Get Updates
Get notified of breaking news, exclusive insights, and must-see stories!

ಕ್ರೋನಿಯೆ ಪಾಲಿಗಿನ್ನು ಕ್ರಿಕೆಟ್‌ ಇಲ್ಲವೇ ಇಲ್ಲ, ನೆರವಿಗೆ ಯಾರೂ ಇಲ್ಲ

Hansie Cronje will no more hold the batಡರ್ಬನ್‌ : ಕ್ರಿಕೆಟ್‌ ಮೋಸದಾಟ ಪ್ರಕರಣದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಆಜೀವ ನಿಷೇಧಕ್ಕೆ ಒಳಗಾಗಿರುವ ಹ್ಯಾನ್ಸಿ ಕ್ರೋನಿಯೆ ಅವರ ಶಿಕ್ಷೆಯನ್ನು ಖಚಿತ ಪಡಿಸುವ ಮೂಲಕ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿ ತನ್ನ ದೀರ್ಘ ಕಾಲದ ಮೌನವನ್ನು ಮುರಿದಿದೆ. ಇದರೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮತ್ತೊಮ್ಮೆ ಮಿಂಚುವ ಕ್ರೋನಿಯೆ ಅವರ ಎಲ್ಲ ಕನಸುಗಳು ಕೊನೆಗೊಂಡಿವೆ.

ಕ್ರೊನಿಯೆ ಅವರಿಗೆ ಕ್ಷಮೆ ಅಸಾಧ್ಯ ಎಂದು ಮಂಡಳಿಯ ಅಧ್ಯಕ್ಷ ಪರ್ಸಿ ಸನ್‌ ಮಂಗಳವಾರ ಪ್ರಕಟಿಸಿದರು. ಒಂದು ವೇಳೆ ಪ್ರಿಟೊರಿಯಾ ನ್ಯಾಯಾಲಯ ಕ್ರೋನಿಯೆ ಅವರ ಪರವಾಗಿ ತೀರ್ಪು ನೀಡಿದರೂ, ಕ್ರೋನಿಯೆ ಅವರ ಮೇಲೆ ಮತ್ತೊಮ್ಮೆ ಶಿಸ್ತು ಕ್ರಮವನ್ನು ಹೇರಲಾಗುವುದು ಎಂದು ಅವರು ಹೇಳಿದರು.

ಕಳೆದ 5 ವರ್ಷಗಳ ಅವಧಿಯಲ್ಲಿ 19 ಖಾತೆಗಳಲ್ಲಿ 120 ಡಿಪಾಸಿಟ್‌ಗಳನ್ನು ಕ್ರೋನಿಯೆ ನಮೂದಿಸಿದ್ದು , ಈ ಡಿಪಾಸಿಟ್‌ಗಳು 1.3 ಮಿಲಿಯನ್‌ ಡಾಲರ್‌ಗಳ ಮೌಲ್ಯವನ್ನು ಹೊಂದಿವೆ. ಆದರೆ, ಈ ಡಿಪಾಸಿಟ್‌ಗಳು ಅವರ ಸಂಬಳ ಅಥವಾ ಘೋಷಿತ ವರಮಾನದ ಪಟ್ಟಿಯಲ್ಲಿ ಸೇರ್ಪಡೆಯಾಗಿಲ್ಲ ಎನ್ನುವ ತನಿಖಾ ವರದಿ ಲಂಡನ್‌ನ ಸಂಡೇ ಟೈಮ್ಸ್‌ನಲ್ಲಿ ಪ್ರಕಟವಾದ ಬೆನ್ನಿಗೇ ಕ್ರಿಕೆಟ್‌ ಮಂಡಳಿಯ ತೀರ್ಮಾನ ಹೊರಬಿದ್ದಿದೆ.

ಸಂಡೆ ಟೈಮ್ಸ್‌ನಲ್ಲಿ ಪ್ರಕಟವಾಗಿರುವ ತನಿಖಾ ವರದಿಯ ಸತ್ಯಾಸತ್ಯತೆಯನ್ನು ತಳ್ಳಿಹಾಕಿರುವ ಕ್ರೋನಿಯೆ, ಅದೊಂದು ಬೇಜವಾಬ್ದಾರಿಯುತ ವರದಿ ಎಂದು ಬಣ್ಣಿಸಿದ್ದಾರೆ. ಈ ನಡುವೆ ಕ್ರೋನಿಯೆ ಅವರಿಗೆ ವಿಧಿಸಿರುವ ಜೀವಾವಧಿ ಶಿಕ್ಷೆಯನ್ನು ಮಂಡಳಿಯ ಹಲವಾರು ಮಾಜಿ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದು, ಕಾನೂನು ಹೋರಾಟದಲ್ಲಿ ಕೂಡ ಕ್ರೋನಿಯೆ ಗೆಲ್ಲುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

(ಏಜೆನ್ಸೀಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+