Get Updates
Get notified of breaking news, exclusive insights, and must-see stories!

ಮುಗ್ಧರ ಕಗ್ಗೊಲೆ ‘ಜೆಹಾದ್‌’ ಎಂದು ವೈಭವೀಕರಣ- ವಾಜಪೇಯಿ ಟೀಕೆ

ನವದೆಹಲಿ : ಆಗ್ರಾ ಶೃಂಗಸಭೆಯ ನಂತರ ಪ್ರಕ್ಷುಬ್ಧ ಕಾಶ್ಮೀರ ಕೊಳ್ಳದಲ್ಲಿ ಭಯೋತ್ಪಾದಕ ಕೃತ್ಯಗಳು ಹೆಚ್ಚಾಗುತ್ತಿರುವ ಬಗೆಗೆ ಭಾರತ ಮಂಗಳವಾರ(ಜುಲೈ 24) ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ.

ಮುಗ್ಧ ಪುರುಷ- ಮಹಿಳೆಯರು ಹಾಗೂ ಮಕ್ಕಳನ್ನು ಪ್ರತಿದಿನ ಕೊಲ್ಲುತ್ತಿದ್ದು , ಈ ಭಯೋತ್ಪಾದಕ ಕೃತ್ಯಗಳನ್ನು ಜೆಹಾದ್‌ ಎಂದು ವೈಭವೀಕರಿಸಲಾಗುತ್ತಿದೆ. ಇನ್ನೊಂದೆಡೆ ಭಾರತದೊಂದಿಗೆ ಶಾಂತಿಯ ಮಾತುಕತೆಗಳನ್ನು ಮುಂದುವರಿಸುವ ಮಾತುಗಳನ್ನೂ ಪಾಕಿಸ್ತಾನ ಆಡುತ್ತಿದೆ ಎಂದು ಪ್ರಧಾನಿ ವಾಜಪೇಯಿ ಉಭಯ ಸದನಗಳಲ್ಲಿ ಹೇಳಿದರು.

ಗಡಿ ಭಾಗದಲ್ಲಿನ ಭಯೋತ್ಪಾದಕತೆಯನ್ನು ಕೊನೆಗಾಣಿಸಲು ಪಾಕ್‌ ನಿರಾಕರಿಸಿರುವುದೇ ಉಪಖಂಡದಲ್ಲಿನ ಅಶಾಂತಿಗೆ ಕಾರಣವಾಗಿದೆ. ಈ ಎಲ್ಲ ಭಿನ್ನಮತಗಳಿದ್ದಾಗ್ಯೂ ಮಾತುಕತೆಗಳನ್ನು ಮುಂದುವರಿಸಲಾಗುವುದು ಎಂದು ಅವರು ಹೇಳಿದರು. ಆಗ್ರಾ ಶೃಂಗಸಭೆಯಲ್ಲಿ ಯಾವುದೇ ನಿಶ್ಚಿತ ಒಪ್ಪಂದಕ್ಕೆ ಬರಲು ಸಾಧ್ಯವಾಗದಿದ್ದರೂ ಪರಸ್ಪರ ಉಭಯತ್ರರು ಅರ್ಥೈಸಿಕೊಳ್ಳಲು ಶೃಂಗಸಭೆ ಕಾರಣವಾಯಿತು ಎಂದು ವಾಜಪೇಯಿ ಹೇಳಿದರು.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+