‘ವ್ಯಾಟ್’ ಅಳವಡಿಕೆಗೆ ಬ್ರಿಟನ್ ಸಂಸ್ಥೆಯಾಂದಿಗೆ ರಾಜ್ಯದ ಒಪ್ಪಂದ
ಬೆಂಗಳೂರು : ‘ಮೌಲ್ಯ ವರ್ಧಿತ ತೆರಿಗೆ’(ವಿಎಟಿ) ಪದ್ಧತಿಯನ್ನು ಅಳವಡಿಸಿಕೊಳ್ಳಲು ವಾಣಿಜ್ಯ ತೆರಿಗೆ ವಿಭಾಗಕ್ಕೆ ತರಬೇತಿ ನೀಡುವುದಕ್ಕಾಗಿ ಬ್ರಿಟನ್ ಮೂಲದ ಅಭಿವೃದ್ಧಿ ಸಹಕಾರಿ ಸಂಸ್ಥೆ ‘ಕ್ರೌನ್ ಏಜೆಂಟ್ಸ್’(ಸಿಎ) ಜೊತೆ 20 ಕೋಟಿ ರೂಪಾಯಿಯ ಒಪ್ಪಂದ ಮಾಡಿಕೊಳ್ಳಲು ರಾಜ್ಯ ಸರಕಾರ ನಿಶ್ಚಯಿಸಿದೆ.
ಕೇಂದ್ರದ ಅನುಮತಿ ಸಿಕ್ಕಿದ ತಕ್ಷಣವೇ ‘ಸಿಎ’ ಸಂಸ್ಥೆಯ ಪ್ರತಿನಿಧಿಗಳ ಸಮ್ಮುಖದಲ್ಲಿ ಒಂದು ವರ್ಷ ಅವಧಿಯ ಈ ಒಡಂಬಡಿಕೆ ಪತ್ರಕ್ಕೆ ರಾಜ್ಯ ಸರಕಾರ ಸಹಿ ಹಾಕಲಿದೆ ಎಂದು ವಾಣಿಜ್ಯ ತೆರಿಗೆ ಆಯುಕ್ತ ವಿ. ಮಧು ಹೇಳಿದ್ದಾರೆ. ಕರ್ನಾಟಕ- ದೇಶದಲ್ಲಿಯೇ ಮೌಲ್ಯ ವರ್ಧಿತ ತೆರಿಗೆ ನೀತಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಸಂಸ್ಥೆಯಾಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿರುವ ಪ್ರಥಮ ರಾಜ್ಯ ಎನಿಸಿಕೊಂಡಿದೆ.
ಅಂತರರಾಷ್ಟ್ರೀಯ ವ್ಯಾಪಾರ ಕ್ಷೇತ್ರದಲ್ಲಿ ‘ಸಿಎ’ ಸಂಸ್ಥೆಯು ವಿಶೇಷ ತಜ್ಞರಿಂದ, ಕೊಳ್ಳುವಿಕೆ, ಆರ್ಥಿಕತೆ ಮತ್ತು ಸಂಸ್ಥೆಗಳ ಬೆಳವಣಿಗೆ ಬಗ್ಗೆ ತರಬೇತಿ ನೀಡುತ್ತದೆ. ಸುಮಾರು 6 ಬಿಲಿಯನ್ ಡಾಲರ್ ವಾರ್ಷಿಕ ವ್ಯವಹಾರ ನಡೆಸುವ ಸಂಸ್ಥೆಯ ತರಬೇತಿಯು ವಿದೇಶದಲ್ಲಿ ಅಧ್ಯಯನವನ್ನೂ ಒಳಗೊಂಡಿದೆ.
ಬ್ರಿಟನ್‌ನಲ್ಲಿ 15 ವರ್ಷಗಳಿಗೂ ಹಿಂದೆ ವಿಎಟಿ ಪದ್ಧತಿ ಜಾರಿಗೆ ಬಂದಿರುವುದರಿಂದ ಅಲ್ಲಿನ ಸಂಸ್ಥೆ ನಮಗೆ ವಿವರವಾಗಿ ಮಾರ್ಗದರ್ಶನ ಮಾಡಬಲ್ಲುದು ಎಂಬ ನಂಬಿಕೆಯಿಂದ ‘ಸಿಎ’ ಸಂಸ್ಥೆಯನ್ನು ಸಂಪರ್ಕಿಸಿದ್ದೇವೆ ಎಂದು ಮಧು ಹೇಳಿದ್ದಾರೆ. ಸಿಎಯಿಂದ ವಿವಿಧ ಹಂತದಲ್ಲಿ ಸುಮಾರು 1,000 ತರಬೇತಿ ಗೋಷ್ಠಿಗಳು ನಡೆಯಲಿವೆ. ತರಬೇತಿಯ ಹೊರತಾಗಿ ‘ಸಿಎ’ ಯು ವಿಎಟಿ ನೀತಿ ಅಳವಡಿಕೆಯಿಂದಾಗುವ ಋಣಾತ್ಮಕ ಪರಿಣಾಮಗಳನ್ನು ಸರಿಪಡಿಸುವ ಕುರಿತೂ ಸಲಹೆ ನೀಡುವುದು.
ಮೌಲ್ಯ ವರ್ಧಿತ ತೆರಿಗೆ ನೀತಿ ಅಳವಡಿಸಿಕೊಳ್ಳಲು ಪ್ರಥಮ ಬಾರಿಗೆ ರಾಜ್ಯ ಸರಕಾರವು ಅಂತರರಾಷ್ಟ್ರೀಯ ಹಣಕಾಸು ವ್ಯವಹಾರ ವಿಭಾಗದ ಉಪ ನಿರ್ದೇಶಕ ವೇದ ಗಾಂಧಿ ಅವರನ್ನು ಸಲಹಾ ಆರ್ಥಿಕ ತಜ್ಞರನ್ನಾಗಿ ನೇಮಿಸಿಕೊಂಡಿದೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications