲೋಕಸಭೆಯಲ್ಲಿ ತಿಳಿಸಿದ್ದಾರೆ.

ಆಗ್ರಾ ಶೃಂಗಸಭೆ ವಿಫಲವಾದ ಕುರಿತು ಸದನಕ್ಕೆ ಸಮಗ್ರ ಹೇಳಿಕೆಯನ್ನು ನೀಡುತ್ತಿದ್ದ ಪ್ರಧಾನಿ- ಭಯೋತ್ಪಾದಕತೆಯನ್ನು ನಿಗ್ರಹಿಸಲು ಭಾರತ ಸಮರ್ಥವಾಗಿರುವುದಾಗಿ ಹಾಗೂ ಕಾಶ್ಮೀರ ಹೊರತಾಗಿಯೂ ಚರ್ಚಿಸಲಿಕ್ಕೆ ಇತರ ವಿಷಯಗಳಿರುವುದಾಗಿ ಮುಷರ್ರಫ್‌ ಅವರಿಗೆ ಸ್ಪಷ್ಟ ಮಾತುಗಳಲ್ಲಿ ತಿಳಿಸಿದ್ದೇನೆ ಎಂದು ಹೇಳಿದರು.

ಭಾರತದ ಪ್ರಮುಖ ವಿಷಯ, ಗಡಿ ಭಾಗಗಳಲ್ಲಿನ ಭಯೋತ್ಪಾದಕತೆಯಾದರೆ, ಪಾಕಿಸ್ತಾನದ ಕೇಂದ್ರ ವಿಷಯ ಕಾಶ್ಮೀರ. ಇದರಿಂದಾಗಿಯೇ ಆಗ್ರಾ ಶೃಂಗಸಭೆಯಲ್ಲಿ ಯಾವುದೇ ಒಮ್ಮತಕ್ಕೆ ಬರಲು ಸಾಧ್ಯವಾಗಲಿಲ್ಲ . ನಮ್ಮ ಅಜೆಂಡಾದಲ್ಲಿ ಅನೇಕ ವಿಷಯಗಳಿದ್ದರೆ, ಕಾಶ್ಮೀರ ವಿಷಯಕ್ಕೆ ಮಾತ್ರ ಪಾಕಿಸ್ತಾನ ಜೋತುಬಿದ್ದಿತು ಎಂದು ವಾಜಪೇಯಿ ಸದನಕ್ಕೆ ತಿಳಿಸಿದರು.

ಆಗ್ರಾ ಶೃಂಗಸಭೆ ನಂತರ ಅಮರನಾಥ ಯಾತ್ರಿಕರ ಮೇಲೆ ನಡೆದಿರುವ ಭಯೋತ್ಪಾದಕ ಕೃತ್ಯಗಳನ್ನು ಬಲವಾಗಿ ಖಂಡಿಸಿದ ವಾಜಪೇಯಿ, ‘ನಿಮ್ಮ ಸಮಸ್ಯೆಗಳ ಬಗೆಗೆ ನಮಗೆ ಅರಿವಿದೆ. ಹಿಂಸಾತ್ಮಕ ಮಾರ್ಗವನ್ನು ತಡೆಗಟ್ಟುವ ಪ್ರಯತ್ನದಲ್ಲಿದ್ದೇವೆ’ ಎಂದು ಕಾಶ್ಮೀರಿಗಳನ್ನುದ್ದೇಶಿಸಿ ಹೇಳಿದರು.

ಮಾತುಕತೆಗಳು ಮುರಿದುಬಿದ್ದಿವೆ ಎನ್ನುವ ಹೇಳಿಕೆಗಳನ್ನು ಸ್ಪಷ್ಟವಾಗಿ ನಿರಾಕರಿಸಿದ ಅವರು, ಪಾಕ್‌ಗೆ ಭೇಟಿ ನೀಡುವ ಮುಷರ್ರಫ್‌ ಅವರ ಆಹ್ವಾನವನ್ನು ತಾವು ಒಪ್ಪಿಕೊಂಡಿದ್ದು ಮಾತುಕತೆ ಮುಂದುವರಿಯುವ ಬಗೆಗೆ ಆಶಾಭಾವನೆ ವ್ಯಕ್ತಪಡಿಸಿದರು. ಆಗ್ರಾ ಶೃಂಗಸಭೆ ವೈಫಲ್ಯದ ಕುರಿತು ಪ್ರಧಾನಿ ಸಂಸತ್ತಿನಲ್ಲಿ ಹೇಳಿಕೆ ನೀಡುವ ಮುನ್ನ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಭಾಗವಹಿಸಿದ್ದರು.

(ಏಜೆನ್ಸೀಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+