ಕೊಲ್ಲೂರು ಮೂಕಾಂಬಿಕೆ ಹುಂಡಿಯಲ್ಲಿ ಜಯಲಲಿತಾ ಬೆಳ್ಳಿ ಪ್ರತಿಮೆ
ಕುಂದಾಪುರ : ಕೊಲ್ಲೂರು ಶ್ರೀ ಮೂಕಾಂಬಿಕೆ ಹುಂಡಿಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರನ್ನು ಹೋಲುವ ಬೆಳ್ಳಿ ಪ್ರತಿಮೆ ಲಭ್ಯವಾಗಿದ್ದು , ಪ್ರತಿಮೆಯು 1 ಕೆ.ಜಿ. 100 ಗ್ರಾಂ ತೂಕವಿದೆ.
ತಮಿಳುನಾಡಿನಲ್ಲಿ ಮೂರ್ತಿಪೂಜೆ, ವ್ಯಕ್ತಿಪೂಜೆ ವಿಶೇಷ ಅಲ್ಲವಾದರೂ, ಕರ್ನಾಟಕದಲ್ಲೂ ತಮಿಳು ಪರಂಪರೆ ಕಾಣಿಸಿಕೊಂಡಿರುವುದು ಸೋಜಿಗಕ್ಕೆ ಕಾರಣವಾಗಿದೆ. ತಮಿಳುನಾಡು ಚುನಾವಣೆ ಸಂದರ್ಭದಲ್ಲಿ ಜಯಲಲಿತಾ ಮುಖ್ಯಮಂತ್ರಿಯಾಗುವುದು ಸಾಧ್ಯವಿಲ್ಲ ಎಂಬ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಜಯಲಲಿತಾ ಅಭಿಮಾನಿ ಮೂಕಾಂಬಿಕೆಗೆ ಹರಕೆ ಹೇಳಿಕೊಂಡಿರಬಹುದೇ ?
ನ್ಯಾಯ ಅನ್ಯಾಯ ಏನೇ ಇರಲಿ, ಭಕ್ತನ ಅಭೀಷ್ಟೆ ಯನ್ನು ದೇವಿ ಪೂರೈಸಿದ್ದಾಳಷ್ಟೆ. ಸದ್ದಿಲ್ಲದೆ ಜಯಲಲಿತಾ ವಿಗ್ರಹ ಮೂಕಾಂಬಿಕೆ ಹುಂಡಿಗೆ ಬಿದ್ದಿದೆ. ಆದರೆ, ದೇವಿಗೆ ಜಯಲಲಿತಾ ವಿಗ್ರಹ ಅರ್ಪಿಸಿದ ಭಕ್ತನಾರು ಅನ್ನುವುದು ಪತ್ತೆಯಾಗಿಲ್ಲ . ಬಹುಶಃ ಈ ಭಕ್ತನಿಗೆ ಪ್ರಚಾರ ಗಿಚಾರಗಳೆಂದರೆ ಅಸಡ್ಡೆಯಿರಬಹುದು.
ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಎಂ. ಜಿ. ರಾಮಚಂದ್ರನ್ ಅವರ ಚಿನ್ನದ ವಿಗ್ರಹ 1979ರಲ್ಲಿ ಮೂಕಾಂಬಿಕೆ ಹುಂಡಿಯಲ್ಲಿ ದೊರೆತಿತ್ತು. ಎಂ.ಜಿ. ಆರ್. ಪ್ರತಿವರ್ಷ ಜನವರಿ 14ರಂದು ತಮ್ಮ ಹುಟ್ಟುಹಬ್ಬ ಆಚರಣೆ ಪ್ರಯುಕ್ತ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದರು. 1975ರಲ್ಲಿ ಅವರು ದೇವಿಗೆ ಚಿನ್ನದ ಖಡ್ಗವೊಂದನ್ನು ಕಾಣಿಕೆಯಾಗಿ ನೀಡಿದ್ದರು. ಆನಂತರ ದೇವಳಕ್ಕೆ ಭೇಟಿ ನೀಡುವ ತಮಿಳು ಭಕ್ತರ ಸಂಖ್ಯೆಯೂ ಹೆಚ್ಚಾಗಿದೆ ಎಂದು ಅಲ್ಲಿನ ವಯೋವೃದ್ಧ ಅರ್ಚಕ ಮೂರ್ತಿ ಗಣೇಶ್ ಹೇಳುತ್ತಾರೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications