ಪಾಕ್ ಭೇಟಿ: ವಾಜಪೇಯಿ- ಜಸ್ವಂತ್ಗೆ ಔಪಚಾರಿಕ ಆಹ್ವಾನಪತ್ರ
ಇಸ್ಲಮಾಬಾದ್ : ಆಗ್ರಾ ಶೃಂಗಸಭೆಯ ಮಾತುಕತೆಗಳನ್ನು ಮುಂದುವರಿಸುವ ಉದ್ದೇಶದಿಂದ ಭಾರತದ ಪ್ರಧಾನಿ ವಾಜಪೇಯಿ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವ ಜಸ್ವಂತ್ ಸಿಂಗ್ ಅವರಿಗೆ ಸೋಮವಾರ ಔಪಚಾರಿಕ ಆಹ್ವಾನ ಕಳುಹಿಸುವ ಮೂಲಕ ಮಾತುಕತೆಗಳನ್ನು ಮುಂದುವರಿಸುವ ತನ್ನ ಆಸಕ್ತಿಯನ್ನು ಪಾಕಿಸ್ತಾನ ಪುನಃ ವ್ಯಕ್ತಪಡಿಸಿದೆ.
ಕಾಶ್ಮೀರ ಸೇರಿದಂತೆ ಎಲ್ಲ ವಿಷಯಗಳಲ್ಲೂ ಒಮ್ಮತಕ್ಕೆ ಬರಲು ಸಾಧ್ಯವಾಗುವಂತೆ ಚರ್ಚೆಗಳನ್ನು ಮುಂದುವರಿಸಲು ಉಭಯ ನಾಯಕರು ತಮಗೆ ಅನುಕೂಲ ದಿನಾಂಕಗಳಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡುವಂತೆ ಪ್ರತ್ಯೇಕ ಆಹ್ವಾನ ಪತ್ರಗಳನ್ನು ಪಾಕ್ ಸರ್ಕಾರ ಶನಿವಾರವೇ ಕಳುಹಿಸಿದೆ ಎಂದು ಪಾಕ್ ದೈನಿಕ ‘ದಿ ನೇಷನ್ ವರದಿ’ ಮಾಡಿದೆ.
ವಾಜಪೇಯಿ ಅವರಿಗೆ ಸ್ವತಃ ಪಾಕ್ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಅವರು ಆಹ್ವಾನವನ್ನು ಕಳುಹಿಸಿದ್ದರೆ, ಜಸ್ವಂತ್ ಸಿಂಗ್ ಅವರಿಗೆ ಕಳುಹಿಸಿರುವ ಆಹ್ವಾನ ಪತ್ರಕ್ಕೆ ಪಾಕ್ ವಿದೇಶಾಂಗ ವ್ಯವಹಾರಗಳ ಸಚಿವ ಅಬ್ದುಲ್ ಸತ್ತಾರ್ ಸಹಿ ಹಾಕಿದ್ದಾರೆ ಎಂದು ಹೇಳಿರುವ ಪತ್ರಿಕೆಯ ವರದಿ, ಈ ಆಹ್ವಾನವನ್ನು ಶಾಂತಿಯ ಬಗೆಗೆ ಪಾಕಿಸ್ತಾನಕ್ಕಿರುವ ಕಾತರ ಎಂದು ಬಣ್ಣಿಸಿದೆ. ಈ ಮುನ್ನ ಆಗ್ರಾ ಶೃಂಗಸಭೆ ಸಂದರ್ಭದಲ್ಲಿ ಪಾಕ್ ಭೇಟಿಗೆ ಮುಷರ್ರಫ್ ಅವರು ನೀಡಿದ್ದ ಆಹ್ವಾನವನ್ನು ಪ್ರಧಾನಿ ವಾಜಪೇಯಿ ಒಪ್ಪಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
(ಏಜೆನ್ಸೀಸ್)
ಮುಖಪುಟ / ಆಗ್ರಾ ಶೃಂಗಸಭೆ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications